ಹಾಲು ಡೇರಿ ಕಾರ್ಯದರ್ಶಿಗಳ ಬೇಡಿಕೆಗಳ ಈಡೇರಿಕೆಗಾಗಿ ಕೋಮುಲ್ ಎಂಡಿಗೆ ಮನವಿ
ಹಾಲು ಡೇರಿ ಕಾರ್ಯದರ್ಶಿಗಳ ಬೇಡಿಕೆಗಳ ಈಡೇರಿಕೆಗಾಗಿ ಕೋಮುಲ್ ಎಂಡಿಗೆ ಮನವಿ
ಚಿತ್ರ ; ಪ್ರಾಥಮಿಕ ಹಾಲು ಸಂಘಗಳ ಸಿಬ್ಬಂದಿಯ ನೌಕರರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮಂಗಳವಾರ ಕೋಲಾರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಕೋಮುಲ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿಗೆ ನವಿ ಸಲ್ಲಿಸಿದರು.


ಚಿತ್ರ ; ಪ್ರಾಥಮಿಕ ಹಾಲು ಸಂಘಗಳ ಸಿಬ್ಬಂದಿಯ ನೌಕರರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮಂಗಳವಾರ ಕೋಲಾರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಕೋಮುಲ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿಗೆ ನವಿ ಸಲ್ಲಿಸಿದರು.


ಕೋಲಾರ, ೧೬ ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಪ್ರಾಥಮಿಕ ಹಾಲು ಸಂಘಗಳ ಸಿಬ್ಬಂದಿಯ ವಯೋನಿವೃತ್ತಿಗೆ ೫ ಲಕ್ಷ ಸೇರಿದಂತೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮಂಗಳವಾರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಕೋಮುಲ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಸಂಘದ ಜಿಲ್ಲಾ ಅಧ್ಯಕ್ಷ ವಿಟ್ಟಪ್ಪನಹಳ್ಳಿ ಡೇರಿ ವೆಂಕಟೇಶ್ ಮಾತನಾಡಿ ಕೋಮುಲ್ ಒಕ್ಕೂಟವು ಕಡ್ಡಾಯವಾಗಿ ಸಂಘಗಳ ಮೇಲೆ ಒತ್ತಡ ತಂದು ಏಕರೂಪ ತಂತ್ರಾಂಶವನ್ನು ( ಕಾಮನ್) ಸಾಫ್ಟವೇರ್ ಅಳವಡಿಸಲು ಸೂಚನೆ ನೀಡಿದ್ದು ಇದರಿಂದಾಗಿ ಸಿಬ್ಬಂದಿಗೆ ಕೆಲಸದ ಒತ್ತಡವು ಹೆಚ್ಚಾಗಿದೆ ಸಿಬ್ಬಂದಿಗೆ ಪ್ರತಿ ಲೀಟರ್ ಗೆ ೩೦ ಪೈಸೆ ನೀಡಲಾಗುತ್ತಿದೆ ಕನಿಷ್ಠ ೬೦ ಪೈಸೆಗೆ ಹೆಚ್ಚಳ ಮಾಡಬೇಕು ಇಲ್ಲದೆ ಹೋದರೆ ಜಿಲ್ಲೆಯ ಎಲ್ಲಾ ಡೇರಿಗಳ ಕಾರ್ಯದರ್ಶಿಗಳು ಕಾಮನ್ ಸಾಫ್ಟವೇರ್ ಅಳವಡಿಸದೆ ಇರಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಪ್ರತಿ ಸಂಘಗಳಲ್ಲಿ ಜಿಡ್ಡಿನಾಂಶದ ಆಧಾರದಲ್ಲಿ ಉತ್ಪಾದಕರಿಗೆ ದರ ನೀಡಲು ತೀರ್ಮಾನಿಸಲಾಗಿದೆ ಇದರಿಂದಾಗಿ ಸಂಘ ನಿರ್ವಹಣೆಗೆ ಹಾಗೂ ಸಿಬ್ಬಂದಿ ವೇತನಕ್ಕೆ ತೊಂದರೆಯಾಗಿದೆ ಸಂಘದ ಆರ್ಥಿಕ ನಷ್ಟ ಸರಿದೂಗಿಸಲು ಲೀಟರ್ ಗೆ ೮೦ ಪೈಸೆ ಬದಲಿಗೆ ೧ ರೂಪಾಯಿ ನೀಡಬೇಕು, ಅಕಾಲಿಕವಾಗಿ ಮರಣ ಹೊಂದಿದ ಸಿಬ್ಬಂದಿಗೆ ಜೇಷ್ಠತಾ ಆಧಾರದಲ್ಲಿ ವಯೋನಿವೃತ್ತಿ ಹಣ ನೀಡುವ ಮೂಲಕ ನೌಕರರ ಹಿತ ಕಾಪಾಡುವ ಕೆಲಸವನ್ನು ಒಕ್ಕೂಟ ಮಾಡಬೇಕಾಗಿದೆ ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಗಲಹಳ್ಳಿ ನಾಗೇಶ್ ಗೌಡ ಮಾತನಾಡಿ ಒಕ್ಕೂಟದ ವ್ಯಾಪ್ತಿಯಲ್ಲಿನ ಬಿಎಂಸಿ ಕೇಂದ್ರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ತಿಂಗಳಿಗೆ ೩೩೦೦ ರೂ ನೀಡುತ್ತಿದ್ದು ಬೇರೆ ಬೇರೆ ಒಕ್ಕೂಟಗಳ ಮಾದರಿಯಂತೆ ನಮ್ಮ ಒಕ್ಕೂಟದಲ್ಲಿ ಕನಿಷ್ಠ ೬೦೦೦ ರೂಗಳ ಪೋತ್ಸಾಹ ಧನ ನೀಡಬೇಕು ಜೊತೆಗೆ ಹಾಲಿನ ಕ್ಯಾನುಗಳ ಶುಚಿತ್ವಕ್ಕೆ ಕೇವಲ ೨ ಪೈಸೆ ನೀಡುತ್ತಿದ್ದು ಕನಿಷ್ಠ ೧೦ ಪೈಸೆ ನೀಡಬೇಕು ಕಾಲಕಾಲಕ್ಕೆ ಬರುವ ಸಿಬ್ಬಂದಿ ಸಮಸ್ಯೆಗಳನ್ನು ನಿರ್ಲಕ್ಷ್ಯ ತೋರದೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಕೋಮುಲ್ ಎಂಡಿ ಗೋಪಾಲಮೂರ್ತಿ ಸಿಬ್ಬಂದಿಗಳ ಬೇಡಿಕೆಗಳನ್ನು ನನ್ನ ಕಡೆಯಿಂದ ಸಾಧ್ಯವಾಗುವುದನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಉಳಿದಿದ್ದನ್ನು ಆಡಳಿತ ಮಂಡಳಿಯ ಗಮನಕ್ಕೆ ತರಲಾಗುತ್ತದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಚಿನ್ನಹಳ್ಳಿ ಗೋಪಾಲ್, ಉಪಾಧ್ಯಕ್ಷ ಮಿಂಡಹಳ್ಳಿ ಮುನಿರಾಜು, ಖಜಾಂಚಿ ವಕ್ಕಲೇರಿ ನಾಗರಾಜ್, ತಾಲೂಕು ಅಧ್ಯಕ್ಷ ತೊಂಡಾಲ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಸಿ.ತಿಮ್ಮೇಗೌಡ, ಉಪಾಧ್ಯಕ್ಷ ಗಂಗಾಪುರ ಬಾಬು ಪದಾಧಿಕಾರಿಗಳಾದ ಎಂ.ಹೊಸಹಳ್ಳಿ ಮೋಹನ್, ಪುರಹಳ್ಳಿ ದೇವರಾಜ್, ಮಂಚಂಡಹಳ್ಳಿ ರಮೇಶ್, ಮೈಲಾಂಡಹಳ್ಳಿ ಶ್ರೀರಾಮ್, ವಿಜಯಕುಮಾರ್, ಅಲಹಳ್ಳಿ ಮಂಜುನಾಥ್, ಮುಂತಾದವರು ಇದ್ದರು.

ಚಿತ್ರ ; ಪ್ರಾಥಮಿಕ ಹಾಲು ಸಂಘಗಳ ಸಿಬ್ಬಂದಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮಂಗಳವಾರ ಕೋಲಾರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಕೋಮುಲ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿಗೆ ಮನವಿ ಸಲ್ಲಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande