ದುಗನೂರಿನ ಸರ್ಕಾರಿ ಮಾದರಿ ಶಾಲೆಗೆ ಕೃಷಿ ವಿಜ್ಞಾನಿಗಳ ತಂಡ ಭೇಟಿ
ರಾಯಚೂರು, 16 ಡಿಸೆಂಬರ್ (ಹಿ.ಸ.) : ಆ್ಯಂಕರ್ : ರಾಯಚೂರು ತಾಲ್ಲೂಕಿನ ದುಗನೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚಿಗೆ ಕೃಷಿ ವಿಜ್ಞಾನಿಗಳ ತಂಡ ಭೇಟಿ ನೀಡಿ, ಮಕ್ಕಳಿಗೆ ಪೌಷ್ಟಿಕ ತೋಟದ ಮಹತ್ವದ ಕುರಿತು ಬೇಸಾಯಿ ಶಾಸ್ತ್ರ ವಿಭಾಗದ ವಿಜ್ಞಾನಿ ಡಾ.ಮಲ್ಲರೆಡ್ಡಿ ಅವರು ತಿಳಿಸಿದರು.
ದುಗನೂರಿನ ಸರ್ಕಾರಿ ಮಾದರಿ   ಶಾಲೆಗೆ ಕೃಷಿ ವಿಜ್ಞಾನಿಗಳ ತಂಡ ಭೇಟಿ


ರಾಯಚೂರು, 16 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ರಾಯಚೂರು ತಾಲ್ಲೂಕಿನ ದುಗನೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚಿಗೆ ಕೃಷಿ ವಿಜ್ಞಾನಿಗಳ ತಂಡ ಭೇಟಿ ನೀಡಿ, ಮಕ್ಕಳಿಗೆ ಪೌಷ್ಟಿಕ ತೋಟದ ಮಹತ್ವದ ಕುರಿತು ಬೇಸಾಯಿ ಶಾಸ್ತ್ರ ವಿಭಾಗದ ವಿಜ್ಞಾನಿ ಡಾ.ಮಲ್ಲರೆಡ್ಡಿ ಅವರು ತಿಳಿಸಿದರು.

ಮನುಷ್ಯನ ಜೀವನಕ್ಕೆ ಬಹಳ ಮುಖ್ಯವಾದುದ್ದು, ಆರೋಗ್ಯ ಇದರ ರಕ್ಷಣೆ ಪೌಷ್ಟಿಕ ಆಹಾರದಿಂದ ಸಾದ್ಯ ಹಾಗಾಗಿ ಪೌಷ್ಟಿಕ ತೋಟ ಬೆಳಸುವುದು ಬಹಳ ಪ್ರಮುಖವಾಗಿದೆ.

ಈ ವೇಳೆ ಹಿರಿಯ ಕೃಷಿ ವಿಜ್ಞಾನಿಗಳಾದ ಡಾ.ಹೇಮಲತಾ ಅವರು ಮಕ್ಕಳಿಗೆ ತೋಟದ ತಯಾರಿ ಹೇಗೆ ಮಾಡಿಕೊಳ್ಳಬೇಕು ಎಂದು ಪ್ರಾತ್ಯಕ್ಷೆಯನ್ನು ಮಾಡಿ ಮಾರ್ಗದರ್ಶನ ಮಾಡಿದರು.

ಈ ವೇಳೆ ಕೀಟಶಾಸ್ತ್ರದ ವಿಜ್ಞಾನಿಗಳಾದ ಡಾ.ಶ್ರೀವಾಣಿ ಅವರು ಕೀಟಗಳ ಕುರಿತು ಅದರಲ್ಲಿ ವಿಶೇಷವಾಗಿ ಜೇನಿನ ಹುಳುಗಳ ಮಾಹಿತಿಯನ್ನು ನೀಡಿ ಮಕ್ಕಳಿಗೆ, ಮಕರಂದ ಎಲ್ಲಿ ಇರುತ್ತೆ, ಜೇನು ನೊಣ ಮಕರಂದವನ್ನು ಯಾವ ವಿಧದಲ್ಲಿ ಹುಡುಕುತ್ತವೆ ಎಂದು ಚಟುವಟಿಕೆ ಮೂಲಕ ವಿವರಿಸಿದರು.

ಈ ವೇಳೆ ಆಹಾರ ಸಂಸ್ಕರಣೆ ವಿಭಾಗದ ವಿಜ್ಞಾನಿಗಳಾದ ಡಾ.ವೀಣಾ ಅವರು ಶುದ್ಧ ಮತ್ತು ಸಂಸ್ಕರಣೆಯ ಆಹಾರ ನಿತ್ಯ ಜೀವನಕ್ಕೆ ಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳಾದ ಗಫೂರ್, ಸಹಶಿಕ್ಷಕರಾದ ಚಂದ್ರಶೇಖರ್ ನಾಯ್ಕ್. ಸಂಪತರಾಜ್,ಪುಲಿ ಅಂಜಿನೇಯ್ಯ, ಮಲ್ಲೇಶ, ನರೇಶ ಕುಮಾರ್, ನವೀನ್ ಕುಮಾತ್, ಮಹೇಶ ಕುಮಾರ್ ಸೇರಿದಂತೆ ಇತರರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande