ಕಾನೂನು ಸಚಿವರ ಮಗನಿಂದ ಕಾನೂನು ಉಲ್ಲಂಘನೆ : ಬೂದಪ್ಪ ಹಳ್ಳಿ
ಗದಗ, 15 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕುಟುಂಬ ರಾಜಕಾರಣ ಬಲವಾಗುತ್ತಿದ್ದು, ಆಡಳಿತಾತ್ಮಕ ಪದ್ಧತಿ ಕಣ್ಣುಮುಚ್ಚಿರುವ ಚಿತ್ರ ಅನಾವರಣವಾಗುತ್ತಿದೆ ಎಂದು ಬಿಜೆಪಿ ಗದಗ ಗ್ರಾಮೀಣ ಮಂಡಲ ಅಧ್ಯಕ್ಷ ಬೂದಪ್ಪ ಹಳ್ಳಿ ರವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ
ಫೋಟೋ


ಗದಗ, 15 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕುಟುಂಬ ರಾಜಕಾರಣ ಬಲವಾಗುತ್ತಿದ್ದು, ಆಡಳಿತಾತ್ಮಕ ಪದ್ಧತಿ ಕಣ್ಣುಮುಚ್ಚಿರುವ ಚಿತ್ರ ಅನಾವರಣವಾಗುತ್ತಿದೆ ಎಂದು ಬಿಜೆಪಿ ಗದಗ ಗ್ರಾಮೀಣ ಮಂಡಲ ಅಧ್ಯಕ್ಷ ಬೂದಪ್ಪ ಹಳ್ಳಿ ರವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರಿಂದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ಸಾರ್ವಜನಿಕ ಕಾಮಗಾರಿಗಳಲ್ಲಿ ಸಚಿವರು, ಶಾಸಕರ ಮಕ್ಕಳೆ ಭೂಮಿ ಪೂಜೆ, ಉದ್ಘಾಟನೆ, ಭಾಷಣ ಎಲ್ಲವನ್ನೂ ಮಾಡುತ್ತಿರುವ ದೃಶ್ಯ ಇಂದು ಜಗಜ್ಜಾಹೀರುವಾಗಿದೆ. ಈ ಕಾರ್ಯಗಳಿಗೆ ಅವರಿಗೆ ಯಾವುದೇ ಕಾನೂನುಬದ್ಧ ಅಧಿಕಾರವಿಲ್ಲ ಎಂಬುದು ಜನರಿಗೆ, ಅಧಿಕಾರಿಗಳಿಗೆ, ರಾಜಕೀಯ ನಾಯಕರಿಗೂ ತಿಳಿಯದ ವಿಷಯವೇನಲ್ಲ. ಸಂವಿಧಾನಗಳ ಕಾಯ್ದೆಗೆ ಸವಾಲಾಗಿ ಜಿಲ್ಲೆಯ ರಾಜಕೀಯವನ್ನೇ ಕದಡುವ ವಿಷಯವಾಗಿ ಪರಿಣಮಿಸಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಎಲ್ಲಾ ಸಾರ್ವಜನಿಕ ಕಾಮಗಾರಿಗಳ ಜವಾಬ್ದಾರಿ ಆಯ್ಕೆಯಾದ ಸದಸ್ಯರು ಹಾಗು ಅಧಿಕಾರಿಗಳಿಗೆ ಮಾತ್ರ ಇರಬೇಕು ಆದರೆ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲರು ತಮ್ಮ ಮಗನಿಂದ ಕಳಸಾಪೂರ ಗ್ರಾಮದಿಂದ ಅಡವಿಸೊಮಾಪೂರ ಗ್ರಾಮದವರೆಗೆ ರಸ್ತೆ ಕಾಮಗಾರಿ ಹಾಗು ಹಲವಾರು ಕಾರ್ಯಕ್ರಮಗಳ ಭೂಮಿ ಪೂಜೆ ಮಾಡಿಸುತ್ತಿರುವದು ಅವರಿಗೆ ಸಚಿವ ಸ್ಥಾನ ಹಾಗು ಶಾಸಕರ ಸ್ಥಾನ ನಿಭಾಯಿಸಲು ಆಗುತ್ತಿಲ್ಲವೋ ಎಂಬ ಸಂಶಯ ಉದ್ಭವಿಸಿದೆ.

ಜಿಲ್ಲೆಯಲ್ಲಿ ನಡೆಯುತ್ತಿರುವ ದೃಶ್ಯಗಳು ಜನಪ್ರತಿನಿಗಳ ಮನೆಯವರನ್ನು ಸಹ ಆಯ್ಕೆಯಾದ ಜನಪ್ರತಿನಿಧಿಗಳೆಂಬಂತೆ ತೋರಿಸುವಂತಿವೆ. ಫಲಕಗಳ ಮೇಲೆ ಅವರ ಹೆಸರನ್ನು ಬರಿಸುವುದು, ವೇದಿಕೆಯಲ್ಲಿ ಮುಖ್ಯ ಸ್ಥಾನ, ಭೂಮಿಪೂಜೆ ಮಾಡುವ ಹಕ್ಕು ಎಲ್ಲವು ಸಾರ್ವಜನಿಕ ಹಣದಿಂದ ನಡೆಯುವ ಕೆಲಸಗಳು. ಇದರಿಂದಾಗಿ ಜನಪ್ರತಿನಿಧಿಗಳ ಗೈರಿನಲ್ಲಿ ಅವರ ಮಕ್ಕಳು ವೇದಿಕೆಯಲ್ಲಿ ಕಾಣಿಸುತ್ತಾರೆ. ಇದು ರಾಜಕೀಯದ ನೈತಿಕ ಮೌಲ್ಯಗಳ ಕುಸಿತವಾಗಿದೆ.

ಜಿಲ್ಲೆಯಲ್ಲಿ ಕಾಯ್ದೆಗಳನ್ನು ಉಲ್ಲಂಘಿಸುತ್ತಲೇ ಕಾರ್ಯಕ್ರಮಗಳು ನಡೆಯುತ್ತಿವೆ. ಅಧಿಕಾರಿಗಳು ತಿಳಿದಿದ್ದರೂ ಮೌನವಾಗಿದ್ದಾರೆ. ಯಾರ ವಿರುದ್ಧ ಕ್ರಮ ಕೈಗೊಳ್ಳಲು ಭಯ, ಸಚಿವರ ಮಗ, ಶಾಸಕರ ಮಗ ಎಂದರೆ ಕಾನೂನು ಅನ್ವಯಿಸುವದಿಲ್ಲವೇ? ಕಾನೂನು ಅವರಿಗೆ ಹೊರತಾಗಿಲ್ಲ. ಈ ಮೌನವೇ ಜಿಲ್ಲೆಯ ಆಡಳಿತದ ಪತನಕ್ಕೆ ಸಾಕ್ಷಿ ಆಗುತ್ತಿದೆ. ಸಾರ್ವಜನಿಕರ ಕಾಮಗಾರಿ ಆರಂಭ, ಸರಕಾರಿ ಸಮಾರಂಭಗಳಲ್ಲಿ ಜನಪ್ರತಿನಿಧಿಗಳಲ್ಲದವರು ಚಾಲನೆ ನೀಡುವುದನ್ನು ತಡೆಯುವ ಅಧಿಕಾರ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳು, ಪಂಚಾಯಿತಿ ಮುಖ್ಯಸ್ಥರಿಗಿದೆ ಆದರೆ ಜಿಲ್ಲಾ ಆಡಳಿತದವರೆ ಸುಮ್ಮನೆ ಕುಳಿತಿರುವುದು ದುರ್ದೈವದ ಸಂಗತಿ ಎಂದು ಬೂದಪ್ಪ ಹಳ್ಳಿರವರು ಸಚಿವರ ಮಗನಿಂದ ಭೂಮಿ ಪೂಜೆ ಮಾಡಿದ್ದನ್ನು ಖಂಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande