ಮೌಲಾನಾ ಆಜಾದ್ ಪಬ್ಲಿಕ್ ಸ್ಕೂಲ್ ಎಲ್‌ಕೆಜಿ ಆರಂಭ
ಮೌಲಾನಾ ಆಜಾದ್ ಪಬ್ಲಿಕ್ ಸ್ಕೂಲ್ ಎಲ್‌ಕೆಜಿ ಆರಂಭ
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಮೌಲಾನಾ ಆಜಾದ್ ಪಬ್ಲಿಕ್ ಶಾಲೆಯಲ್ಲಿ ಎಲ್.ಕೆ.ಜಿ. ತರಗತಿ ಆರಂಭಗೊ0ಡಿದೆ.


ಕೋಲಾರ, ೧೫ ಡಿಸೆಂಬರ್ (ಹಿ.ಸ) :

ಆ್ಯಂಕರ್ : ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನಡೆಸುತ್ತಿರುವ ಕರ್ನಾಟಕ ಮೌಲಾನಾ ಆಜಾದ್ ಪಬ್ಲಿಕ್ ಶಾಲೆ ಎಲ್‌ಕೆಜಿ ತರಗತಿಯನ್ನು ಪ್ರಾರಂಭಿಸಿದ್ದು, ಈಗಾಗಲೇ ೩೦ಕ್ಕೂ ಹೆಚ್ಚು ಮಕ್ಕಳು ದಾಖಲಾಗಿದ್ದು, ಶಾಲೆಗೆ ಹೊಸ ಚೈತನ್ಯ ತುಂಬಿದೆ. ಹೊಸ ಶೈಕ್ಷಣಿಕ ವರ್ಷಕ್ಕೆ ಮಾಡಿದ ಈ ಪ್ರಾರಂಭವು ಮಕ್ಕಳಿಗಾಗಿ ಒಂದು ಹೊಸ ಪ್ರೇರಣೆಯಾದಂತಾಗಿದೆ.

ಎಲ್‌ಕೆಜಿ ತರಗತಿಯ ಆರಂಭದೊ0ದಿಗೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಮಕ್ಕಳಿಗೆ ಉಚಿತ ಯೂನಿಫಾರ್ಮ್ಗಳು, ಶಾಲಾ ಬ್ಯಾಗ್‌ಗಳು, ಶೂಸ್, ಪಠ್ಯಪುಸ್ತಕಗಳು ಹಾಗೂ ಲೇಖನಿ ಸಾಮಗ್ರಿಗಳನ್ನು ವಿತರಿಸಿ, ಮಕ್ಕಳ ಉತ್ಸಾಹವನ್ನು ಹೆಚ್ಚಿಸಿದೆ. ಈ ಉಚಿತ ಶಿಕ್ಷಣ ಸಾಮಗ್ರಿಗಳು ಪೋಷಕರು ಮತ್ತು ಮಕ್ಕಳಲ್ಲಿ ಸಂತೋಷ ಹಾಗೂ ವಿಶ್ವಾಸದ ವಾತಾವರಣವನ್ನು ನಿರ್ಮಿಸಿದ್ದು, ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೇರಣೆ ನೀಡಿದೆ.

ವಿತರಣೆ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಅರುಣಾ ವಿ ಬಿ , ಮಾತನಾಡಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಶಿಕ್ಷಣ ವಿಸ್ತರಣೆಗೆ ಶ್ರಮಿಸುತ್ತಿದ್ದು, ಮೌಲಾನಾ ಆಜಾದ್ ಶಾಲೆಯಲ್ಲಿ ಮಕ್ಕಳಿಗೆ ಸಂಪೂರ್ಣ ಉಚಿತ ಸೌಲಭ್ಯಗಳನ್ನು ಒದಗಿಸಿದೆ. ಸರ್ಕಾರದ ಗುರಿ ಪ್ರತಿಯೊಂದು ಮಗು ಶಿಕ್ಷಣ ಪಡೆಯಬೇಕು ಮತ್ತು ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕು.

ಐಎಎಸ್, ಐಪಿಎಸ್, ಸಿಎ, ಐಎಫ್‌ಎಸ್, ವೈದ್ಯರು, ಎಂಜಿನಿಯರ್‌ಗಳು, ವಿಜ್ಞಾನಿಗಳು, ವಕೀಲರು, ಶಿಕ್ಷಕರು. ಸೇರಿದಂತೆ ಉನ್ನತ ಹುದ್ದೆಗಳಿಗೆ ಏರಲು ಶಿಕ್ಷಣವೇ ಸರಿಯಾದ ದಾರಿ. ನಮ್ಮ ಪ್ರಯತ್ನ ಇದಕ್ಕೆ ದಾರಿ ಸಿಗುವಂತೆ ಮಾಡುವುದು ಎಂದರು.

ಅರುಣಾ ವಿ ಬಿ ಅವರು ಮುಂದುವರಿದು ಹೇಳಿದರು ಪೋಷಕರು ತಮ್ಮ ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ ನೀಡಲು ಪ್ರೋತ್ಸಾಹಿಸಬೇಕು. ಮಕ್ಕಳ ಬೆಳವಣಿಗೆಗೆ ಮನೆಯಿಂದ ಹಾಗೂ ಶಾಲೆಯಿಂದ ಸಮಾನ ಸಹಕಾರ ದೊರೆಯಬೇಕು. ಮುಂದಿನ ದಿನಗಳಲ್ಲಿ ಈ ಶಾಲೆಯಲ್ಲಿ ಪಿಯುಸಿ ತರಗತಿಗಳ ಪ್ರಾರಂಭಕ್ಕೂ ಸರ್ಕಾರ ಹಾಗೂ ಇಲಾಖೆಯ ಸಹಕಾರ ದೊರೆಯುವ ನಿರೀಕ್ಷೆ ಇದೆ. ಇದು ಶಾಲೆಯ ಶೈಕ್ಷಣಿಕ ಹಾದಿಯನ್ನು ಮತ್ತಷ್ಟು ಬಲಪಡಿಸುತ್ತದೆ.

ಎಲ್‌ಕೆಜಿ ತರಗತಿಯ ಶಿಕ್ಷಕಿ ಶಾಜಿಯಾ ಮಕ್ಕಳ ಪೋಷಕರಿಗೆ ಸಲಹೆ ನೀಡುತ್ತಾ ಹೇಳಿದರು, ಪೋಷಕರು ಮಕ್ಕಳಿಗೆ ನೀಡಿರುವ ಯೂನಿಫಾರ್ಮ್ಗಳನ್ನು ಪ್ರತಿದಿನ ಧರಿಸಿ ಶಾಲೆಗೆ ಕಳುಹಿಸುವುದು ಕಡ್ಡಾಯ. ಮಕ್ಕಳ ಶುಚಿತ್ವ, ನಿಯಮಿತ ಹಾಜರಾತಿ ಹಾಗೂ ವಿದ್ಯಾಭ್ಯಾಸ ಎರಡಕ್ಕೂ ಪೋಷಕರು ಹೆಚ್ಚಿನ ಗಮನ ಕೊಡಬೇಕು. ಶಾಲೆ ಮನೆ ಸಹಕಾರವೇ ಮಕ್ಕಳ ಸಮಗ್ರ ಬೆಳವಣಿಗೆಗೆ ಅತ್ಯಂತ ಮುಖ್ಯ.

ಉಚಿತ ಸಾಮಾನುಗಳನ್ನು ಪಡೆದ ಮಕ್ಕಳು ಸಂತೋಷದಿ0ದ ಉಲ್ಲಾಸ ವ್ಯಕ್ತಪಡಿಸಿದರು. ಪೋಷಕರು ಶಾಲೆಯ ಸೌಲಭ್ಯ ಮತ್ತು ಇಲಾಖೆಯ ಕಾರ್ಯಪದ್ಧತಿಯನ್ನು ಶ್ಲಾಘಿಸಿದರು. ಮೌಲಾನಾ ಆಜಾದ್ ಪಬ್ಲಿಕ್ ಶಾಲೆಯಲ್ಲಿ ಹೊಸ ಶೈಕ್ಷಣಿಕ ವರ್ಷ ಉತ್ತಮವಾಗಿ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುವ ನಿರೀಕ್ಷೆಯಿದೆ.

ಶಾಲೆಯ ಆಕರ್ಷಕ ಶೈಕ್ಷಣಿಕ ಪರಿಸರ, ಉಚಿತ ಸೌಲಭ್ಯಗಳು ಮತ್ತು ಮಕ್ಕಳ ಅಭ್ಯಾಸದ ಪ್ರೋತ್ಸಾಹ ಈ ಸಂಸ್ಥೆಯನ್ನು ಜಿಲ್ಲೆಯ ಅತ್ಯಂತ ಮೆಚ್ಚಿನ ಶಾಲೆಗಳಲ್ಲಿ ಒಂದಾಗಿ ರೂಪಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಶಿಕ್ಷಣಕ್ಕೆ ನವಚೈತನ್ಯ ತುಂಬಿದ ಈ ಹಂತವು ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಮಹತ್ವಪೂರ್ಣವಾಗಿ ತೋರುತ್ತಿದೆ.

ಚಿತ್ರ : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಮೌಲಾನಾ ಆಜಾದ್ ಪಬ್ಲಿಕ್ ಶಾಲೆಯಲ್ಲಿ ಎಲ್.ಕೆ.ಜಿ. ತರಗತಿ ಆರಂಭಗೊ0ಡಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande