
ವಿಜಯಪುರ, 08 ನವೆಂಬರ್ (ಹಿ.ಸ.) :
ಆ್ಯಂಕರ್ : ಕಳೆದ ಹತ್ತು ದಿನಗಳಿಂದ ನಡೆಯುತ್ತಿದ್ದ ಕಬ್ಬು ಬೆಳೆಗಾರರ ಹೋರಾಟ ಅಂತ್ಯಗೊಂಡಿದೆ. ವಿಜಯಪುರ ನಗರದ ಅಂಬೇಡ್ಕರ್ ಸರ್ಕಲ್‌ನಲ್ಲಿ ಕಬ್ಬಿಗೆ ದರ ನಿಗದಿ ಹೋರಾಟವನ್ನು ಡಿಸಿ ಡಾ. ಆನಂದ ಕೆ ಹಾಗುಹ ರೈತರು ಸಿಹಿ ತಿನ್ನುವ ಮೂಲಕ ಹೋರಾಟ ಕೈ ಬಿಡಲಾಯಿತು.
ಈ ಸಂದರ್ಭದಲ್ಲಿ ಡಿಸಿ ಡಾ. ಆನಂದ ಮಾತನಾಡಿ, ಸರ್ಕಾರದ ಆದೇಶದಂತೆ ಒಂದು ಟನ್ ಕಬ್ಬಿಗೆ 3300 ರೂಪಾಯಿ ನಿಗದಿ ಪಡಿಸಿದೆ. ಕಬ್ಬಿನ ಇಳುವರಿ ಕಡಿಮೆ ಅಥಾವ ಹೆಚ್ಚಿಕೆ ಇದ್ರೂ 3300 ನೀಡಬೇಕು ಎನ್ನುವ ಆದೇಶ ರೈತರಿಗೆ ನೀಡಲಾಗಿದೆ. ಅಲ್ಲದೇ, ಸಕ್ಕರೆ ಕಾರ್ಖಾನೆ ಮಾಲೀಕರು 3250 ಹಾಗೂ ಸರ್ಕಾರ 50 ನೀಡುತ್ತಾರೆ ಎಂದರು. ಈ ಸಂದರ್ಭದಲ್ಲಿ ರೈತರು ಸಂತಸ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande