ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಕಾರ್ಯಲಯದಲ್ಲಿ ಕನಕದಾಸರ ಜಯಂತಿ
ಗದಗ, 08 ನವೆಂಬರ್ (ಹಿ.ಸ.) : ಆ್ಯಂಕರ್ : ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಕಾರ್ಯಲಯದಲ್ಲಿ ಭಕ್ತರಲ್ಲೆ ಶ್ರೇಷ್ಠ ಭಕ್ತ ಎಂಬ ಬಿರುದು ಪಡೆದ ಶ್ರೀ ಕನಕದಾಸರ ಜಯಂತಿ ಆಚರಿಸಲಾಯಿತು. ಸಭೆಯನ್ನು ಉದ್ದೇಶಿಸಿ ಪಕ್ಷದ ಜಿಲ್ಲಾಧ್ಯಕ್ಷರಾದ ತೋಟಪ್ಪ(ರಾಜು) ಕುರುಡಗಿ ಮಾತನಾಡಿ ಸನಾತನ ಭಾರತೀಯ ಸಂಸ್ಕೃತಿಯಲ್
ಫೋಟೋ


ಗದಗ, 08 ನವೆಂಬರ್ (ಹಿ.ಸ.) :

ಆ್ಯಂಕರ್ : ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಕಾರ್ಯಲಯದಲ್ಲಿ ಭಕ್ತರಲ್ಲೆ ಶ್ರೇಷ್ಠ ಭಕ್ತ ಎಂಬ ಬಿರುದು ಪಡೆದ ಶ್ರೀ ಕನಕದಾಸರ ಜಯಂತಿ ಆಚರಿಸಲಾಯಿತು.

ಸಭೆಯನ್ನು ಉದ್ದೇಶಿಸಿ ಪಕ್ಷದ ಜಿಲ್ಲಾಧ್ಯಕ್ಷರಾದ ತೋಟಪ್ಪ(ರಾಜು) ಕುರುಡಗಿ ಮಾತನಾಡಿ ಸನಾತನ ಭಾರತೀಯ ಸಂಸ್ಕೃತಿಯಲ್ಲಿ ಹಲವಾರು ದಾರ್ಶನಿಕರು ಸಮಸ್ತ ಭಾರತದ ಜನತೆಗೆ ಕಾಲ, ಕಾಲಕ್ಕೆ ಧರ್ಮದ ಹಾದಿಯಲ್ಲಿ ನಡೆಯಲು ಮಾರ್ಗದರ್ಶನ ನೀಡಿದ್ದು ಅದರಲ್ಲಿ ಶ್ರೀ ಕನಕದಾಸರು ತಮ್ಮ ದಾಸರ ಪದಗಳಿಂದ ಜನಸಾಮಾನ್ಯರಿಗೆ ಮನ ಮುಟ್ಟುವ ಹಾಗೆ ಧರ್ಮದ ಕುರಿತು ಮಾರ್ಗದರ್ಶನ ನೀಡಿದ್ದು ಇಂದಿನ ನಮ್ಮ ಪೀಳಿಗೆಗೆ ಇದು ಸಹಾಯಕವಾಗಿದೆ.

ತಮ್ಮ ಕಠೂರ ತಪಸ್ಸಿನಿಂದ ಶ್ರೀಕೃಷ್ಣ ಪರಮಾತ್ಮನನ್ನು ಒಲಸಿಕೊಂಡ ಶ್ರೇಷ್ಠ ಭಕ್ತ ಎಂದು ಹೇಳಿದರು. ಇಂದಿನ ನಮ್ಮ ಜನಾಂಗ ಕನಕದಾಸರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಜೀವನ ಶಾಂತಿ ನೆಮ್ಮದಿಯಿಂದ ನಡೆಸಲು ಸಾಧ್ಯ ಎಂದರು.

ಸಭೆಯನ್ನು ಉದ್ದೇಶಿಸಿ ಪಕ್ಷದ ಗದಗ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಯಳವತ್ತಿ ಮಲ್ಲಾಪೂರ ಹಾಗೂ ಪ್ರಕೋಷ್ಠಗಳ ಜಿಲ್ಲಾ ಸಹ-ಸಂಯೋಜಕ ರಮೇಶ ಸಜ್ಜಗಾರ ಮಾತನಾಡಿ ಕನಕದಾಸರ ಜಯಂತಿಯನ್ನು ನಡೆಸಲು ನಮ್ಮ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಕಾರಣ ಎಂದರು. ಅಲ್ಲದೇ ಕನಕದಾಸರ ಕುರಿತು ಕಾಗಿನೆಲೆಯಲ್ಲಿನ ಪೀಠಕ್ಕೆ ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಸಾಕಷ್ಟು ಅನುದಾನವನ್ನು ನೀಡಿ ಅಭಿವೃದ್ಧಿಗೆ ಶ್ರಮಿಸಿದ್ದಾರೆ.

ಈ ನೆಲದಲ್ಲಿ ಹುಟ್ಟಿರುವದು ನಾವೆಲ್ಲರೂ ಪುಣ್ಯವಂತರು ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಮಂಡಲ ಅಧ್ಯಕ್ಷರಾದ ಸುರೇಶ ಮರಳಪ್ಪನವರ, ಪ್ರಮುಖರಾದ ಎಂ.ಎಂ.ಹಿರೇಮಠ, ಶ್ರೀಪತಿ ಉಡುಪಿ, ಮಂಜುನಾಥ ಶಾಂತಗೇರಿ, ಅಶೋಕ ಕರೂರ, ಚನ್ನಮ್ಮ ಹುಳಕಣ್ಣವರ, ಕಮಲಾಕ್ಷೀ ಗೊಂದಿ, ಕುಮಾರ ಮಾರನಬಸರಿ, ರವಿ ವಗ್ಗನವರ, ಸುರೇಶ ಚಿತ್ತರಗಿ, ಶಂಕರ ಕಾಕಿ, ಅಪ್ಪಣ್ಣ ಟೆಂಗಿನಕಾಯಿ, ಸುಭಾಸ ಸುಂಕದ, ಮೋಹನ ಕೋರಿ, ಮೋಹನ ಮದ್ದಿನ, ರಾಜು ಕುಲಕರ್ಣಿ, ರವಿ ಮಾನ್ವಿ, ಗೋಪಾಲ ನಾಯಕ, ರೇಣುಕಾರಾಜ ಗುಡಸಲಮನಿ, ದೇವರಪ್ಪ ಪೂಜಾರ, ಹಾಗೂ ಇನ್ನೂ ಹಲವಾರು ಪ್ರಮುಖರುಗಳು ಉಪಸ್ಥೀತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande