
ಬಳ್ಳಾರಿ, 05 ನವೆಂಬರ್ (ಹಿ.ಸ.) :
ಆ್ಯಂಕರ್ : ದೇಶದಲ್ಲಿ ನಡೆಯುತ್ತಿರುವ ಮತಗಳ್ಳತನ (ವೋಟ್ ಚೋರ್ ಗದ್ದಿ ಚೋಡ್)ದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಹಿ ಸಂಗ್ರಹಣಾ ಅಭಿಯಾನವನ್ನು ಹಮ್ಮಿಕೊಂಡು ಯಶಸ್ವಿಗೊಳಿಸುವ ಕುರಿತು ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಧ್ಯಕ್ಷ ಅಲ್ಲಂ ಪ್ರಶಾಂತ್ ಅವರ ನೇತೃತ್ವದಲ್ಲಿ ಮುಖಂಡರ ಸಭೆ ನಡೆಯಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾದ ಹುಮಾಯೂನ್ ಖಾನ್, ಡಿಸಿಸಿ ಕಾರ್ಯಾಧ್ಯಕ್ಷರಾದ ಭೋಯಾಪಾಟಿ ವಿಷ್ಣು, ಡಿಸಿಸಿ ಉಪಾಧ್ಯಕ್ಷರಾದ ಕೆ. ಶ್ರೀನಿವಾಸುಲು, ಬ್ಲಾಕ್ ಅಧ್ಯಕ್ಷರುಗಳಾದ ಅಲ್ಲಬಖಾಷ್, ಕೆ.ಎಂ. ಅಭಿಲಾಶ್, ಪೀರಸಾಬ್, ಮಹಾಪೌರರಾದ ಮುಲ್ಲಂಗಿ ನಂದೀಶ್, ಮಹಾನಗರ ಪಾಲಿಕೆ ಸದಸ್ಯರಾದ ಪೇರಂ ವಿವೇಕ್, ಪಿ. ಗಾದೆಪ್ಪ, ಅಯಾಜ್ ಅಹಮ್ಮದ್, ಎನ್.ಎಂ.ಡಿ. ಆಸೀಫ್ ಭಾಷ, ಡಿ. ಸೂರಿ, ರಾಜಶೇಖರ್, ವಿವೇಕಾನಂದ, ಶಿವರಾಜ್, ಎಂ. ಪ್ರಭಂಜನ್ ಕುಮಾರ್, ಎಂ. ರಾಮಾಂಜಿನೆಯಲು, ಜಬ್ಬರ್ ಸಾಬ್, ಬಿ.ಆರ್.ಎಲ್. ಸೀನಾ, ನೂರ್ ಮಹಮ್ಮದ್, ಹೊನ್ನಪ್ಪ, ನಿಯಾಜ್ ಅಹಮ್ಮದ್, ಬಿ. ಸೋಮು, ಶ್ರೀಮತಿ ಬಿ. ಜಾನಕಿ, ವಿ. ಶ್ರೀನಿವಾಸುಲು, ಕುಬೇರ, ಪಿ. ಜಗನ್ನಾಥ್, ಪರಾಜಿತ ಅಭ್ಯರ್ಥಿಗಳಾದ ಟಿ. ಲೋಕೇಶ್, ಬಜ್ಜಪ್ಪ, ಬಿ. ಮುರಳಿ ಮತ್ತು ಅಕ್ಬರ್ ಹಾಗೂ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್