ಕೊಪ್ಪಳ : ಕಲಾ ಪ್ರತಿಭೋತ್ಸವ ; ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಕೊಪ್ಪಳ, 05 ನವೆಂಬರ್ (ಹಿ.ಸ.) : ಆ್ಯಂಕರ್ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2025-26 ಸಾಲಿನಲ್ಲಿ ಕಲಾ ನೈಪುಣ್ಯವನ್ನು ಪ್ರೋತ್ಸಾಹಿಸಿಲು ಕಲಾ ಪ್ರತಿಭೋತ್ಸವ-2025 ಕಾರ್ಯಕ್ರಮಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮಕ್ಕಳು ಮತ್ತು ಯುವಜನರ ಕಲಾ ಪ್ರತಿಭೆಯನ್ನು ಗ
ಕೊಪ್ಪಳ : ಕಲಾ ಪ್ರತಿಭೋತ್ಸವ ; ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ


ಕೊಪ್ಪಳ, 05 ನವೆಂಬರ್ (ಹಿ.ಸ.) :

ಆ್ಯಂಕರ್ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2025-26 ಸಾಲಿನಲ್ಲಿ ಕಲಾ ನೈಪುಣ್ಯವನ್ನು ಪ್ರೋತ್ಸಾಹಿಸಿಲು ಕಲಾ ಪ್ರತಿಭೋತ್ಸವ-2025 ಕಾರ್ಯಕ್ರಮಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಮಕ್ಕಳು ಮತ್ತು ಯುವಜನರ ಕಲಾ ಪ್ರತಿಭೆಯನ್ನು ಗುರುತಿಸಿ ಅವರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಾಗೂ ಕಲಾ ನೈಪುಣ್ಯವನ್ನು ವೃದ್ಧಿಗೊಳಿಸಿಲು ಕೊಪ್ಪಳ ಜಿಲ್ಲಾ ಮಟ್ಟದಲ್ಲಿ ಕಲಾ ಪ್ರತಿಭೋತ್ಸವ-2025 ಕಾರ್ಯಕ್ರಮವನ್ನು ಮೂರು ಹಂತದಲ್ಲಿ ಬಾಲ ಪ್ರತಿಭೆ, ಕಿಶೋರ ಪ್ರತಿಭೆ ಹಾಗೂ ಯುವ ಪ್ರತಿಭೆ ಎಂಬ ಶೀರ್ಷಿಕೆಯಡಿ ಹಮ್ಮಿಕೊಳ್ಳಲಾಗುತಿದೆ.

*ಸ್ಪರ್ಧೆಯ ವಿಭಾಗಗಳು:* ಬಾಲ ಪ್ರತಿಭೆ/ಕಿಶೋರ ಪ್ರತಿಭೆ ವಿಭಾಗದಲ್ಲಿ ಏಕ ವ್ಯಕ್ತಿ ಸ್ಪರ್ಧೆಯಲ್ಲಿ 10 ನಿಮಿಷದ ಶಾಸ್ತ್ರೀಯ ನೃತ್ಯ, 7 ನಿಮಿಷದ ಸುಗಮ ಸಂಗೀತ, 120 ನಿಮಿಷದ ಚಿತ್ರಕಲೆ, ತಲಾ 7 ನಿಮಿಷಗಳ ಕಾಲ ಜಾನಪದ ಸಂಗೀತ, ಹಿಂದೂಸ್ತಾನಿ/ ಕರ್ನಾಟಕ ವಾದ್ಯ ಸಂಗೀತ ಮತ್ತು ಹಿಂದೂಸ್ತಾನಿ/ ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆ ನಡೆಯಲಿದೆ.

ಯುವ ಪ್ರತಿಭೆ ವಿಭಾಗದಲ್ಲಿ ಏಕ ವ್ಯಕ್ತಿ ಸ್ಪರ್ಧೆಯಲ್ಲಿ 7 ನಿಮಿಷದನನ್ನ ನೆಚ್ಚಿನ ಸಾಹಿತಿ (ಆಶುಭಾಷಣ), 10 ನಿಮಿಷದ ಶಾಸ್ತ್ರೀಯ ನೃತ್ಯ, ತಲಾ 7 ನಿಮಿಷಗಳ ಸುಗಮ ಸಂಗೀತ ಹಾಗೂ ಹಿಂದೂಸ್ತಾನಿ/ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ತಾನಿ/ ಕರ್ನಾಟಕ ವಾದ್ಯ ಸಂಗೀತ, 120 - ನಿಮಿಷದ ಚಿತ್ರಕಲೆ ಸ್ಪರ್ಧೆ ನಡೆಯಲಿದೆ. ಸಮೂಹ ಸ್ಪರ್ಧೆಗಳಲ್ಲಿ 45 ನಿಮಿಷದ ನಾಟಕ ಜರುಗಲಿದೆ.

*ಸೂಚನೆಗಳು:* ಕಲಾ ಪ್ರತಿಭೋತ್ಸೋವ ಮೂರು ಹಂತಗಳಲ್ಲಿ ನಡೆಯಲಿದ್ದು, ಜಿಲ್ಲಾ ಮಟ್ಟ, ವಲಯ ಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿ ಜರುಗಲಿವೆ. ಈ ಕಾರ್ಯಕ್ರಮವನ್ನು ಸ್ಪರ್ಧಾರೂಪದಲ್ಲಿ ಏರ್ಪಡಿಸಲಾಗುವುದು. ಪ್ರತಿ ಸ್ಪರ್ಧೆಗೆ ಆಯಾ ಪ್ರಕಾರದಲ್ಲಿ ಪರಿಣಿತರಾದ 3 ಜನ ಕಲಾವಿದರನ್ನು ತೀರ್ಪುಗಾರರನ್ನಾಗಿ ನೇಮಿಸಲಾಗುವುದು. ಈ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಪಡೆದವರನ್ನು ವಿಭಾಗಮಟ್ಟಕ್ಕೆ ಕಳುಹಿಸಿಕೊಡಲಾಗುವುದು. ಒಬ್ಬ ಸ್ಪರ್ಧಿಯು ಒಂದಕ್ಕಿಂತ ಹೆಚ್ಚಿನ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಸ್ಪರ್ಧೆಯಲ್ಲಿ ತೀರ್ಪುಗಾರರು ನೀಡುವ ನಿರ್ಣಯವೇ ಅಂತಿಮವಾಗಿರುತ್ತದೆ.

ಆಯಾ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ನಿಗದಿಪಡಿಸಿದ ವಯೋಮಾನವನ್ನು ಒಳಗೊಂಡಿರಬೇಕು. ಯಾವುದೇ ನಿಗದಿತ ನಮೂನೆ ಇಲ್ಲದೇ ಇರುವುದರಿಂದ ಎ-4 ಅಳತೆಯ ಬಿಳಿ ಹಾಳೆಯ ಮೇಲೆ ಜನ್ಮ ದಿನಾಂಕವನ್ನು ಆಯಾ ಶಾಲೆ, ಕಾಲೇಜು ಮುಖ್ಯಸ್ಥರಿಂದ ಅಥವಾ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆ ರವರಿಂದ ಜನ್ಮದಿನಾಂಕವನ್ನು ದೃಢೀಕರಿಸಿಕೊಂಡು ಅರ್ಜಿ ಸಲ್ಲಿಸಬೇಕು. ಇಲ್ಲವಾದಲ್ಲಿ ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.

*ಬಹುಮಾನಗಳು:* ಜಿಲ್ಲಾಮಟ್ಟದಲ್ಲಿ ಭಾಗವಹಿಸುವ ಬಾಲ ಪ್ರತಿಭೆ, ಕಿಶೋರ ಪ್ರತಿಭೆ, ಯುವ ಪ್ರತಿಭೆ ಎಲ್ಲಾ ಸ್ಪರ್ಧಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಯಾವುದೇ ನಗದು ಬಹುಮಾನ ಇರುವುದಿಲ್ಲ. ಆದರೆ ರಾಜ್ಯಮಟ್ಟದಲ್ಲಿ ಪ್ರಥಮ, ದ್ವೀತಿಯ ಅಥವಾ ತೃತಿಯ ಸ್ಥಾನ ಪಡೆದ ಅಭ್ಯರ್ಥಿಗಳಿಗೆ ಕ್ರಮವಾಗಿ ರೂ. 15 ಸಾವಿರ, 10 ಸಾವಿರ ಮತ್ತು 7500 ರೂ.ಗಳನ್ನು ನಗದು ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ನೀಡಲಾಗುವುದು.

ಸಮೂಹ ಪ್ರಕಾರಗಳಲ್ಲಿ ಭಾಗವಹಿಸುವ ತಂಡದ ಸದಸ್ಯರ ಸಂಖ್ಯೆ ಕನಿಷ್ಠ 10 ಗರೀಷ್ಠ 15 ಜನರನ್ನು ಮೀರಬಾರದು. ವಲಯ ಹಾಗೂ ರಾಜ್ಯಮಟ್ಟದಲ್ಲಿ ಸ್ಪರ್ಧಿಗಳೊಂದಿಗೆ ಆಗಮಿಸುವ ನಾಟಕ ನಿರ್ದೇಶಕ, ಪಕ್ಕವಾದ್ಯ, ಸಹ ಕಲಾವಿದರಿಗೆ ವಾಸ್ತವಿಕ ಪ್ರಯಾಣ ವೆಚ್ಚ, ಊಟ, ವಸತಿ ಹಾಗೂ ಪ್ರಮಾಣ ಪತ್ರಗಳನ್ನು ನೀಡಲಾಗುವುದು.

ಸಮೂಹ ಸ್ಪರ್ಧೆಯ ವಿಭಾಗದ ರಾಜ್ಯ ಮಟ್ಟದಲ್ಲಿ ಪ್ರಥಮ, ದ್ವೀತಿಯ ಮತ್ತು ತೃತಿಯ ಸ್ಥಾನ ಪಡೆದ ಅಭ್ಯರ್ಥಿಗಳಿಗೆ ಕ್ರಮವಾಗಿ ರೂ. 50 ಸಾವಿರ, 40 ಸಾವಿರ ಮತ್ತು 30 ಸಾವಿರ ರೂ.ಗಳನ್ನು ನಗದು ಬಹುಮಾನಗಳನ್ನು ಹಾಗೂ ಪ್ರಮಾಣ ಪತ್ರಗಳನ್ನು ನೀಡಲಾಗುವುದು.

*ಕಲಾ ಪ್ರತಿಭೋತ್ಸವದಲ್ಲಿ ಭಾಗವಹಿಸುವ ಅಭ್ಯರ್ಥಿಗಳ ವಯೋಮಾನದ ಅರ್ಹತೆ:* ಬಾಲ ಪ್ರತಿಬೆ ವಿಭಾದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಕನಿಷ್ಠ 8 ವರ್ಷದಿಂದ 14 ವರ್ಷಕ್ಕಿಂತ ಕಡಿಮೆ ಇರಬೇಕು. ಕಿಶೋರ ಪ್ರತಿಭೆ ವಿಭಾದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಕನಿಷ್ಠ 14 ವರ್ಷವಾಗಿರಬೇಕು ಹಾಗೂ 18 ವರ್ಷಕ್ಕಿಂತ ಕಡಿಮೆ ಇರಬೇಕು. ಯುವ ಪ್ರತಿಬೆ ವಿಭಾದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷವಾಗಿರಬೇಕು ಮತ್ತು 30 ವರ್ಷಕ್ಕಿಂತ ಕಡಿಮೆ ಇರಬೇಕು.

ಈ ಎಲ್ಲಾ ಅಂಶಗಳನ್ವಯ ಕಲಾ ಪ್ರತಿಭೊತ್ಸವದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ಸ್ವ-ವಿವರದೊಂದಿಗೆ ಹಾಗೂ ಶಾಲೆ, ಕಾಲೇಜು ಮುಖ್ಯಸ್ಥರಿಂದ ಅಥವಾ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆ ರವರಿಂದ ಜನ್ಮದಿನಾಂಕವನ್ನು ಜನ್ಮ ದಿನಾಂಕವನ್ನು ದೃಡೀಕರಿಸಿಕೊಂಡು ನವೆಂಬರ್ 15ರ ಸಂಜೆ 5 ಗಂಟೆಯೊಳಗಡೆ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಭವನ ಕೊಪ್ಪಳ ಕಾರ್ಯಾಲಯಕ್ಕೆ ನೇರವಾಗಿ ಸಲ್ಲಿಸಬೇಕೆಂದು ಕೊಪ್ಪಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande