ರಸ್ತೆಗಾಗಿ ಠಾಣೆ ಮೆಟ್ಟಿಲರಿದ ಹತ್ತಾರು ಕುಟುಂಬಗಳು
ರಸ್ತೆಗಾಗಿ ಠಾಣೆ ಮೆಟ್ಟಿಲರಿದ ಹತ್ತಾರು ಕುಟುಂಬಗಳು
ಚಿತ್ರ : ಹತ್ತಾರು ಕುಟುಂಬಗಳ ಬೇಡಿಕೆಯಾಗಿದ್ದ ರಸ್ತೆಯ ಕಾಮಗಾರಿ ವಿಚಾರವಾಗಿ ಬುಧವಾರ ವಾದ-ವಿವಾದ ನಡೆದು ಕೆಜಿಎಫ್ ತಾಲ್ಲೂಕಿನ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದ ಪ್ರಸಂಗ ನಡೆಯಿತು.


ರಸ್ತೆಗಾಗಿ ಠಾಣೆ ಮೆಟ್ಟಿಲರಿದ ಹತ್ತಾರು ಕುಟುಂಬಗಳು

ಕೋಲಾರ, 0೫ ನವೆಂಬರ್ (ಹಿ.ಸ.) :

ಆ್ಯಂಕರ್ : ಹತ್ತಾರು ಕುಟುಂಬಗಳ ಸುಮಾರು ೩೦ ೪೦ ವರ್ಷಗಳ ಬೇಡಿಕೆಯಾಗಿದ್ದ ರಸ್ತೆಯ ಕಾಮಗಾರಿ ವಿಚಾರವಾಗಿ ಬುಧವಾರ ವಾದ-ವಿವಾದ ನಡೆದು ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದ ಪ್ರಸಂಗ ನಡೆಯಿತು.

ಕೆಜಿಎಫ್ ತಾಲ್ಲೂಕಿನ ಬೇತಮಂಗಲ ಗ್ರಾಮದ ೨ನೇ ಬಡಾವಣೆಯ ಓಣಿ ಕುಡಿಸಲು ನಿವಾಸಿಗಳು ಸುಮಾರು ವರ್ಷಗಳಿಂದ ಮೂಲ ಭೂತ ಸೌಕರ್ಯಗಳಿಗಾಗಿ ಕಾನೂನು ಹೋರಾಟ ನಡೆಸುತ್ತಿದ್ದಾರೆ.

ಇತ್ತೀಚಿಗೆ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಅವರ ಅವರ ಅನುದಾನದಲ್ಲಿ ರಸ್ತೆ ಕಾಮಗಾರಿಯನ್ನು ಕೈಗೊಂಡಿದ್ದು ಬಹುತೇಕ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ರಸ್ತೆಯನ್ನು ಅಂಕತಟ್ಟಹಳ್ಳಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ವಿಚಾರವಾಗಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಮನೆ ಮಾಲೀಕನ ನಡುವೆ ಮಾತಿನ ಚಕಮುಕಿ ಸಂಭವಿಸಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸುವ ಹಂತಕ್ಕೆ ತಲುಪಿದೆ.

ಸುಮಾರು ೩೦ ೪೦ ವರ್ಷಗಳಿಂದ ಒಂದೇ ಜಾಗದಲ್ಲಿ ವಾಸಿಸುತ್ತಿರುವಂತಹ ಓಣಿ ಗೂಡಿಸಲಿನ ಹತ್ತಾರು ಕುಟುಂಬಗಳು ರಸ್ತೆ ಬೇಕೇ ಬೇಕೆಂದು ಒತ್ತಾಯಿಸಿದ್ದಾರೆ, ಹೋರಾಟ ಬೇಕಾದರೂ ಮಾಡುತ್ತೇವೆ ಆದರೆ ನಮಗೆ ರಸ್ತೆಯನ್ನು ಮಾಡಿಕೊಡಬೇಕೆಂದು ಆಗ್ರಹಿಸಿದರು.

ರಸ್ತೆಗೆ ಅಡ್ಡಲಾಗಿ ಸಣ್ಣದಾಗಿ ಇತ್ತೀಚೆಗೆ ನಿರ್ಮಿಸಿದ್ದ ಶೌಚಾಲಯವನ್ನು ತೆರವು ಮಾಡುವ ವಿಚಾರವಾಗಿ ಮನೆಯ ಮಾಲೀಕರಾದ ನೋವಾ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಿನು ಕಾರ್ತಿಕ್ ಹಾಗೂ ಸದಸ್ಯರಾದ ಸುಕನ್ಯಮ್ಮ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ನಡೆದಿದೆ.

ಶಾಸಕಿ ರೂಪಕಲಾ ಶಶಿಧರ್ ಅವರಿಂದ ರಸ್ತೆಗಾಗಿ ಅನುದಾನವನ್ನು ತರಲಾಗಿದೆ ಬಹುತೇಕ ಕಾಮಗಾರಿ ಮುಗಿದಿದ್ದು, ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಶೌಚಾಲಯ ಕೊಠಡಿಗಳನ್ನು ಅನವಶ್ಯಕವಾಗಿ ನಿರ್ಮಿಸಿದ್ದಾನೆ, ಕೊಠಡಿಗಳು ನಿರ್ಮಿಸ ಬೇಡ ಎಂದು ಮಾಹಿತಿ ನೀಡಿದರು ಸಹ ರಸ್ತೆಗೆ ಅಡ್ಡಲಾಗಿ ನಿರ್ಮಿಸಿದ್ದಾನೆ, ಆದರೆ ಯಾವುದೇ ಕಾರಣಕ್ಕೂ ರಸ್ತೆ ಕಾಮಗಾರಿಯನ್ನು ನಿಲ್ಲಿಸುವುದಿಲ್ಲ ರಸ್ತೆಯನ್ನು ಮಾಡೆತ್ತಿರುತ್ತೇನೆ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಸುಕನ್ಯ ಜಯಕುಮಾರ್ ತಿಳಿಸಿದರು.

ಸಾರ್ವಜನಿಕರ ಸುಮಾರು ವರ್ಷಗಳ ಬೇಡಿಕೆಯಾಗಿರುವ ರಸ್ತೆ ಮಾಡಿಸುವ ಸಲುವಾಗಿ ರಸ್ತೆಗೆ ಅಡ್ಡಲಾಗಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡವನ್ನು ತೆರವು ಮಾಡಿಸಲು ನನ್ನ ಮೇಲೆ ಯಾವುದೇ ಪ್ರಕರಣ ದಾಖಲಾದರೂ ಪರವಾಗಿಲ್ಲ ರಸ್ತೆಯನ್ನು ಮಾಡಿಸಿ ನೂರಾರು ಮಂದಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಿನು ಕಾರ್ತಿಕ್ ಅಭಿಪ್ರಾಯ ವ್ಯಕ್ತಪಡಿಸಿದರು.

ಬೇತಮಂಗಲ ಪೊಲೀಸ್ ಠಾಣೆಯ ಗುರುರಾಜ್ ಚಿಂತಕಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮ ಪಂಚಾಯಿತಿಯಿಂದ ಅಳತೆ ಮಾಡಿ ನಂತರ ಒತ್ತುವರಿ ಮಾಡಿದ್ದಾರೆ ತೆರವುಗೊಳಿಸಿ ನಂತರ ರಸ್ತೆಯನ್ನು ಮಾಡಿಕೊಳ್ಳಲು ಸೂಚಿಸಿದರು. ಆದರೆ ಸುಮಾರು ವರ್ಷಗಳಿಂದ ರಸ್ತೆಗಾಗಿ ನೊಂದಿರುವಂತಹ ಹತ್ತಾರು ಕುಟುಂಬಗಳು ಪೊಲೀಸ್ ಠಾಣೆಗೆ ಭೇಟಿ ನೀಡಿ ತಕ್ಷಣ ರಸ್ತೆ ಮಾಡಿಸಬೇಕು ಎಂದು ಹಠ ಹಿಡಿದಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಪಂ ಕಾರ್ಯದರ್ಶಿ ರಾಜಣ್ಣ, ಸಿಬ್ಬಂದಿ ರಾಮು, ಓಣಿ ಗೂಡಿಸಲಿನ ನಿವಾಸಿಗಳು ಇದ್ದರು.

ಚಿತ್ರ : ಹತ್ತಾರು ಕುಟುಂಬಗಳ ಬೇಡಿಕೆಯಾಗಿದ್ದ ರಸ್ತೆಯ ಕಾಮಗಾರಿ ವಿಚಾರವಾಗಿ ಬುಧವಾರ ವಾದ-ವಿವಾದ ನಡೆದು ಕೆಜಿಎಫ್ ತಾಲ್ಲೂಕಿನ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದ ಪ್ರಸಂಗ ನಡೆಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande