ನಿವೃತ್ತ ಸಿಎಫ್ಒ ಶಿವಕುಮಾರ್ ಮಗಳ ಸಾವಿನಲ್ಲಿ ಲಂಚ ಪ್ರಕರಣ : ರಾಜ್ಯದಿಂದ ವರದಿ ಕೇಳಿದ ಎನ್‌ಎಚ್‌ಆರ್‌ಸಿ
ನವದೆಹಲಿ, 04 ನವೆಂಬರ್ (ಹಿ.ಸ.) : ಆ್ಯಂಕರ್ : ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ ನಿವೃತ್ತ ಸಿಎಫ್‌ಒ ಶಿವಕುಮಾರ್ ಅವರ ಮಗಳು ಅಕ್ಷಯ (26) ಸಾವಿನ ಸಂದರ್ಭದಲ್ಲಿ ಬೆಂಗಳೂರು ಪೋಲಿಸರು ಲಂಚ ಪಡೆದ ಪ್ರಕರಣ ಕುರಿತು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಎನ್‌ಎಚ್‌ಆರ್‌ಸಿ, ಎರಡು ವಾರಗಳಲ್ಲ
Nhrc


ನವದೆಹಲಿ, 04 ನವೆಂಬರ್ (ಹಿ.ಸ.) :

ಆ್ಯಂಕರ್ : ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ ನಿವೃತ್ತ ಸಿಎಫ್‌ಒ ಶಿವಕುಮಾರ್ ಅವರ ಮಗಳು ಅಕ್ಷಯ (26) ಸಾವಿನ ಸಂದರ್ಭದಲ್ಲಿ ಬೆಂಗಳೂರು ಪೋಲಿಸರು ಲಂಚ ಪಡೆದ ಪ್ರಕರಣ ಕುರಿತು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಎನ್‌ಎಚ್‌ಆರ್‌ಸಿ, ಎರಡು ವಾರಗಳಲ್ಲಿ ವರದಿ ಕೋರಿದೆ

ಘಟನೆ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಸ್ವಯಂಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿಕೊಂಡಿದೆ. ಆಯೋಗವು ಕರ್ನಾಟಕದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ನೀಡಿದ್ದು, ಎರಡು ವಾರಗಳೊಳಗೆ ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಿದೆ.

ಎನ್‌ಎಚ್‌ಆರ್‌ಸಿ ಪ್ರಕಟಣೆಯ ಪ್ರಕಾರ, 64 ವರ್ಷದ ವ್ಯಕ್ತಿ ಶಿವಕುಮಾರ ಏಕೈಕ ಪುತ್ರಿ — ಐಐಟಿ ಮದ್ರಾಸ್ ಹಾಗೂ ಐಐಎಂ ಅಹಮದಾಬಾದ್‌ನಿಂದ ಪದವಿ ಪಡೆದಿದ್ದ ಆಕೆ — ಸೆಪ್ಟೆಂಬರ್ 18ರಂದು ಮೆದುಳಿನ ರಕ್ತಸ್ರಾವದಿಂದ ನಿಧನರಾದರು. ಆಕೆಯ ಸಾವಿನ ನಂತರ ಆಂಬ್ಯುಲೆನ್ಸ್ ಚಾಲಕರು ದುಬಾರಿ ಶುಲ್ಕ ವಿಧಿಸಿದ್ದು, ಪೊಲೀಸರು ಸಹಾನುಭೂತಿ ತೋರದೇ ಲಂಚ ಪಡೆದ ನಂತರ ಮಾತ್ರ ಎಫ್‌ಐಆರ್ ಮತ್ತು ಮರಣೋತ್ತರ ಪರೀಕ್ಷೆ ವರದಿ ನೀಡಿರುವ ಕುರಿತು ಪ್ರಕರಣ ದಾಖಲಾಗಿ‌ ಇಬ್ಬರು ಪೋಲಿಸ ಸಿಬ್ಬಂದಿ ಅಮಾನತ್ತುಗೊಂಡಿದರು.

ಆಯೋಗದ ಪ್ರಕಾರ, ವರದಿಗಳಲ್ಲಿರುವ ಅಂಶಗಳು ನಿಖರವಾಗಿದ್ದರೆ ಇದು ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತದೆ. ರಾಜ್ಯ ಸರ್ಕಾರದಿಂದ ಘಟನೆಯ ಸಂಪೂರ್ಣ ವರದಿ ಹಾಗೂ ಕೈಗೊಳ್ಳಲಾದ ಕ್ರಮದ ವಿವರವನ್ನು ಎರಡು ವಾರಗಳಲ್ಲಿ ಸಲ್ಲಿಸಲು ಎನ್‌ಎಚ್‌ಆರ್‌ಸಿ ಸೂಚಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande