
ವಿಜಯಪುರ, 03 ನವೆಂಬರ್ (ಹಿ.ಸ.) :
ಆ್ಯಂಕರ್ : ತೂಕದಿಂದ ರಾಜಕಾರಣ ಮಾಡಬೇಕಿದೆ ಎಂದು ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರ ಶಾಶ್ವತವಲ್ಲ. ನೈತಿಕತೆ, ಪ್ರಬುದ್ಧತೆ ಕಾಪಾಡಿಕೊಂಡು ಜಿಲ್ಲೆಯ ಜನ ಹಾಗೂ ರಾಜ್ಯದ ಭವಿಷ್ಯಕ್ಕಾಗಿ ನಮ್ಮ ಕರ್ತವ್ಯ ಪೂರೈಸಬೇಕಿದೆ ಎಂದರು.
ಎಲ್ಲರು ಕೂಡಿಯೇ ರಾಜಕಾರಣ ಮಾಡೋಣ. ಆದರೆ ಎಲ್ಲಾದರೂ ಒಂದಾಗಿ ಹೋಗಿದ್ದ ಉದಾಹರಣೆ ಇದೆಯಾ? ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಕೂಡಿ ಚರ್ಚೆ ಮಾಡಿದ್ದಿದೆಯಾ? ಮಂತ್ರಿ ಸ್ಥಾನಕ್ಕಾಗಿ ಎಲ್ಲರೂ ಕೂಡಿ ಹೈಕಮಾಂಡ್ ಬಳಿ ಹೋದ ಉದಾಹರಣೆ ಇದೆಯಾ? ಈ ನಿಟ್ಟಿನಲ್ಲಿ ಮುದ್ದೇಬಿಹಾಳ ಶಾಸಕ ಸಿ ಎಸ್ ನಾಡಗೌಡ ಪ್ರಯತ್ನಿಸುವುದಾದರೆ ಅದಕ್ಕಿಂತ ಸಂತೋಷ ಬೇರೆ ಏನಿದೆ? ನನ್ನ ಕ್ಷೇತ್ರಕ್ಕೆ ಮಂತ್ರಿಗಿರಿ ಸಿಕ್ಕಿಲ್ಲ. ರಾಷ್ಟ್ರೀಯ ಪಕ್ಷದ ತೀರ್ಮಾನ ಗೌರವಿಸೋಣ. ನಾವು ಯಾರೂ ಸ್ವತಂತ್ರ ಅಲ್ಲ. ಪಕ್ಷದ ಚೌಕಟ್ಟಿನಲ್ಲಿ ಇದ್ದೇವೆ ಎಂದರು. ಇನ್ನು ಒಳಮೀಸಲಾತಿ ಮಾದರಿ ಲೆಕ್ಕಾಚಾರದ ಬಗ್ಗೆ ಹೇಳಿದ್ದಾರೆ. ಅದೇ ರೀತಿ ಕೆಲವರು ಅವರವರ ಲೆಕ್ಕಾಚಾರ ಇಟ್ಟುಕೊಂಡಿರುತ್ತಾರೆ, ಕೆಲವರು ಪ್ರಾದೇಶಿಕತೆ, ಹಿರಿತನ, ಅವಕಾಶ ಆಧಾರಿತ ಲೆಕ್ಕಾಚಾರಗಳಿರುತ್ತವೆ. ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ರಾಜ್ಯದೆಲ್ಲೆಡೆ ಚರ್ಚೆಯಾಗುತ್ತಿದ್ದು, ಜಿಲ್ಲೆಯಲ್ಲಿ ಯೂ ಚರ್ಚೆ ಜೋರಾಗಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande