ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಕೌನ್ಸಿಲಿಂಗ್
ಗದಗ, 03 ನವೆಂಬರ್ (ಹಿ.ಸ.) : ಆ್ಯಂಕರ್ : 2024-25 ನೇ ಸಾಲಿನ ಸರಕಾರಿ ಪ್ರಾಥಮಿಕ/ ಪ್ರೌಢಶಾಲೆಗಳ ಶಿಕ್ಷಕರು/ ಮುಖ್ಯ ಶಿಕ್ಷಕರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಚಾಲ್ತಿಯಯಲ್ಲಿದ್ದು, ಜಿಲ್ಲೆಯ ಒಳಗಿನ ಪ್ರಾಥಮಿಕ ಶಾಲಾ ಹಿರಿಯ ಮುಖ್ಯ ಶಿಕ್ಷಕರು/ ಮುಖ್ಯ ಶಿಕ್ಷಕರು/ ಸಹ ಶಿಕ್ಷಕರು/ ದೈಹಿಕ ಶಿಕ್ಷಕರು/ ವ
ಫೋಟೋ


ಗದಗ, 03 ನವೆಂಬರ್ (ಹಿ.ಸ.) :

ಆ್ಯಂಕರ್ : 2024-25 ನೇ ಸಾಲಿನ ಸರಕಾರಿ ಪ್ರಾಥಮಿಕ/ ಪ್ರೌಢಶಾಲೆಗಳ ಶಿಕ್ಷಕರು/ ಮುಖ್ಯ ಶಿಕ್ಷಕರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಚಾಲ್ತಿಯಯಲ್ಲಿದ್ದು, ಜಿಲ್ಲೆಯ ಒಳಗಿನ ಪ್ರಾಥಮಿಕ ಶಾಲಾ ಹಿರಿಯ ಮುಖ್ಯ ಶಿಕ್ಷಕರು/ ಮುಖ್ಯ ಶಿಕ್ಷಕರು/ ಸಹ ಶಿಕ್ಷಕರು/ ದೈಹಿಕ ಶಿಕ್ಷಕರು/ ವಿಶೇಷ ಶಿಕ್ಷಕರುಗಳ ವರ್ಗಾವಣೆಯನ್ನು ಹಾಗೂ ಪ್ರೌಢಶಾಲಾ ಸಹ ಶಿಕ್ಷಕರು/ ದೈಹಿಕ ಶಿಕ್ಷಣ ಶಿಕ್ಷಕರು/ ವಿಶೇಷ ಶಿಕ್ಷಕರುಗಳ ಕೋರಿಕೆ ವರ್ಗಾವಣೆ ಕುರಿತಂತೆ ಪರಿಷ್ಕೃತ ವೇಳಾಪಟ್ಟಿಯಂತೆ ಅಂತಿಮ ಪಟ್ಟಿ ಪ್ರಕಾರ ಕೌನ್ಸಿಲಿಂಗ್ ನಡೆಸಲಾಗುವುದು.

ಶಿಕ್ಷಕರು ನಿಗದಿಪಡಿಸಿದ ದಿನಾಂಕದಂದು ನಗರದ ಹಳೆ ಕೋರ್ಟ ಹತ್ತಿರ ಸಮನ್ವಯಾಧಿಕಾರಿಗಳ ಕಚೇರಿಯಲ್ಲಿ ಕೌನ್ಸಿಲಿಂಗ್ ಸಮಯದಲ್ಲಿ ಹಾಜರಿರಲು ತಿಳಿಸಿದೆ.

ನವೆಂಬರ್ 4 ರಂದು ಬೆಳಿಗ್ಗೆ 9.30 ಗಂಟೆಯಿಂದ ಅಂತಿಮ ಪಟ್ಟಿಯಲ್ಲಿರುವ ಎಲ್ಲ ಪ್ರಾಥಮಿಕ ಹಿರಿಯ ಮುಖ್ಯ ಶಿಕ್ಷಕರು/ ಮುಖ್ಯ ಶಿಕ್ಷಕರು / ದೈಹಿಕ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರು ಕ್ರ.ಸಂ 1 ರಿಂದ 200 ರವರೆಗೆ , ನವೆಂಬರ್ 5 ರಂದು ಬೆಳಿಗ್ಗೆ 9.30 ಗಂಟೆಯಿಂದ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ವೃಂದ ಜೇಷ್ಠತಾ ಪಟ್ಟಿ ಕ್ರ.ಸಂ.201 ರಿಂದ 500 ರವರೆಗೆ, ನವೆಂಬರ್ 6 ರಂದು ಬೆಳಿಗ್ಗೆ 9.30 ಗಂಟೆಯಿಂದ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ವೃಂದ ಜೆ.ಪ. ಕ್ರ.ಸಂ.501 ರಿಂದ ಮುಕ್ತಾಯವಾಗುವವರೆಗೆ, ನವೆಂಬರ್ 7 ರಂದು ಬೆಳಿಗ್ಗೆ 9.30 ಗಂಟೆಯಿಂದ ಅಂತಿಮ ಪಟ್ಟಿಯಲ್ಲಿರುವ ಎಲ್ಲ ಪ್ರೌಢ ಶಾಲಾ ವಿಶೇಷ ಶಿಕ್ಷಕರು/ ದೈಹಿಕ ಶಿಕ್ಷಕರು/ ಸಹ ಶಿಕ್ಷಕರ ವೃಂದದ ಕೌನ್ಸಿಲಿಂಗ್ ನಡೆಸಲಾಗುವುದು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande