
ಬೆಂಗಳೂರು, 26 ನವೆಂಬರ್ (ಹಿ.ಸ.) :
ಆ್ಯಂಕರ್ : ಸಂಚಿತ್ ಸಂಜೀವ್ ಅಭಿನಯದ ‘ಮ್ಯಾಂಗೋ ಪಚ್ಚ’ ಸಿನಿಮಾದ ಮೊದಲ ಹಾಡು ‘ಹಸ್ರವ್ವ’ ಬಿಡುಗಡೆಯಾಗಿದ್ದು, ಚಿತ್ರ ತಂಡದ ನಿರೀಕ್ಷೆಗೆ ಮತ್ತಷ್ಟು ಬಣ್ಣ ತುಂಬಿದೆ. ಹಾಡು ಬಿಡುಗಡೆಯಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯತೊಡಗಿದೆ.
ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದು, ವಿಭಿನ್ನ ಹಿನ್ನೆಲೆ ಸಂಗೀತ ಹಾಗೂ ಫೋಕ್ ಸ್ಪರ್ಶ ಹೊಂದಿರುವ ಈ ಹಾಡು ಪ್ರೇಕ್ಷಕರ ಮೆಚ್ಚುಗೆ ಪಡೆಯುತ್ತಿದೆ. ಸಿನಿಮಾವನ್ನು ವಿವೇಕ ನಿರ್ದೇಶಿಸಿದ್ದು, ಹೊಸತಾದ ಕಥಾಹಂದರದೊಂದಿಗೆ ಯುವ ಪ್ರೇಕ್ಷಕರನ್ನು ಸೆಳೆಯುವ ನಿರೀಕ್ಷೆಯಿದೆ.
ಶೀಘ್ರದಲ್ಲೇ ಟ್ರೈಲರ್ ಮತ್ತು ಉಳಿದ ಹಾಡುಗಳನ್ನು ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa