ಛತ್ತಿಸಗಢ ಬುಡಕಟ್ಟು ದಿನಾಚರಣೆಯಲ್ಲಿ ರಾಷ್ಟ್ರಪತಿ
ಅಂಬಿಕಾಪುರ, 20 ನವೆಂಬರ್ (ಹಿ.ಸ.) : ಆ್ಯಂಕರ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಡಕಟ್ಟು ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಛತ್ತೀಸ್‌ಗಢದ ಅಂಬಿಕಾಪುರಕ್ಕೆ ಆಗಮಿಸಿದರು. ಅವರು, ಪಿಜಿ ಕಾಲೇಜು ಮೈದಾನಕ್ಕೆ ತೆರಳಿ ಬುಡಕಟ್ಟು ಸಮುದಾಯದ ಸದಸ್ಯರನ್ನು ಭೇಟಿಯಾಗಿ ಸಂವಾದ ನಡೆಸಿದರು. ಛತ್
President


ಅಂಬಿಕಾಪುರ, 20 ನವೆಂಬರ್ (ಹಿ.ಸ.) :

ಆ್ಯಂಕರ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಡಕಟ್ಟು ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಛತ್ತೀಸ್‌ಗಢದ ಅಂಬಿಕಾಪುರಕ್ಕೆ ಆಗಮಿಸಿದರು.

ಅವರು, ಪಿಜಿ ಕಾಲೇಜು ಮೈದಾನಕ್ಕೆ ತೆರಳಿ ಬುಡಕಟ್ಟು ಸಮುದಾಯದ ಸದಸ್ಯರನ್ನು ಭೇಟಿಯಾಗಿ ಸಂವಾದ ನಡೆಸಿದರು. ಛತ್ತೀಸ್‌ಗಢ ಮತ್ತು ಬುಡಕಟ್ಟು ಪಾಕಪದ್ಧತಿಯನ್ನು ಪ್ರದರ್ಶಿಸಿದ ಮಳಿಗೆಗಳನ್ನೂ ವೀಕ್ಷಿಸಿದರು.

ಈ ಸಂದರ್ಭದಲ್ಲಿ ರಾಜ್ಯಪಾಲ ರಾಮೆನ್ ದೇಕಾ, ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಜುವಾಲ್ ಓರಾಮ್, ರಾಜ್ಯ ಸಚಿವರು ದುರ್ಗಾ ದಾಸ್ ಉಯಿಕೆ, ತೋಖನ್ ಸಾಹು, ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ, ಹಣಕಾಸು ಸಚಿವ ಒ.ಪಿ. ಚೌಧರಿ, ಕೃಷಿ ಸಚಿವ ರಾಮ್ ವಿಚಾರ ನೇಮಾಮ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande