ಭಾರತೀಯ ಸಂಸ್ಕೃತಿ ಎಂದರೆ ಒಟ್ಟಿಗೆ ಸಾಗುವುದು : ಸುನಿಲ್ ಅಂಬೇಕರ್
ವಾರಾಣಸಿ, 16 ನವೆಂಬರ್ (ಹಿ.ಸ.) : ಆ್ಯಂಕರ್ : ಭಾರತೀಯ ಸಂಸ್ಕೃತಿ ಎಂದರೆ ಒಟ್ಟಾಗಿ ಸಾಗುವುದು, ಒಟ್ಟಾಗಿ ಬೆಳೆಯುವುದು. ಸಂಬಂಧಗಳು ರೂಪುಗೊಂಡಾಗ ಪರಸ್ಪರ ಕಾಳಜಿ ಹುಟ್ಟುತ್ತದೆ, ಅದೇ ಸಂಸ್ಕೃತಿಯನ್ನು ನಿರ್ಮಿಸುತ್ತದೆ” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರಚಾರ ಮುಖ್ಯಸ್ಥ ಸುನಿಲ್ ಅಂಬೇಕ
Sunil ambekar


ವಾರಾಣಸಿ, 16 ನವೆಂಬರ್ (ಹಿ.ಸ.) :

ಆ್ಯಂಕರ್ : ಭಾರತೀಯ ಸಂಸ್ಕೃತಿ ಎಂದರೆ ಒಟ್ಟಾಗಿ ಸಾಗುವುದು, ಒಟ್ಟಾಗಿ ಬೆಳೆಯುವುದು. ಸಂಬಂಧಗಳು ರೂಪುಗೊಂಡಾಗ ಪರಸ್ಪರ ಕಾಳಜಿ ಹುಟ್ಟುತ್ತದೆ, ಅದೇ ಸಂಸ್ಕೃತಿಯನ್ನು ನಿರ್ಮಿಸುತ್ತದೆ” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರಚಾರ ಮುಖ್ಯಸ್ಥ ಸುನಿಲ್ ಅಂಬೇಕರ್ ಹೇಳಿದರು.

‘ವಿಶ್ವ ಕಲ್ಯಾಣ: ಭಾರತೀಯ ಸಂಸ್ಕೃತಿ’ ಎಂಬ ವಿಷಯಾಧಾರಿತ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಭಾನುವಾರ ಉತ್ತರ ಪ್ರದೇಶದ ಸ್ವತಂತ್ರ ಭವನದಲ್ಲಿ ಮಾತನಾಡಿದರು.

ಕಾಶಿ ಶಬ್ದೋತ್ಸವ 2025 ಕಾರ್ಯಕ್ರಮದ ಅಂಗವಾಗಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗ ಹಾಗೂ ವಿಶ್ವ ಸಂವಾದ ಕೇಂದ್ರ (ಕಾಶಿ) ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

“ಭಾರತದ ಸಾಂಸ್ಕೃತಿಕ ಜಲಪ್ರವಾಹವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ಪಂಡಿತ್ ಮದನ್ ಮೋಹನ್ ಮಾಳವೀಯ ಅವರು ಜನರ ಸಹಕಾರದೊಂದಿಗೆ ಕಾಶಿಯನ್ನು ಆರಿಸಿಕೊಂಡು, ಆಧುನಿಕತೆಯನ್ನು ಜ್ಞಾನದಲ್ಲಿ ಸೇರಿಸಿ ಬಿಎಚ್‌ಯು ಸ್ಥಾಪಿಸಿದರು. ಅಳಿಸಿಹಾಕಲು ಪ್ರಯತ್ನಿಸಲಾಗಿದ್ದ ಸರಸ್ವತಿಯನ್ನು ಇಂದಿಗೂ ಜೀವಂತವಾಗಿಡಲಾಗಿದೆ” ಎಂದರು.

ಕೃತಕ ಬುದ್ಧಿಮತ್ತೆಯ ಯುಗದಲ್ಲಿಯೂ ಜಗತ್ತು ಭಾರತೀಯ ಯೋಗವನ್ನು ಸ್ವೀಕರಿಸಿದೆ ಎಂದು ಸುನಿಲ್ ಅಂಬೇಕರ್ ಉದಾಹರಿಸಿದರು. “ತಂತ್ರಜ್ಞಾನದಿಂದ ನಮಗೆ ದೊರೆಯುವ ಶಕ್ತಿಯನ್ನು ಯಾವ ದಿಕ್ಕಿನಲ್ಲಿ ಬಳಸಬೇಕು ಎಂಬುದೇ ಮುಖ್ಯ. ಭಾರತ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿ ಸಾಗುತ್ತಿದೆ. ಆದ್ದರಿಂದ ನಾವು ನಮ್ಮದೇ ಆದ ಮಾನದಂಡಗಳನ್ನು ನಿಗದಿಪಡಿಸಿಕೊಳ್ಳಬೇಕು” ಎಂದರು.

ಭಾರತೀಯ ಸಂಸ್ಕೃತಿಯಲ್ಲಿ ಶುದ್ಧ ಚಾರಿತ್ರ್ಯ ಅತ್ಯಂತ ಪ್ರಮುಖ ಅಂಶವಾಗಿದ್ದು, “ಸ್ವಾರ್ಥವು ಇತರರಿಗೆ ಅಡ್ಡಿಯಾಗಬಾರದು. ಚಾರಿತ್ರ್ಯದ ಕೊರತೆ ಇದ್ದಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಲು ಸಾಧ್ಯವಿಲ್ಲ. ದೇಶದ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಶುದ್ಧ ಚಾರಿತ್ರ್ಯವೇ ಅಡಿಪಾಯ” ಎಂದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಿಥಿಲೇಶ್ ಶರಣ್ ನಂದಿನಿ ಮಹಾರಾಜ್, ಅಧ್ಯಕ್ಷರಾಗಿ ಕೆಎಯು ಉಪಕುಲಪತಿ ಪ್ರೊ. ಅಜಿತ್ ಚತುರ್ವೇದಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆರಂಭದಲ್ಲಿ ಕಾಶಿ ಶಬ್ದೋತ್ಸವ 2025 ಸಂಯೋಜಕರಾದ ಡಾ. ಹರೇಂದ್ರ ರೈ ಅವರು ಸ್ವಾಗತಿಸಿದರು. ಮೂರು ದಿನಗಳ ಈ ಉತ್ಸವದಲ್ಲಿ ಭಾರತೀಯ ಸಂಸ್ಕೃತಿಯ ಪ್ರಕಾರಗಳನ್ನು ಚರ್ಚಿಸಲಾಗುತ್ತಿದೆ.

ಆರ್‌ಎಸ್‌ಎಸ್ ಪ್ರಚಾರಕರಾದ ಸುಭಾಷ್, ರಾಮಶಿಶ್, ಮನೋಜ್‌ಕಾಂತ್, ರಾಜ್ಯ ಪ್ರಚಾರಕ ರಮೇಶ್, ಸಹ ರಾಜ್ಯ ಕಾರ್ಯವಾಹ ರಾಕೇಶ್ ಸೇರಿದಂತೆ ಅನೇಕ ಪ್ರಮುಖರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande