
ಬೆಂಗಳೂರು, 13 ನವೆಂಬರ್ (ಹಿ.ಸ.) :
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ರೈತರು ವರ್ಷವಿಡೀ ಬೆವರು ಸುರಿಸಿ ಬೆಳೆದ ನೂರಾರು ಟನ್ ಕಬ್ಬು, ಲಕ್ಷಾಂತರ ರೂಪಾಯಿ ಬೆಳೆ ಬಾಳುವ 50ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳು ಬೆಂಕಿಗೆ ಆಹುತಿ ಆಗುತ್ತಿರುವ ಹೃದಯವಿದ್ರಾವಕ ದೃಶ್ಯಾವಳಿಗಳು ದಿಗ್ಭ್ರಮೆ ಮೂಡಿಸಿದೆ.
ರಾಜ್ಯದ ಕಬ್ಬು ಬೆಳೆಗಾರರ ಇಂದಿನ ಈ ದಾರುಣ ಪರಿಸ್ಥಿತಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ. ಪ್ರತಿಭಟನಾನಿರತ ರೈತರನ್ನು ಭೇಟಿ ಮಾಡಿ, ಸಮಾಧಾನದಿಂದ ಅವರ ಸಮಸ್ಯೆ ಕೇಳಿ, ಅವರಿಗೆ ಧೈರ್ಯ ತುಂಬಿ, ಒಮ್ಮತವಾದ ಒಂದು ಬೆಲೆ ನಿಗದಿ ಮಾಡಿ, ಕೂಡಲೇ ರೈತರಿಗೆ ಹಣ ತಲುಪಿಸುವುದು ಬಿಟ್ಟು, ಬೆಂಗಳೂರಿನ ಎಸಿ ಕಚೇರಿಗಳಲ್ಲಿ ಕಾಟಾಚಾರಕ್ಕೆ ಸಕ್ಕರೆ ಕಾರ್ಖಾನೆ ಮಾಲೀಕರು, ರೈತ ಮುಖಂಡರ ಸಭೆ ನಡೆಸಿ ಕೈತೊಳೆದುಕೊಂಡ ಸಿಎಂ @siddaramaiah ಸರ್ಕಾರ, ಇವತ್ತು ರೈತರು ನಡುಬೀದಿಯಲ್ಲಿ ಕಣ್ಣೀರಿಡುವ ದುಸ್ಥಿತಿಗೆ ತಂದಿಟ್ಟಿದೆ.
ಭೂತಾಯಿಯನ್ನೇ ನಂಬಿ ಬದುಕುವ ರೈತನಿಗೆ, ಮಣ್ಣನ್ನೇ ನಂಬಿ ಬದುಕುವ ರೈತನಿಗೆ ಆತ ಬೆಳೆದ ಬೆಳೆ ತನ್ನ ಹೆತ್ತ ಮಗುವಿನ ಸಮಾನ. ತನ್ನ ಕಣ್ಣು ಮುಂದೆಯೇ ಆತ ವರ್ಷವಿಡೀ ಕಷ್ಟ ಪಟ್ಟು ಬೆಳೆದ ಬೆಳೆ ಸುಟ್ಟು ಭಸ್ಮವಾಗುವುದನ್ನು ನೋಡಬೇಕಾದರೆ ಆ ರೈತ ಎಷ್ಟು ಸಂಕಟ ಪಟ್ಟಿರಬೇಡ, ಅನ್ನದಾತನ ಹೊಟ್ಟೆ ಎಷ್ಟು ಉರಿದಿರಬೇಡ.
@INCKarnataka ಸರ್ಕಾರ ಇನ್ನಾದರೂ ಈ ನಿರ್ಲಕ್ಷ್ಯ ಧೋರಣೆ ಬಿಟ್ಟು ಕಬ್ಬು ಬೆಳೆಗಾರರ ಸಮಸ್ಯೆಯನ್ನ ಗಂಬೀರವಾಗಿ ಪರಿಗಣಿಸಬೇಕು. ಇವತ್ತಿನ ಘಟನೆಯಿಂದ ರೈತರಿಗೆ ಉಂಟಾಗಿರುವ ನಷ್ಟವನ್ನ ಸರ್ಕಾರ ಸೂಕ್ತ ಪರಿಹಾರದ ಮೂಲಕ ರೈತರಿಗೆ ತುಂಬಿಕೊಡಬೇಕು. ಮುಖ್ಯಮಂತ್ರಿಗಳೇ ಸ್ವತಃ ರೈತರನ್ನು ಭೇಟಿ ಮಾಡಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.
ನಾಡಿನ ಅನ್ನದಾತರ ಈ ಹೋರಾಟದಲ್ಲಿ @BJP4Karnataka ಹೆಗಲಿಗೆ ಹೆಗಲು ಕೊಟ್ಟು ಬೆಂಬಲವಾಗಿ ನಿಲ್ಲಲಿದೆ.
-ಆರ್. ಅಶೋಕಪ್ರತಿ ಪಕ್ಷದ ನಾಯಕ, ವಿಧಾನ ಸಭೆ
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ