ಮಹಿಳಾ ಸಮಾಜ ಶಾಲೆಗೆ ನೆಲಬಾಡಿಗೆಗೆ ನೀಡಿದ್ದ ಕರಾರು ರದ್ದು ; ಕ್ರಿಮಿನಲ್ ಪ್ರಕರಣ ದಾಖಲು ಆದೇಶ
ಮಹಿಳಾ ಸಮಾಜ ಶಾಲೆಗೆ ನೆಲಬಾಡಿಗೆಗೆ ನೀಡಿದ್ದ ಕರಾರು ರದ್ದು ;ಕ್ರಿಮಿನಲ್ ಪ್ರಕರಣ ದಾಖಲು ಆದೇಶ.
ಚಿತ್ರ; ಕೋಲಾರ ನಗರದ ಮಹಿಳಾ ಸಮಾಜ ಶಾಲೆ


ಕೋಲಾರ, 13 ನವೆಂಬರ್ (ಹಿ.ಸ) :

ಆ್ಯಂಕರ್ : ಕೋಲಾರ ನಗರದ ಪ್ರತಿಷ್ಥಿತ ಮಹಿಳಾ ಸಮಾಜ ಶಾಲೆಗೆ ಕಾನೂನು ಬಾಹಿರವಾಗಿ ನೆಲಬಾಡಿಗೆ ಆದಾರದ ಮೇಲೆ ನಗರಸಭೆ ನೀಡಿದ್ದ ಗುತ್ತಿಗೆಯನ್ನು ರಾಜ್ಯ ಹೈಕೋರ್ಟ್ ರದ್ದುಪಡಿಸಿದೆ. ಕಾನೂನು ಬಾಹಿರವಾಗಿ ಹನ್ನೆರಡು ವರ್ಷಗಳ ಕಾಲ ನೀಡಲಾದ ಗುತ್ತಿಗೆಯನ್ನು ರದ್ದುಪಡಿಸಲಾಗಿದ್ದು ಅಕ್ರಮಕ್ಕೆ ಕಾರಣರಾದ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಹಾಗು ಗುತ್ತಿಗೆ ಕರಾರು ಪತ್ರವನ್ನು ತಿದ್ದಿ ದಾಖಲೆಗಳನ್ನು ಸೃಷ್ಡಿ ಮಾಡಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಹೈಕೋರ್ಟ್ ನಿರ್ದೇಶನದ ಮೇರೆಗ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಮಹಿಳಾ ಸಮಾಜ ಶಾಲೆಗೆ ತಿಂಗಳಿಗೆ ೨೧೬೦೦ ರೂಪಾಯಿಗೆ ನೆಲ ಬಾಡಿಗೆಗೆ ನೀಡಲು ಕೋಲಾರದ ನಗರಸಭೆಯಲ್ಲಿ ತಾರೀಖು ೩೦ಮಾರ್ಚ್ ೨೦೧೫ ರಂದು ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ನಗರ ಸಭೆಯ ಪೌರಾಯುಕ್ತರು ತಾರೀಖು ೧೯ ಮಾರ್ಚ್ ೨೦೧೬ ರಲ್ಲಿ ಮಹಿಳಾ ಸಮಾಜ ಶಾಲೆಯ ಕಾರ್ಯದರ್ಶಿಯವರಿಗೆ ನೊಂದಾಯಿತವಲ್ಲದ ಗುತ್ತಿಗೆ ಕರಾರು ಮಾಡಿಕೊಟ್ಟಿದ್ದರು.

ನಗರ ಸಭೆಗೆ ಸೇರಿದ ಕೋಟ್ಯ0ತರ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನು ಕಾನೂನು ಬಾಹಿರವಾಗಿ ಗುತ್ತಿಗೆ ನೀಡಿ ನಗರ ಸಭೆಯ ಬೊಕ್ಕಸಕ್ಕೆ ನಷ್ಟ ಮಾಡಲಾಗಿದ್ದು ಗುತ್ತಿಗೆಯನ್ನು ರದ್ದು ಮಾಡಿ ನಗರ ಸಭೆಯ ವಶಕ್ಕೆ ತೆಗೆದುಕೊಂಡು ಅಕ್ರಮಕ್ಕೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ನಗರ ಸಭೆಯ ಸದಸ್ಯರಾದ ಮುರಳಿ ಗೌಡ ಹಾಗು ಪ್ರವೀಣ್ ಗೌಡರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.

ಮಹಿಳಾ ಸಮಾಜ ಶಾಲೆಗೆ ನೀಡಲಾಗಿದ್ದ ಗುತ್ತಿಗೆಯನ್ನು ಅಂದಿನ ಕೋಲಾರ ಜಿಲ್ಲಾಧಿಕಾರಿ ರದ್ದುಪಡಿಸಿದ್ದರು. ಅಕ್ರಮಕ್ಕೆ ಕಾರಣರಾದ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಪೌರಾಡಳಿತ ನಿರ್ದೇಶಕರು ತಾರೀಖು ೫ ಡಿಸೆಂಬರ್ ೨೦೧೮ ರಲ್ಲಿ ಆದೇಶ ಹೊರಡಿಸಿದ್ದರು.

ಅಲ್ಲದೆ ಮಹಿಳಾ ಸಮಾಜ ಶಾಲೆಯ ಪರವಾಗಿ ಶಾಲೆಯ ಅಧ್ಯಕ್ಷರು ಮತ್ತು ನಗರಸಭೆಯ ಪೌರಾಯುಕ್ತರ ನಡುವೆ ಆಗಿದ್ದ ನೆಲಬಾಡಿಗೆ ಗುತ್ತಿಗೆ ಕರಾರನ್ನು ರದ್ದುಪಡಿಸಲಾಗಿತ್ತು. ಈ ಆದೇಶವನ್ನು ಪ್ರಶ್ನೆ ಮಾಡಿ ಮಹಿಳಾ ಸಮಾಜ ರಾಜ್ಯ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿತ್ತು. ಆದರೆ ನ್ಯಾಯಾಲಯ ಅರ್ಜಿಯನ್ನು ಇರ್ಥಪಡಿಸಿ ಮಹಿಳಾ ಸಮಾಜ ಶಾಲೆಗೆ ಒಂದು ವೇಳೆ ನೀಡಲಾಗಿರುವ ಗುತ್ತಿಗೆಯನ್ನು ಮುಂದುವರೆಸುವುದಾದರೆ ಸರ್ಕಾರದಿಂದ ಘಟನೋತ್ತರ ಮಂಜೂರಾತಿ ಪಡೆಯಬೇಕು ಎಂದು ಹೇಳಿದೆ.

ಹೈಕೋರ್ಟ್ ಮುಂದೆ ಹೇಳಿಕೆ ದಾಖಲಿಸಿದ ನಗರ ಸಭೆಯ ಪೌರಾಯುಕ್ತರು ಮಹಿಳಾ ಸಮಾಜ ಶಾಲೆಗೆ ಗುತ್ತಿಗೆ ನೀಡಲಾಗಿರುವ ಕಡತ ನಗರ ಸಭೆಯಲ್ಲಿ ಲಭ್ಯವಿಲ್ಲವೆಂದು ತಿಳಿಸಿದ್ದರು. ಕಳೆದ ೧೯೬೬ ರಲ್ಲಿ ಮಹಿಳಾ ಸಮಾಜ ಶಾಲೆಗೆ ನಗರಸಭೆಗೆ ಸೇರಿದ ಆಸ್ತಿಯನ್ನು ಮಾರಾಟ ಮಾಡಲಾಗಿದ್ದ ಮಾರಾಟ ಪತ್ರವನ್ನು ತಿದ್ದಲಾಗಿದೆ. ಆದ್ದರಿಂದ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುಂತೆ ಹೈಕೋರ್ಟ್ ಆದೇಶ ಮಾಡಿದೆ.

ಮಹಿಳಾ ಸಮಾಜ ಶಾಲೆಗೆ ನೀಡಲಾಗಿದ್ದ ಗುತ್ತಿಗೆಯನ್ನು ರದ್ದುಪಡಿಸಲಾಗಿದ್ದ ಕ್ರಮವನ್ನು ಪ್ರಶ್ನೆ ಮಾಡಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ರಾಜ್ಯ ಹೈಕೋರ್ಟ್ ವಜಾಗೊಳಿಸಿದೆ. ಮಹಿಳಾ ಸಮಾಜ ಶಾಲೆಗೆ ನೀಡಲಾಗಿರುವ ಗುತ್ತಿಯನ್ನು ರದ್ದುಪಡಿಸಲಾಗಿದ್ದು ಬಹಿರಂಗ ಹರಾಜು ಮಾಡಲು ಸೂಚಿಸಲಾಗಿದೆ.

ಮಹಿಳಾ ಸಮಾಜ ಶಾಲೆಗೆ ನೀಡಲಾಗಿರುವ ಗುತ್ತಿಗೆ ಕರಾರನ್ನು ಮುಂದುವರೆಸುವ ಬಗ್ಗೆ ಹೈಕೋರ್ಟ್ ಆದೇಶ ತಲುಪಿದ ಮೂರು ತಿಂಗಳಲ್ಲಿ ಇತ್ಯರ್ಥ ಪಡಿಸುವಂತೆ ಆದೇಶಿಸಿದೆ.ತಪ್ಪಿತಸ್ತರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲು ,ಕ್ರಿಮಿನಲ್ ಪ್ರಕರಣ ದಾಖಲಿಸಿವಂತೆ ಹಾಗು ಮಹಿಳಾ ಸಮಾಜ ಶಾಲೆಗೆ ನೀಡಲಾಗಿರುವ ಗುತ್ತಿಗೆಗೆ ಘಟನೋತ್ತರ ಮಂಜೂರಾತಿ ನೀಡುವ ಬಗ್ಗೆ ಹದಿನೈದು ದಿನಗಳಲ್ಲಿ ಸ್ಪಷ್ಟವಾದ ವರದಿಯನ್ನು ಸಲ್ಲಿಸುವಂತೆ ಪೌರಾಡಳಿತ ನಿರ್ದೇಶಕರು ಕೋಲಾರ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದಾರೆ.

ಮಹಿಳಾ ಸಮಾಜ ಶಾಲೆಗೆ ನೀಡಲಾಗಿದ್ದ ಗುತ್ತಿಗೆ ಕಾನೂನು ಬಾಹಿರವಾಗಿದ್ದು ರದ್ದುಪಡಿಸುವಂತೆ ಕೋರಿ ನಗರಸಭಾ ಸದಸ್ಯ ಆರ್.ಮುರಳೀ ಗೌಡರು ಅಂದಿನ ಜಿಲ್ಲಾಧಿಕಾರಿ ಮಂಜುನಾಥ್‌ರವರಿಗೆ ದೂರು ನೀಡಿದ್ದರು. ಜಿಲ್ಲಾಧಿಕಾರಿ ಮಂಜುನಾಥ್‌ರವರು ಗುತ್ತಿಗೆಯನ್ನು ರದ್ದುಪಡಿಸಿದ್ದರು.

ಈ ಆದೇಶವನವನ್ನು ಮಹಿಳಾ ಸಮಾಜ ಶಾಲೆ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತ್ತು. ಮಹಿಳಾ ಸಮಾಜ ಶಾಲೆ ಸಲ್ಲಿಸಿದ್ದ ರಿಟ್ ಅರ್ಜಿಯಲ್ಲಿ ನಗರಸಭಾ ಸದಸ್ಯ ಪ್ರವೀಣ್ ಗೌಡರು ಇಂಪ್ಲೀಡಿಂಗ್ ಅರ್ಜಿಸಲ್ಲಿಸದ್ದರು. ದಾಖಲೆಗಳನ್ನು ಫೋರ್ಜರಿ ಮಾಡಿದ ನಗರಸಭೆಯ ಅಧಿಕಾರಿಗಳು ,ಅಧ್ಯಕ್ಷ ಬಿ.ಎಂ.ಮುಬಾರಕ್ ಹಾಗು ಮಹಿಳಾ ಸಮಾಜ ಶಾಲೆಯ ಅಧ್ಯಕ್ಷರು ಹಾಗು ಕಾರ್ಯದರ್ಶಿಗಳ ವಿರುದ್ಧ ನ್ಯಾಯಾಲಯದ ಮೂಲಕ ಪ್ರವೀಣ್ ಗೌಡರು ಖಾಸಗಿ ದೂರು ದಾಖಲಿಸಿದ್ದರು.

ಖಾಸಗಿ ದೂರನ್ನು ರದ್ದುಪಡಿಸಲು ಮಹಿಳಾ ಸಮಾಜ ಶಾಲೆಯ ಆಡಳಿತ ಮಂಡಳಿ ಹೈಕೋರ್ಟ್‌ನಲ್ಲಿ ಪ್ರತ್ಯೇಕ ರಿಟ್ ಅರ್ಜಿ ಸಲ್ಲಿಸಿದೆ.ನಗರ ಸಭೆಯ ಆಸ್ತಿ ಉಳಿಸಲು ಮುರಳಿ ಗೌಡ ಹಾಗು ಪ್ರವೀಣ್ ಗೌಡರು ನಡೆಸಿದ ಕಾನೂನು ಹೋರಾಟಕ್ಕೆ ಜಯ ದೊರೆತಿದೆ. ಮಹಿಳಾ ಸಮಾಜ ಶಾಲೆಗೆ ನೀಡಲಾಗಿದ್ದ ಗುತ್ತಿಗೆಯ ಅವಧಿ ಮುಗಿದಿದೆ ಎಂದು ಅಂದಿನ ನಗರ ಸಭೆಯ ಅಧ್ಯಕ್ಷ ಬಿ.ಎಂ.ಮುಬಾರಕ್ ಶಾಲೆಯ ಆವರಣದಲ್ಲಿ ಪತ್ರಿಕಾ ಘೋಷ್ಠಿ ನಡೆಸಿ ಬೀಗ ಹಾಕುವುದಾಗಿ ಹೇಳಿದ್ದರು.ಆದರೆ ಮುಂದಿನ ದಿನಗಳಲ್ಲಿ ಹನ್ನೆರಡು ವರ್ಷಗಳ ಅವಧಿಗೆ ನೊಂದಾಯಿತ ಅಲ್ಲದ ಕರಾರು ಪತ್ರದ ಮೂಲಕ ಗುತ್ತಿಗೆ ನೀಡಲು ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದರು.

ಚಿತ್ರ; ಕೋಲಾರ ನಗರದ ಮಹಿಳಾ ಸಮಾಜ ಶಾಲೆ

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande