ಅಯೋಧ್ಯೆ, 09 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಕುಟುಂಬದೊಂದಿಗೆ ಗುರುವಾರ ಶ್ರೀರಾಮ ಜನ್ಮಭೂಮಿ ದೇವಸ್ಥಾನಕ್ಕೆ ಭೇಟಿ ನೀಡಿ ಭಗವಾನ್ ಶ್ರೀರಾಮ ಲಲ್ಲಾ ದರ್ಶನ ಪಡೆದು ಆರತಿ ಸಲ್ಲಿಸಿದರು.
ಸಚಿವೆ ಅವರು ಶ್ರೀರಾಮ ದರ್ಬಾರ್ ಸಂಕೀರ್ಣಕ್ಕೆ ಭೇಟಿ ನೀಡಿ ಕುಬೇರ ತಿಲಾದಲ್ಲಿ ಮಹಾದೇವನಿಗೆ ಅಭಿಷೇಕ ಮತ್ತು ಪೂಜೆ ನೆರವೇರಿಸಿದರು. ಈ ಸಂದರ್ಭ ಟ್ರಸ್ಟ್ ಸದಸ್ಯರು ಮತ್ತು ಸ್ಥಳೀಯ ಆಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.
ಎರಡು ದಿನಗಳ ಭೇಟಿಗಾಗಿ ಉತ್ತರ ಪ್ರದೇಶದ ಶ್ರೀರಾಮನ ನಗರಿ ಅಯೋಧ್ಯೆಗೆ ಆಗಮಿಸಿದ ಸೀತಾರಾಮನ್ ಅವರು, ಗುರುವಾರ ದೇವಸ್ಥಾನ ಸಂಕೀರ್ಣದ ವಿವಿಧ ಭಾಗಗಳಿಗೆ ಭೇಟಿ ನೀಡಿದರು.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ದೇವಸ್ಥಾನದ ನಿರ್ಮಾಣ ಪ್ರಗತಿ ಮತ್ತು ಸಂಕೀರ್ಣದ ವಿನ್ಯಾಸ ಕುರಿತು ಕೇಂದ್ರ ಸಚಿವೆ ಹಾಗೂ ಅವರ ಕುಟುಂಬಕ್ಕೆ ವಿವರಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa