ಭಾರತ–ಬ್ರಿಟನ್ ಬಾಂಧವ್ಯಕ್ಕೆ ಹೊಸ ಉತ್ಸಾಹ
ಮುಂಬಯಿ, 09 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ನಡುವಿನ ಉನ್ನತ ಮಟ್ಟದ ಮಾತುಕತೆಗಳಿಂದ ಭಾರತ–ಬ್ರಿಟನ್ ಬಾಂಧವ್ಯಕ್ಕೆ ಹೊಸ ಚೈತನ್ಯ ಬಂದಿದೆ. ಮುಂಬೈಯಲ್ಲಿ ನಡೆದ ಸಭೆಯ ಬಳಿಕ ಇಬ್ಬರೂ ನಾಯಕರು ವ್ಯಾಪಕ ಆರ್ಥಿಕ ಮತ್ತು ವ್ಯಾಪಾರ
Ind-uk


ಮುಂಬಯಿ, 09 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ನಡುವಿನ ಉನ್ನತ ಮಟ್ಟದ ಮಾತುಕತೆಗಳಿಂದ ಭಾರತ–ಬ್ರಿಟನ್ ಬಾಂಧವ್ಯಕ್ಕೆ ಹೊಸ ಚೈತನ್ಯ ಬಂದಿದೆ. ಮುಂಬೈಯಲ್ಲಿ ನಡೆದ ಸಭೆಯ ಬಳಿಕ ಇಬ್ಬರೂ ನಾಯಕರು ವ್ಯಾಪಕ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ ಎರಡೂ ದೇಶಗಳ ಸಹಕಾರವನ್ನು ಹೊಸ ಎತ್ತರಕ್ಕೇರಿಸುವುದಾಗಿ ಘೋಷಿಸಿದರು.

ಸ್ಟಾರ್ಮರ್ ಅವರ ನೇತೃತ್ವದಲ್ಲಿ ಭಾರತ–ಬ್ರಿಟನ್ ಸಂಬಂಧ ಹೊಸ ವೇಗ ಪಡೆದಿದೆ. ಈ ಒಪ್ಪಂದವು ವ್ಯಾಪಾರ ವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಹೂಡಿಕೆಗೆ ಹೊಸ ದಾರಿಗಳನ್ನು ತೆರೆದುಕೊಳ್ಳಲಿದೆ. ಎರಡೂ ರಾಷ್ಟ್ರಗಳು ಕ್ರಿಟಿಕಲ್ ಮಿನರಲ್ಸ್, ತಂತ್ರಜ್ಞಾನ, ಶಿಕ್ಷಣ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಸಹಕಾರ ಬಲಪಡಿಸಲು ನಿರ್ಧರಿಸಿದ್ದೇವೆ ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು

ಮೋದಿಯವರು ಬ್ರಿಟನ್ ವಿಶ್ವವಿದ್ಯಾಲಯಗಳು ಭಾರತದಲ್ಲಿ ಕ್ಯಾಂಪಸ್ ತೆರೆಯುತ್ತಿರುವುದು ಮತ್ತು ರಕ್ಷಣಾ ತರಬೇತಿಯಲ್ಲಿ ಹೊಸ ಒಪ್ಪಂದಗಳು ಸಹಭಾಗಿತ್ವದ ಹೊಸ ಹಂತದ ಸೂಚಕವೆಂದು ಹೇಳಿದರು. “ಭಾರತದ ಉತ್ಸಾಹ ಮತ್ತು ಬ್ರಿಟನ್‌ನ ನಿಪುಣತೆ ಸೇರಿ ಜಾಗತಿಕ ಅಭಿವೃದ್ಧಿಗೆ ಶಕ್ತಿ ನೀಡಲಿದೆ,” ಎಂದರು.

ಈ ಭೇಟಿಯು ಭಾರತ–ಬ್ರಿಟನ್ ಸಹಕಾರದ ಹೊಸ ಯುಗದ ಆರಂಭವಾಗಿದೆ. ಭಾರತವು ವೇಗವಾಗಿ ಅಭಿವೃದ್ಧಿಯತ್ತ ಸಾಗುತ್ತಿದೆ. ಟೆಕ್ನಾಲಜಿ ಸಿಕ್ಯೂರಿಟಿ ಇನಿಷಿಯೇಟಿವ್ ಅಡಿಯಲ್ಲಿ ಕೃತಕ ಬುದ್ಧಿಮತ್ತೆ, ರಕ್ಷಣಾ ಮತ್ತು ಸಂವಹನ ಕ್ಷೇತ್ರಗಳಲ್ಲಿ ಹೊಸ ಸಹಕಾರ ಆರಂಭವಾಗಲಿದೆ ಎಂದು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಹೇಳಿದರು

ಎರಡೂ ರಾಷ್ಟ್ರಗಳು ಮುಂದಿನ ದಶಕಗಳಲ್ಲಿ ಆರ್ಥಿಕ, ತಂತ್ರಜ್ಞಾನ ಮತ್ತು ಭದ್ರತಾ ಸಹಕಾರದ ಹೊಸ ಮಾದರಿಯನ್ನು ನಿರ್ಮಿಸುವ ಗುರಿ ಹೊಂದಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande