ಕಂಪ್ಲಿ : ಮೂರು ದಿನಗಳ ಕೃಷಿ ತರಬೇತಿ ; ಅರ್ಜಿ ಆಹ್ವಾನ
ಕಂಪ್ಲಿ, 08 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಕಂಪ್ಲಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ವತಿಯಿಂದ ಸಾವಯವ ಕೃಷಿ, ನೈಸರ್ಗಿಕ ಕೃಷಿ, ತೋಟಗಾರಿಕೆ ಹಾಗೂ ಹೈನುಗಾರಿಕೆ ಕುರಿತು ಅಕ್ಟೋಬರ್ 16, 17 ಮತ್ತು 18 ರವರೆಗೆ ಮೂರು ದಿನಗಳ ವಿಶೇಷ ಸಾಂಸ್ಥಿಕ ತರಬೇತಿ ನೀಡಲಾಗುತ್ತಿದೆ. ಬಳ್ಳಾರಿ
ಕಂಪ್ಲಿ : ಮೂರು ದಿನಗಳ ಕೃಷಿ ತರಬೇತಿ ; ಅರ್ಜಿ ಆಹ್ವಾನ


ಕಂಪ್ಲಿ, 08 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕಂಪ್ಲಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ವತಿಯಿಂದ ಸಾವಯವ ಕೃಷಿ, ನೈಸರ್ಗಿಕ ಕೃಷಿ, ತೋಟಗಾರಿಕೆ ಹಾಗೂ ಹೈನುಗಾರಿಕೆ ಕುರಿತು ಅಕ್ಟೋಬರ್ 16, 17 ಮತ್ತು 18 ರವರೆಗೆ ಮೂರು ದಿನಗಳ ವಿಶೇಷ ಸಾಂಸ್ಥಿಕ ತರಬೇತಿ ನೀಡಲಾಗುತ್ತಿದೆ.

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ರೈತರು, ಮಹಿಳಾ ರೈತರು ಹೆಸರನ್ನು ನೊಂದಾಯಿಸಿಕೊಳ್ಳಲು ಕೃಷಿ ಅಧಿಕಾರಿ ಯೇಸುಬಾಬು-ಮೊ.6360645255 ಮತ್ತು ಸಹಾಯಕ ಕೃಷಿ ನಿರ್ದೇಶಕಿ ವಿದ್ಯಾವತಿ ಹೊಸಮನಿ-ಮೊ.7353533138 ಗೆ ಸಂಪರ್ಕಿಸಬಹುದಾಗಿದೆ.

ತರಬೇತಿಯಲ್ಲಿ ಪಾಲ್ಗೊಳ್ಳುವವರಿಗೆ ಉಚಿತ ಊಟ ಹಾಗೂ ವಸತಿ ವ್ಯವಸ್ಥೆ ಇದೆ. ಆಸಕ್ತರು ಜಮೀನಿನ ಎಫ್.ಐ.ಡಿ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯೊಂದಿಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande