ಕೊಲೆ ಆರೋಪಿಗಳಿಗೆ ಶಿಕ್ಷೆ, ದಂಡ
ವಿಜಯಪುರ, 08 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ತನ್ನ ತಂಗಿಯೊಂದಿಗೆ ಸಲುಗೆಯಿಂದ ಇರಬೇಡ ಎಂದು ಬೈದು ತಾಕೀತು ಮಾಡಿದ ಕಾರಣಕ್ಕಾಗಿ ಕೋಪಗೊಂಡು ಕೊಲೆ ಮಾಡಿ ನದಿಗೆ ಎಸೆದ ಆರೋಪ ಸಾಕ್ಷಾದಾರಗಳಿಂದ ರುಜುವಾತಾಗಿದ್ದು, ಆರೋಪಿಗಳಾದ ಬೀಳಗಿ ತಾಲೂಕಿನ ಕೊಪ್ಪ ಎಸ್ ಆರ್ ಗ್ರಾಮದ ಸಂತೋಷ ಪೀರಪ್ಪ ಶಿರೂರ ಮತ್ತು ಆತನ
ಕೊಲೆ ಆರೋಪಿಗಳಿಗೆ ಶಿಕ್ಷೆ, ದಂಡ


ವಿಜಯಪುರ, 08 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ತನ್ನ ತಂಗಿಯೊಂದಿಗೆ ಸಲುಗೆಯಿಂದ ಇರಬೇಡ ಎಂದು ಬೈದು ತಾಕೀತು ಮಾಡಿದ ಕಾರಣಕ್ಕಾಗಿ ಕೋಪಗೊಂಡು ಕೊಲೆ ಮಾಡಿ ನದಿಗೆ ಎಸೆದ ಆರೋಪ ಸಾಕ್ಷಾದಾರಗಳಿಂದ ರುಜುವಾತಾಗಿದ್ದು, ಆರೋಪಿಗಳಾದ ಬೀಳಗಿ ತಾಲೂಕಿನ ಕೊಪ್ಪ ಎಸ್ ಆರ್ ಗ್ರಾಮದ ಸಂತೋಷ ಪೀರಪ್ಪ ಶಿರೂರ ಮತ್ತು ಆತನ ಸ್ನೇಹಿತ ಮಂಜುನಾಥ ಬಾಲಪ್ಪ ಬಿರಾದಾರ ಇಬ್ಬರಿಗೂ ಕಲಂ 120(ಬಿ), 302, 201 ಐಪಿಸಿ ಅಡಿಗಳಲ್ಲಿ ಜೀವಾವಧಿ ಶಿಕ್ಷೆ ಮತ್ತು ತಲಾ 70,000 ರೂ.ಗಳ ದಂಡ ವಿಧಿಸಿ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande