
ವಿಜಯಪುರ, 30 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ನವೆಂಬರ್ ೨೦೨೫ರ ಅಂಗವಾಗಿ ಮಕ್ಕಳ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನವನಗರ, ಬಾಗಲಕೋಟೆ ಕಚೇರಿಯಿಂದ ಮಕ್ಕಳ ಮಾರಾಟ ಅಪರಾಧ, ಮಕ್ಕಳನ್ನು ಮಾರುವವರಿಗೆ ಹಾಗೂ ಕೊಳ್ಳುವವರಿಗೆ ಬಾಲನ್ಯಾಯ ಕಾಯ್ದೆ ೨೦೧೫ ಸೆಕ್ಷನ್ ೮೧ ರನ್ವಯ ೫ ವರ್ಷಗಳವರೆಗೆ ಜೈಲು ಮತ್ತು ರೂ.೧ ಲಕ್ಷಗಳವರೆಗೆ ದಂಡ ವಿಧಿಸಬಹುದು.
ಈ ಅಪರಾಧದಲ್ಲಿ ಆಸ್ಪತ್ರೆಯವರು ಶಾಮೀಲಾದರೆ ಶಿಕ್ಷೆಯ ಅವಧಿ ೩ ವರ್ಷಗಳಿಗೆ ಕಡಿಮೆ ಇಲ್ಲದಂತೆ ೭ ವರ್ಷಗಳವರೆಗೆ ವಿಸ್ತರಣೆ ಮಾಡಲಾಗುವುದು. ಅನಾಥ, ಪರಿತ್ಯೆಕ್ತ ಮತ್ತು ಒಪ್ಪಿಸಲ್ಪಟ್ಟ ಮಕ್ಕಳು ಕಂಡು ಬಂದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸ್ತ್ರೀ ಶಕ್ತಿ ಭವನ, ಸೆಕ್ಟರ್ ನಂ-೪, ನವನಗರ, ಬಾಗಲಕೋಟೆ (೦೮೩೫೪-೨೯೫೩೪೫), ಮಕ್ಕಳ ಸಹಾಯವಾಣಿ-೧೦೯೮ ಅಥವಾ ಸರ್ಚ ಸ್ವಯಂ ಸೇವಾ ಸಂಸ್ಥೆ, ಅಮೂಲ್ಯ(ಪಿ) ದತ್ತು ಸ್ವೀಕಾರ ಕೇಂದ್ರ, ಸೆಕ್ಟರ್ ನಂ-೫೦, ನವನಗರ, ಬಾಗಲಕೋಟೆ (೯೪೪೮೮೦೧೪೭೩) ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande