
ವಿಜಯಪುರ, 30 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ವಿಜಯಪುರ ನಗರದ ಬಿ.ಎಲ್.ಡಿ.ಇ ಡಿಮ್ಡ್ ವಿಶ್ವವಿದ್ಯಾಲಯ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ(KASS) ಪ್ರಾರಂಭವಾಗಿದೆ.
ಈ ಯೋಜನೆ ಅಡಿಯಲ್ಲಿ ರಾಜ್ಯ ಸರಕಾರದ ನೌಕರರು ಮತ್ತು ಅವರ ಅವಲಂಬಿತರಿಗೆ ನಗದು ರಹಿತ ಪ್ರಥಮ, ದ್ವಿತೀಯ, ತೃತೀಯ ಹಂತದ ಹಾಗೂ ತುರ್ತು ಚಿಕಿತ್ಸೆಗಳ ಸೌಲಬ್ಯಗಳು ಲಭ್ಯವಿವೆ.
ಈ ಯೋಜನೆ ಪಡೆಯಲು ಹಿರಿಯ ಅಧಿಕಾರಿಗಳಿಂದ ಧೃಡಿಕರಿಸಿದ ಎಚ್.ಆರ್.ಎಂ.ಏಸ್ ದಾಖಲಾತಿ ಮತ್ತು ಇತ್ತಿಚಿನ ವೇತನ ಪ್ರಮಾಣ ಪತ್ರ ಹಾಗೂ ರೋಗಿಯ ಆಧಾರ ಕಾರ್ಡ ಅಗತ್ಯವಾಗಿವೆ.
ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕರಾದ ಡಾ. ರಾಜೇಶ ಎಂ. ಹೊನ್ನುಟಗಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ: 08352-262770 Ext. No-2325,
ಮೊಬೈಲ್ ಸಂಖ್ಯೆ- 9591682224 ಸಂಪರ್ಕಿಸಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande