ವಿಜಯಪುರ, 03 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಪ್ರವಾಹ ಇಳಿದ ಮೇಲೆ ಬಿಜೆಪಿ ಅಧ್ಯಯನ ಮಾಡುತ್ತಿದೆ. ಟ್ರೇನ್ ಹೋದ ಮೇಲೆ ಬಿಜೆಪಿ ಟಿಕೆಟ್ ತೆಗೆದುಕೊಂಡಿದೆ ಎಂದು ಸಚಿವ ಎಂ. ಬಿ. ಪಾಟೀಲ್ ವ್ಯಂಗ್ಯ ಮಾಡಿದರು.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಭೀಮಾ ಪ್ರವಾಹ ಹಿನ್ನಲೆ ನಾವು ಈಗಾಗಲೇ ಪರಿಹಾರ ಘೋಷಣೆ ಮಾಡಿದ್ದೇವೆ. ವೈಮಾನಿಕ ಸಮೀಕ್ಷೆ ಬೆನ್ನಲ್ಲೆ ತಡ ಮಾಡದೆ ಪರಿಹಾರ ಘೋಷಣೆ ಮಾಡಿದ್ದೇವೆ. ಹೆಕ್ಟರ್ ಪ್ರದೇಶಕ್ಕೆ 17 ಸಾವಿರ ಘೋಷಣೆ ಮಾಡಿದ್ದೇವೆ. 14, 15ನೇ ಪೈನಾನ್ಸ್ ನಲ್ಲಿ ಕೇಂದ್ರಿದಂದ ರಾಜ್ಯಕ್ಕೆ ಬರಬೇಕಿದ್ದ ಹಣ ಬಂದಿಲ್ಲ ಅನ್ಯಾಯವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯ ವಿಚಾರದಲ್ಲಿ ಕ್ಯಾಬಿನೆಟ್‌ನಲ್ಲಿ ಘೋಷಣೆಯಾದ ಹಣ ಕೊಡಲಿ. ಎನ್. ಡಿ. ಆರ್. ಎಫ್. ಮಾರ್ಗಸೂಚಿ ರಿವೈಸ್ ಮಾಡೋಕೆ ಹೇಳಿ ಎಂದು ಕಿಡಿಕಾರಿದರು.
ಬಿಜೆಪಿಯವರು ಬರೀ ಇಲ್ಲಿಯೇ ಸುತ್ತುತ್ತಿದ್ದಾರೆ. ಕೇಂದ್ರಕ್ಕೆ ಹೋಗಿ ಹಣ ಬಿಡುಗಡೆಗೆ ಒತ್ತಾಯಿಸಲಿ. ಇನ್ನು ಪ್ರವಾಹ ತಗ್ಗಿ ಹೋಗಿದೆ, ಪರಿಹಾರ ಕೊಟ್ಟಾಗಿದೆ ಈಗ ಯಾಕೆ ಬರ್ತಾರೆ. ಬಿಜೆಪಿಯಲ್ಲಿ 7-8 ಟೀಂ ಆಗಿವೆ. ವಿಜಯೇಂದ್ರ, ಆರ್ ಅಶೋಕ್, ಜೋಶಿ, ಸೋಮಣ್ಣ ಬಹಳ ಜನರ ಟೀಂ ಇದೆ. 20 ಜನರ ಟೀಂ ಇದೆ. ಬಾಗಿಲು ಒಂದು ಇಲ್ಲ, ಮೂರು ಇವೆ. ಯಾವ ಬಾಗಿಲಿನಿಂದ ಜನಾ ಬರ್ತಿದ್ದಾರೆ ಗೊತ್ತಿಲ್ಲ. ನಾವು ಪರಿಹಾರ ಕೊಡುವ ಕೆಲಸ ಮಾಡ್ತಿದ್ದೇವೆ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande