
ರಿಯೊ ಡಿ ಜನೈರೊ, 29 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಬ್ರೆಜಿಲ್ ನ ಕ್ರಿಮಿನಲ್ ಗುಂಪು ಕಮಾಂಡೋ ವರ್ಮೆಲ್ಹೋ ಡ್ರಗ್ ಕಾರ್ಟೆಲ್ ವಿರುದ್ಧ ನಡೆದ ಮಿಲಿಟರಿ–ಪೊಲೀಸ್ ಸಂಯುಕ್ತ ಕಾರ್ಯಾಚರಣೆಯಲ್ಲಿ 64 ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ 60 ಮಂದಿ ಅಪರಾಧಿಗಳು, ನಾಲ್ವರು ಪೊಲೀಸ್ ಅಧಿಕಾರಿಗಳು ಸೇರಿದ್ದಾರೆ.
ಸುಮಾರು 2,500 ಭದ್ರತಾ ಸಿಬ್ಬಂದಿ ಭಾಗವಹಿಸಿದ್ದ ಈ ದಾಳಿಯಲ್ಲಿ 81 ಶಂಕಿತರು ಬಂಧನವಾಗಿದ್ದು, 31 ರೈಫಲ್‌ಗಳು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆ ವೇಳೆ ಡ್ರೋನ್‌ಗಳು ಬಾಂಬ್‌ಗಳನ್ನು ಎಸೆದ ಘಟನೆ ವರದಿಯಾಗಿದೆ.
ಗವರ್ನರ್ ಕ್ಲಾಡಿಯೊ ಕ್ಯಾಸ್ಟ್ರೋ ಕಾರ್ಯಾಚರಣೆಯನ್ನು “ಅಪರಾಧಿಗಳ ವಿರುದ್ಧದ ಅತಿ ದೊಡ್ಡ ಹೋರಾಟ” ಎಂದು ಹೇಳಿದ್ದಾರೆ. ಅಲೆಮಾವೊ ಮತ್ತು ಪೆನ್ಹಾ ಪ್ರದೇಶಗಳ ಶಾಲೆಗಳನ್ನು ಮುಚ್ಚಲಾಗಿದ್ದು, ಸೇನೆ ಹಲವು ಬೆಟಾಲಿಯನ್‌ಗಳನ್ನು ನಿಯೋಜಿಸಿದೆ.
1970ರ ದಶಕದಲ್ಲಿ ಹುಟ್ಟಿಕೊಂಡ ಕಮಾಂಡೋ ವರ್ಮೆಲ್ಹೋ ಬ್ರೆಜಿಲ್‌ನ ಅತಿದೊಡ್ಡ ಡ್ರಗ್ ಕಾರ್ಟೆಲ್ ಆಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa