
ಇಸ್ಲಾಮಾಬಾದ್, 27 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಉಗ್ರರ ವಿರುದ್ಧ ನಡೆದ ಭೀಕರ ಚಕಮಕಿಯಲ್ಲಿ 25 ಉಗ್ರರು ಹಾಗೂ ಐದು ಸೈನಿಕರು ಸಾವನ್ನಪ್ಪಿದ್ದಾರೆ.
ಅಕ್ಟೋಬರ್ 24 ಮತ್ತು 25ರಂದು ಅಫ್ಘಾನಿಸ್ತಾನದಿಂದ ಉಗ್ರರು ನುಸುಳಲು ಯತ್ನಿಸಿದ ಎರಡು ಸಂದರ್ಭಗಳಲ್ಲಿ ಭದ್ರತಾ ಪಡೆಗಳು ಅವರನ್ನು ತಡೆದು, ಕುರ್ರಂ ಜಿಲ್ಲೆಯ ಗಾಕಿ ಹಾಗೂ ಉತ್ತರ ವಜೀರಿಸ್ತಾನದ ಸ್ಪಿನ್‌ವಾಮ್ ಪ್ರದೇಶಗಳಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಈ ಉಗ್ರರನ್ನು ಹೊಡೆದುರುಳಿಸಿದವು.
ಸ್ಪಿನ್‌ವಾಮ್‌ನಲ್ಲಿ ನಾಲ್ವರು ಆತ್ಮಹತ್ಯಾ ಬಾಂಬರ್‌ಗಳು ಸೇರಿದಂತೆ 15 ಉಗ್ರರು ಮತ್ತು ಗಾಕಿಯಲ್ಲಿ 10 ಉಗ್ರರು ಮೃತಪಟ್ಟಿದ್ದಾರೆ. ಈ ವೇಳೆ ಹವಾಲ್ದಾರ್ ಮಂಜೂರ್ ಹುಸೇನ್ ಸೇರಿದಂತೆ ಐದು ಪಾಕಿಸ್ತಾನಿ ಸೈನಿಕರು ಮೃತಪಟ್ಟಿದ್ದಾರೆ.
ಐಎಸ್‌ಪಿಆರ್ ವರದಿ ಪ್ರಕಾರ, ಕಾರ್ಯಾಚರಣೆ ನಂತರ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಷ್ಟ್ರಪತಿ ಆಸಿಫ್ ಅಲಿ ಜರ್ದಾರಿ ಮತ್ತು ಪ್ರಧಾನಿ ಶಹಬಾಜ್ ಶರೀಫ್ ಉಗ್ರರ ವಿರುದ್ದ ಕಾರ್ಯಾಚರಣೆ ನಡೆಸಿದ ಸೈನಿಕರ ಧೈರ್ಯವನ್ನು ಶ್ಲಾಘಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa