
ನವದೆಹಲಿ, 28 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಇಂದಿನಿಂದ ಮೂರು ದಿನಗಳ ಕಾಲ ತಮಿಳುನಾಡು ಪ್ರವಾಸ ಕೈಗೊಂಡಿದ್ದಾರೆ.
ಅಧಿಕಾರ ವಹಿಸಿಕೊಂಡ ನಂತರದ ಇದು ಅವರ ಮೊದಲ ರಾಜ್ಯ ಭೇಟಿಯಾಗಿದೆ. ಅವರು ಕೊಯಮತ್ತೂರು, ತಿರುಪ್ಪೂರು, ಮಧುರೈ ಮತ್ತು ರಾಮನಾಥಪುರಂ ಜಿಲ್ಲೆಗಳಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಕೊಯಮತ್ತೂರಿನಲ್ಲಿ ಸಣ್ಣ ಕೈಗಾರಿಕೆಗಳ ಸಂಘದ ಸನ್ಮಾನದಲ್ಲಿ ಪಾಲ್ಗೊಂಡು, ಮಹಾತ್ಮ ಗಾಂಧಿ ಪ್ರತಿಮೆಗೆ ನಮನ ಸಲ್ಲಿಸಲಿದ್ದಾರೆ. ಬಳಿಕ ಪೆರೂರ್ ಮಠದ ಶತಮಾನೋತ್ಸವ ಕಾರ್ಯಕ್ರಮದಲ್ಲೂ ಹಾಜರಾಗಲಿದ್ದಾರೆ. ಸಂಜೆ ತಿರುಪ್ಪೂರಿಗೆ ತೆರಳಿ ತಿರುಪ್ಪೂರು ಕುಮಾರನ್ ಪ್ರತಿಮೆಗೆ ಗೌರವ ಸಲ್ಲಿಸಲಿದ್ದಾರೆ.
ಅಕ್ಟೋಬರ್ 29 ರಂದು ತಿರುಪ್ಪೂರಿನಲ್ಲಿ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು, ನಂತರ ಮಧುರೈ ಮೀನಾಕ್ಷಿ ಅಮ್ಮನ್ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಅಕ್ಟೋಬರ್ 30ರಂದು ರಾಮನಾಥಪುರಂ ಜಿಲ್ಲೆಯ ಪಸುಂಪೋಣಿನಲ್ಲಿ ನಡೆಯುವ ಮುತ್ತುರಾಮಲಿಂಗ ತೇವರ್ ಜಯಂತಿ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa