ಮೂರು ದಿನಗಳ ಆರ್‌ಎಸ್‌ಎಸ್‌ ಕಾರ್ಯಕಾರಿ ಮಂಡಳಿ ಸಭೆ
ಜಬಲಪುರ, 28 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿಯ ಮೂರು ದಿನಗಳ ಪ್ರಮುಖರ ಸಭೆ ಮಧ್ಯಪ್ರದೇಶದ ಜಬಲಪುರದಲ್ಲಿ ಅಕ್ಟೋಬರ್ 30 ರಿಂದ ನವೆಂಬರ್ 1ರವರೆಗೆ ನಡೆಯಲಿದೆ. ಸಂಘದ ಶತಮಾನೋತ್ಸವ ವರ್ಷವನ್ನು ಗಮನದಲ್ಲಿಟ್ಟುಕೊಂಡು ಈ ಸಭೆಯನ್ನು ಅತ್ಯಂತ
Rss


ಜಬಲಪುರ, 28 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿಯ ಮೂರು ದಿನಗಳ ಪ್ರಮುಖರ ಸಭೆ ಮಧ್ಯಪ್ರದೇಶದ ಜಬಲಪುರದಲ್ಲಿ ಅಕ್ಟೋಬರ್ 30 ರಿಂದ ನವೆಂಬರ್ 1ರವರೆಗೆ ನಡೆಯಲಿದೆ. ಸಂಘದ ಶತಮಾನೋತ್ಸವ ವರ್ಷವನ್ನು ಗಮನದಲ್ಲಿಟ್ಟುಕೊಂಡು ಈ ಸಭೆಯನ್ನು ಅತ್ಯಂತ ಮಹತ್ವದ ಎಂದು ಪರಿಗಣಿಸಲಾಗಿದೆ.

ಅಖಿಲ ಭಾರತೀಯ ಪ್ರಚಾರ ಮುಖ್ಯಸ್ಥ ಸುನಿಲ್ ಆಂಬೇಕರ್ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಭೆಯಲ್ಲಿ ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯವಾಹ್ ದತ್ತಾತ್ರೇಯ ಹೊಸಬಾಳೆ, ಆರು ಸಹ-ಸರಕಾರ್ಯವಾಹರು, ಸಂಘದ ಅಖಿಲ ಭಾರತೀಯ ಕಾರ್ಯ ವಿಭಾಗಗಳ ಮುಖ್ಯಸ್ಥರು, ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು ಹಾಜರಾಗಲಿದ್ದಾರೆ. ದೇಶದ 46 ಪ್ರಾಂತಗಳಿಂದ ಒಟ್ಟು 407 ಪ್ರಮುಖ ಕಾರ್ಯಕರ್ತರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ ಸಂಘಟನಾ ದೃಷ್ಟಿಯಿಂದ ಪ್ರಮುಖ ವಿಷಯಗಳು, ಶತಮಾನೋತ್ಸವ ಕಾರ್ಯಯೋಜನೆಗಳು, ಹಾಗೂ ಸಾಮಾಜಿಕ, ಶೈಕ್ಷಣಿಕ, ಸೇವಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ಚರ್ಚೆ ನಡೆಯಲಿದೆ. ಜೊತೆಗೆ ದೇಶದ ಪ್ರಸ್ತುತ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿ ಕುರಿತಾಗಿಯೂ ಚಿಂತನೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಈ ಚಿಂತನಾ ಸಭೆಯಲ್ಲಿ ಸಂಘದ ಪಂಚ ಪರಿವರ್ತನ ಅಭಿಯಾನಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಐದು ಅಂಶಗಳಾದ, ಸಾಮಾಜಿಕ ಸಮರಸತೆ, ಕುಟುಂಬ ಪ್ರಬೋಧನ,ಪರಿಸರ ಸಂರಕ್ಷಣೆ, ಸ್ವದೇಶಿ ಆಚರಣೆ, ಮತ್ತುನಾಗರಿಕ ಕರ್ತವ್ಯ ಪಾಲನೆ ಒಳಗೊಂಡಿವೆ.

ಈ ಅಭಿಯಾನದ ಉದ್ದೇಶ ವ್ಯಕ್ತಿಯಿಂದ ಸಮಾಜ ನಿರ್ಮಾಣ ಹಾಗೂ ಸಮಾಜದಿಂದ ರಾಷ್ಟ್ರ ನಿರ್ಮಾಣ ಎನ್ನುವುದು.

ಶತಮಾನೋತ್ಸವ ವರ್ಷದಲ್ಲಿ ಮನೆ ಮನೆ ಸಂಪರ್ಕ ಅಭಿಯಾನವನ್ನು ಕೂಡ ಕೈಗೊಳ್ಳಲಾಗುತ್ತಿದೆ. ನವೆಂಬರ್ 2025ರಿಂದ ಜನವರಿ 2026ರವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಸಂಘದ ಕಾರ್ಯವನ್ನು ಒಂದು ಲಕ್ಷಕ್ಕೂ ಹೆಚ್ಚು ಸ್ಥಳಗಳಿಗೆ ತಲುಪಿಸುವ ಗುರಿ ನಿಗದಿಯಾಗಿದೆ. 15 ರಿಂದ 30 ವರ್ಷದ ಯುವಕರನ್ನು ರಾಷ್ಟ್ರ ನಿರ್ಮಾಣ ಮತ್ತು ಸಾಮಾಜಿಕ ಸೇವೆಗೆ ಪ್ರೇರೇಪಿಸುವ ಯೋಜನೆ ಹೊಂದಲಾಗಿದೆ ಎಂದು ಅಂಬೇಕರ ತಿಳಿಸಿದರು.

ಇದೇ ವೇಳೆ ಹಿಂದೂ ಸಮ್ಮೇಳನಗಳು ಮತ್ತು ನಾಗರಿಕ ಸಂವಾದ ಕಾರ್ಯಕ್ರಮಗಳು ದೇಶದ ವಿವಿಧ ಜಿಲ್ಲೆಗಳಲ್ಲಿ ಆಯೋಜನೆಗೊಳ್ಳಲಿದ್ದು, ಇವುಗಳ ಮೂಲಕ ಸಾಂಸ್ಕೃತಿಕ ಏಕತೆ, ಸೌಹಾರ್ದತೆ ಮತ್ತು ಭಾರತೀಯ ಚಿಂತನೆಯ ಬಲಪಡಿಸುವಿಕೆ ಉದ್ದೇಶವಾಗಿದೆ.

ಸಭೆಯ ವೇಳೆಯಲ್ಲಿ ಗುರು ತೇಗ್ ಬಹಾದೂರ್ ಜಿ ಅವರ 350ನೇ ಬಲಿದಾನ ದಿನ ಹಾಗೂ ಭಗವಾನ್ ಬಿರ್ಸಾ ಮುಂಡಾ ಜಯಂತಿಯ ಹಿನ್ನೆಲೆಯಲ್ಲಿ ವಿಶೇಷ ಭಾಷಣಗಳು ಮತ್ತು ಸ್ಮರಣಾ ಕಾರ್ಯಕ್ರಮಗಳೂ ನಡೆಯಲಿವೆ.

ಸಂಘದ ಉದ್ದೇಶ ರಾಜಕೀಯವಲ್ಲ, ಬದಲಿಗೆ ಸಾಮಾಜಿಕ ಉತ್ತರಣೆಯ ಮೂಲಕ ರಾಷ್ಟ್ರ ಪುನರ್ ನಿರ್ಮಾಣ ಆಗಿದೆ. ಸಂಘದ ಶತಮಾನೋತ್ಸವ ದೃಷ್ಟಿ “ಸಂಸ್ಕಾರಿತ ಮತ್ತು ಸಂಘಟಿತ ಸಮಾಜವೇ ಶಕ್ತಿಶಾಲಿ ಭಾರತದ ಆಧಾರ” ಎಂದು ಅಂಬೇಕರ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande