
ನವದೆಹಲಿ, 27 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಅಕ್ಟೋಬರ್ 28 ರಿಂದ 30ರವರೆಗೆ ತಮಿಳುನಾಡುಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಅಧಿಕಾರ ವಹಿಸಿಕೊಂಡ ಬಳಿಕ ಅವರ ಇದು ಮೊದಲ ತವರು ರಾಜ್ಯ ಪ್ರವಾಸವಾಗಿದೆ.
ಅವರು ಕೊಯಮತ್ತೂರು, ತಿರುಪ್ಪೂರು, ಮಧುರೈ ಮತ್ತು ರಾಮನಾಥಪುರಂ ಜಿಲ್ಲೆಗಳಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಕೊಯಮತ್ತೂರಿನಲ್ಲಿ ಸನ್ಮಾನ ಸಮಾರಂಭ, ಪೆರೂರ್ ಮಠದಲ್ಲಿ ಶಾಂತಲಿಂಗ ರಾಮಸಾಮಿ ಅಡಿಗರ ಶತಮಾನೋತ್ಸವ, ತಿರುಪ್ಪೂರಿನಲ್ಲಿ ಗಾಂಧಿ ಮತ್ತು ಕುಮಾರನ್ ಪ್ರತಿಮೆಗಳಿಗೆ ಪುಷ್ಪನಮನ ಹಾಗೂ ಮಧುರೈ ಮೀನಾಕ್ಷಿ ಅಮ್ಮನ್ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಅಕ್ಟೋಬರ್ 30ರಂದು ಅವರು ರಾಮನಾಥಪುರಂ ಪಸುಂಪೋಣಿನಲ್ಲಿ ಮುತ್ತುರಾಮಲಿಂಗ ತೇವರ್ ಜಯಂತಿ ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa