
ಸಿಂಗಾಪುರ, 25 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಸಿಂಗಾಪುರ ರಾಜ್ಯ ನ್ಯಾಯಾಲಯವು ಭಾರತೀಯ ಮೂಲದ ಸ್ಟಾಫ್ ನರ್ಸ್ ಒಬ್ಬರಿಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಒಂದು ವರ್ಷ ಎರಡು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ದೋಷಿಯಾಗಿ ತೀರ್ಪು ನೀಡಲ್ಪಟ್ಟಿರುವವರು 34 ವರ್ಷದ ಎಲಿಪೆ ಶಿವ ನಾಗು, ಸಿಂಗಾಪುರದ ನಾರ್ತ್ ಬ್ರಿಡ್ಜ್ ರಸ್ತೆಯಲ್ಲಿರುವ ಪ್ರಸಿದ್ಧ ರಫೆಲ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.
ದಿ ಸ್ಟ್ರೈಟ್ಸ್ ಟೈಮ್ಸ್ ವರದಿ ಪ್ರಕಾರ, ಈ ಪ್ರಕರಣವನ್ನು ಡೆಪ್ಯೂಟಿ ಪಬ್ಲಿಕ್ ಪ್ರಾಸಿಕ್ಯೂಟರ್ ಯುಜೀನ್ ಫುವಾ ವಿಚಾರಣೆ ನಡೆಸಿದರು. ಅವರ ಪ್ರಕಾರ, ಘಟನೆ ಜೂನ್ 18 ರಂದು ನಡೆದಿದೆ. ಬಲಿಪಶು ತನ್ನ ಅಜ್ಜನನ್ನು ಆಸ್ಪತ್ರೆಗೆ ಭೇಟಿ ಮಾಡಿದ ವೇಳೆ, ಸಂಜೆ ಸುಮಾರು 7:30ಕ್ಕೆ ಶೌಚಾಲಯಕ್ಕೆ ಹೋದಾಗ ಎಲಿಪೆ ಶಿವ ನಾಗು ಒಳಗೆ ಇಣುಕಿ ನೋಡಿದ್ದಾನೆ. ನಂತರ ಸೋಂಕು ನಿವಾರಕ ಹಚ್ಚುವ ನೆಪದಲ್ಲಿ ಬಲಿಪಶುವಿನ ಕೈಗಳಿಗೆ ಸೋಪು ಹಚ್ಚಿ ಲೈಂಗಿಕ ಕಿರುಕುಳ ನೀಡಿದ್ದಾನೆ.
ಘಟನೆ ಬಹಿರಂಗವಾದ ತಕ್ಷಣವೇ ಆಸ್ಪತ್ರೆಯ ಆಡಳಿತವು ಆರೋಪಿಯನ್ನು ಅಮಾನತುಗೊಳಿಸಿತು. ಬಲಿಪಶು ಶೌಚಾಲಯದಿಂದ ಹೊರಬಂದು ನೇರವಾಗಿ ತನ್ನ ಅಜ್ಜನಿಗೆ ಘಟನೆ ವಿವರಿಸಿದ್ದಾನೆ. ಆಮೇಲೆ ವಿಷಯ ಆಸ್ಪತ್ರೆ ಉನ್ನತ ಅಧಿಕಾರಿಗಳಿಗೆ ತಿಳಿಸಿ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಜೂನ್ 21 ರಂದು ಪ್ರಕರಣ ದಾಖಲಾಗಿದ್ದು, ನಾಗು ಅವರನ್ನು ಎರಡು ದಿನಗಳ ಬಳಿಕ ಬಂಧಿಸಲಾಗಿತ್ತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa