ಕೊಟ್ಟೂರು : ಅಂಚೆಯಣ್ಣನ `ಅಂಚೆ ಮನೆ'ಯ `ಪೋಸ್ಟ ಕಾರ್ಡ್' ಆಹ್ವಾನ
ಕೊಟ್ಟೂರು, 25 ಅಕ್ಟೋಬರ್ (ಹಿ.ಸ.) ಆ್ಯಂಕರ್: ಹೀಗೊಬ್ಬ ನೌಕರ. ತನ್ನ ಗೃಹ ಪ್ರವೇಶಕ್ಕೊಂದು ವಿಶೇಷ ಆಹ್ವಾನ. ಒಂದರ್ಥದಲ್ಲಿ 38 ವರ್ಷಗಳ ಸೇವೆಗೆ ಕೃತಜ್ಞತೆ ಸಲ್ಲಿಸುವ ರೀತಿಯಲ್ಲಿ ಕೊಟ್ಟೂರಿನ `ಅಂಚೆ ಕೊಟ್ರೇಶ್'' ತಮ್ಮ ಮನೆಗೆ `ಅಂಚೆ ಮನೆ'' ಎಂದು ಹೆಸರಿಟ್ಟು ತನ್ನ ಆಪ್ತರು - ಬಂಧುವರ್ಗ ಮತ್ತು
ಕೊಟ್ಟೂರು : ಅಂಚೆಯಣ್ಣನ `ಅಂಚೆ ಮನೆ'ಯ `ಪೋಸ್ಟಕಾರ್ಡ್' ಆಹ್ವಾನ


ಕೊಟ್ಟೂರು : ಅಂಚೆಯಣ್ಣನ `ಅಂಚೆ ಮನೆ'ಯ `ಪೋಸ್ಟಕಾರ್ಡ್' ಆಹ್ವಾನ


ಕೊಟ್ಟೂರು, 25 ಅಕ್ಟೋಬರ್ (ಹಿ.ಸ.)

ಆ್ಯಂಕರ್: ಹೀಗೊಬ್ಬ ನೌಕರ. ತನ್ನ ಗೃಹ ಪ್ರವೇಶಕ್ಕೊಂದು ವಿಶೇಷ ಆಹ್ವಾನ. ಒಂದರ್ಥದಲ್ಲಿ 38 ವರ್ಷಗಳ ಸೇವೆಗೆ ಕೃತಜ್ಞತೆ ಸಲ್ಲಿಸುವ ರೀತಿಯಲ್ಲಿ ಕೊಟ್ಟೂರಿನ `ಅಂಚೆ ಕೊಟ್ರೇಶ್' ತಮ್ಮ ಮನೆಗೆ `ಅಂಚೆ ಮನೆ' ಎಂದು ಹೆಸರಿಟ್ಟು ತನ್ನ ಆಪ್ತರು - ಬಂಧುವರ್ಗ ಮತ್ತು ಮಿತ್ರರು ಹಾಗೂ ಇಲಾಖೆಯ ಸಹದ್ಯೋಗಿಗಳು ಎಲ್ಲರಿಗೂ ಪೋಸ್ಟ್ ಕಾರ್ಡ್‍ನಲ್ಲಿಯೇ ಆಹ್ವಾನಪತ್ರಿಕೆ ನೀಡಿ ಎಲ್ಲರನ್ನೂ ವಿಶೇಷವಾಗಿ ಆಹ್ವಾನಿಸಿದ್ದಾರೆ. ವಿಶೇಷ ಗಮನವನ್ನೂ ಸೆಳೆದಿದ್ದಾರೆ.

34 ವರ್ಷಗಳಿಂದ ಅಂಚೆ ಇಲಾಖೆಯಲ್ಲಿ ಕೆಲಸ ಮಾಡಿ ಕೊಟ್ಟೂರಿನಲ್ಲಿ `ಪೋಸ್ಟ್ ಕೊಟ್ರೇಶ' ಎಂದೇ ಖ್ಯಾತರಾಗಿರುವ ಕೆ. ಕೊಟ್ರೇಶ್ ಅವರು ಅನೇಕರ ಮನೆ ಮಾತು. ಆಪ್ತ ಸ್ನೇಹಿತರು. ಅಂಚೆ ಇಲಾಖೆಯ ಅಘೋಷಿತ ಬ್ರಾಂಡ್ ಅಂಬ್ಯಾಸಡರ್.

ಪೋಸ್ಟಲ್ ಡಿಪಾರ್ಟ್‍ಮೆಂಟ್‍ನಲ್ಲಿ ಅಂಚೆ ಸಹಾಯಕರಾಗಿ ಕರ್ತವ್ಯಕ್ಕೆ ಸೇರಿದ್ದ ಕೆ. ಕೊಟ್ರೇಶ್ ಅವರು ಕೊಟ್ಟೂರು, ಧಾರವಾಡ, ಕಲಬುರಗಿ, ಯಾದಗಿರಿ, ಕಂಪ್ಲಿ, ಬಳ್ಳಾರಿ, ಕೂಡ್ಲಿಗಿ, ಹರಪನಹಳ್ಳಿಯ ವಿವಿಧ ಪೋಸ್ಟ್ ಆಫೀಸ್‍ಗಳಲ್ಲಿ ಕರ್ತವ್ಯ ನಿರ್ವಹಿಸಿ ಜನಸ್ನೇಹಿ ಸೇವೆಯಿಂದಾಗಿ ಜನಪ್ರಿಯರಾಗಿದ್ದಾರೆ.

ಅಂಚೆ ಇಲಾಖೆಯಲ್ಲಿಯೇ ವಿಶೇಷವಾಗಿ ಗುರುತಿಸಿಕೊಂಡಿರುವ ಇವರು, ಕೊಟ್ಟೂರಿನ ಸುತ್ತಲಿರುವ ಪರಿಸರ, ಜಲ ಸಂರಕ್ಷಣೆ, ಐತಿಹಾಸಿಕ ಕೆರೆಯ ಸಂರಕ್ಷಣೆಗಾಗಿ ಪೋಸ್ಟ್‍ಕಾರ್ಡ್ ಚಳವಳಿಯನ್ನು ನಡೆಸಿದ್ದಾರೆ. ವಿದ್ಯಾರ್ಥಿಗಳು ಪೋಸ್ಟ್‍ಕಾರ್ಡ್ ಬರೆಯುವಂತೆ ನಾನಾ ರೀತಿಯಲ್ಲಿ ಪ್ರೋತ್ಸಾಹ ನೀಡಿ, ಮಕ್ಕಳ ಸ್ನೇಹಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಹೂವಿನಹಡಗಲಿ ಪೋಸ್ಟಾಫೀಸ್‍ನಲ್ಲಿ ತಾಲೂಕು ಪೆÇೀಸ್ಟ್ ಮಾಸ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೊಟ್ಟೂರಿನ ಬಸವೇಶ್ವರ ನಗರದಲ್ಲಿರುವ `ಅಂಚೆ ಮನೆ'ಗೆ ಅಕ್ಟೋಬರ್ 26 ರ ಭಾನುವಾರ ತಾವೂ ಬನ್ನಿ, ತಮ್ಮವರನ್ನೂ ಕರೆತನ್ನಿ. ನಿಮಗೆಲ್ಲರಿಗೂ ಪ್ರೀತಿಯ ಆಹ್ವಾನ ಎಂದು ಮುಗುಳ್ನಗುತ್ತಲೇ ಕೈಗೊಂದು `ಪೋಸ್ಟ್ ಕಾರ್ಡ್' ಆಹ್ವಾನ ಪತ್ರಿಕೆ ನೀಡುವ ಅಂಚೆ ಕೊಟ್ರೇಶ್ ನಿಮ್ಮನ್ನೂ ಆಹ್ವಾನಿಸಿದ್ದಾರೆ.

ಅವರ ಮೊಬೈಲ್ ಸಂಖ್ಯೆ : ಕೆ. ಕೊಟ್ರೇಶ್, 94488 77383.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande