ಕೊಕ್ರಝಾರ್ ರೈಲ್ವೆ ಹಳಿ ಸ್ಫೋಟ ಪ್ರಕರಣದ ಆರೋಪಿ ಪೋಲಿಸ್ ಗುಂಡಿಗೆ ಬಲಿ
ಕೊಕ್ರಝಾರ್, 25 ಅಕ್ಟೋಬರ್(ಹಿ.ಸ.) : ಆ್ಯಂಕರ್ : ಅಸ್ಸಾಂನ ಕೊಕ್ರಝಾರ್ ಜಿಲ್ಲೆಯ ಸಲಕತಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಡಂಗ್ಗುರಿಯಲ್ಲಿ ಇಂದು ಮುಂಜಾನೆ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ಮಾವೋವಾದಿ ಸಾವನ್ನಪ್ಪಿದ್ದಾನೆ. ಹತ್ಯೆಗೀಡಾದ ವ್ಯಕ್ತಿಯನ್ನು ಉಕಿಲ್ ಹೆಂಬ್ರಾಮ್ ಎಂದು ಗುರುತಿಸಲಾಗಿದೆ. ಇತ್ತ
Encounter


ಕೊಕ್ರಝಾರ್, 25 ಅಕ್ಟೋಬರ್(ಹಿ.ಸ.) :

ಆ್ಯಂಕರ್ : ಅಸ್ಸಾಂನ ಕೊಕ್ರಝಾರ್ ಜಿಲ್ಲೆಯ ಸಲಕತಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಡಂಗ್ಗುರಿಯಲ್ಲಿ ಇಂದು ಮುಂಜಾನೆ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ಮಾವೋವಾದಿ ಸಾವನ್ನಪ್ಪಿದ್ದಾನೆ.

ಹತ್ಯೆಗೀಡಾದ ವ್ಯಕ್ತಿಯನ್ನು ಉಕಿಲ್ ಹೆಂಬ್ರಾಮ್ ಎಂದು ಗುರುತಿಸಲಾಗಿದೆ.

ಇತ್ತೀಚೆಗೆ, ಅಕ್ಟೋಬರ್ 23ರಂದು ಕೊಕ್ರಝಾರ್‌ನ ಸಲಕಟಿ ರೈಲ್ವೆ ಮಾರ್ಗದಲ್ಲಿ ನಡೆದ ಐಇಡಿ ಸ್ಫೋಟದಲ್ಲಿ ಈತ ಪ್ರಮುಖ ಪಾತ್ರವಹಿಸಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಷ್ಪರಾಜ್ ಸಿಂಗ್ ತಿಳಿಸಿದ್ದಾರೆ.

ಅಕ್ಟೋಬರ್ 23ರಂದು ನಡೆದ ಸ್ಫೋಟವು ಈಶಾನ್ಯ ಗಡಿನಾಡು ರೈಲ್ವೆ ನ ಅಲಿಪುರ್ದೂರ್ ವಿಭಾಗದ ಭಾಗದಲ್ಲಿ ಸಂಭವಿಸಿತ್ತು. ಈ ಘಟನೆಯಿಂದ ರೈಲ್ವೆ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡು ಅಪಾರ ಹಾನಿ ಸಂಭವಿಸಿತ್ತು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande