
ಕಾರಟಗಿ, 24 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಅಂಗವಾಗಿ ಮತದಾರರ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ ಮತದಾರರ ನೋಂದಣಿ ಸಂದರ್ಭ ಮತದಾರರ ಗೊಂದಲ, ದೂರು ಪರಿಹರಿಸುವ ಉದ್ದೇಶದಿಂದ ಕಾರಟಗಿಯ ತಹಶೀಲ್ದಾರ ಕಾರ್ಯಾಲಯದ ಸಿಬ್ಬಂದಿ ಹಾಲ್‍ನಲ್ಲಿ ದೂರು ಮೇಲ್ವಿಚಾರಣೆ ತಂಡ ಹಾಗೂ ಮತದಾರರ ಮಾಹಿತಿ ಮತ್ತು ಸಲಹಾ ಕೇಂದ್ರ ಸ್ಥಾಪಿಸಲಾಗಿದೆ.
ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ವಯ ಹೊಸದಾಗಿ ಮತದಾರರ ಪಟ್ಟಿಯನ್ನು ಸಿದ್ದಪಡಿಸಬೇಕಾಗಿರುವುದರಿಂದ ಈ ಕಾರ್ಯಕ್ಕಾಗಿ ಅರ್ಹ ಮತದಾರರು ನೋಂದಣಿಗಾಗಿ ಮಾಹಿತಿ ಕೋರಿದಲ್ಲಿ ಸೂಕ್ತ ಮಾಹಿತಿಯನ್ನು ನೀಡಿ, ಅವರ ಹೆಸರನ್ನು ನೋಂದಾಯಿಸಲು ಅಲ್ಲದೆ ಈಗಾಗಲೇ ನೋಂದಣಿಯಾಗಿದ್ದಲ್ಲಿ ಅವರ ಮತದಾರರ ಪಟ್ಟಿಯ ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆಯ ಮಾಹಿತಿ ನೀಡುವುದು, ಇದನ್ನು ಹೊರತುಪಡಿಸಿಯು ಸಹ ಮತದಾರರ ನೋಂದಣಿ ಪ್ರಕ್ರಿಯೆ ಪ್ರಾರಂಭದಿಂzಹೀ ಚುನಾವಣೆಯ ಫಲಿತಾಂಶ ಘೋಷಣೆಯಾಗುವವರೆಗೆ ಲಿಖಿತವಾಗಿ, ಮೌಖಿಕವಾಗಿ ಹಾಗೂ ದೂರವಾಣಿ ಮುಖಾಂತರ ಸ್ವೀಕೃತವಾಗುವಂತಹ ದೂರುಗಳ ಮೇಲೆ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳ ನಿರ್ದೇಶನದ ಮೇರೆಗೆ ಕ್ರಮ ಕೈಗೊಳ್ಳಲು ತಹಶೀಲ್ದಾರ ಕಾರ್ಯಾಲಯದ ಸಿಬ್ಬಂದಿ ಹಾಲ್‍ನಲ್ಲಿ ದೂರು ಮೇಲ್ವಿಚಾರಣೆ ತಂಡ ಹಾಗೂ ಮತದಾರರ ಮಾಹಿತಿ ಮತ್ತು ಸಲಹಾ ಕೇಂದ್ರ ಸ್ಥಾಪಿಸಲಾಗಿದೆ.
ಕಾರಣ ಪ್ರಸ್ತುತ ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ–2026 ರ ಈ ಚುನಾವಣೆಗೆ ಸ್ವೀಕೃತವಾಗುವ ದೂರು ಹಾಗೂ ಮತದಾರರ ನೋಂದಣಿ ಕಾರ್ಯಕ್ಕಾಗಿ ಹಾಗೂ ಮತದಾರರ ಪಟ್ಟಿಗಳ ಕುರಿತು ಮಾಹಿತಿ ಪಡೆಯಲು ಇಚ್ಛಿಸುವವರು ಮತದಾರರ ಮಾಹಿತಿ ಮತ್ತು ಸಲಹಾ ಕೇಂದ್ರದ ಮೂಲಕ ಹಾಗೂ ಸಲಹಾ ಕೇಂದ್ರದ ದೂರವಾಣಿ ಸಂಖ್ಯೆ: 08533-200321 ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು.
ದೂರು ಮೇಲ್ವಿಚಾರಣೆ ತಂಡಗಳ ಯಶಸ್ವಿ ಕಾರ್ಯಾಚರಣೆಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ತಾಲ್ಲೂಕು ಮಟ್ಟದ ಮೇಲ್ವಿಚಾರಣೆ ತಂಡದಲ್ಲಿ ಕಾರಟಗಿ ತಹಶೀಲ್ದಾರ ಕಾರ್ಯಾಲಯದ ಚುನಾವಣಾ ಶಿರಸ್ತೇದಾರ ಉಮಾಮಹೇಶ ಮೊ.ಸಂ: 9743600343, ಚುನಾವಣಾ ಆಪರೇಟರ್ ಸಿದ್ದರಾಮನಗೌಡ ಮೊ.ಸಂ: 6362501720, ಚುನಾವಣೆ ಪ್ರ.ದ.ಸ ಈಶ್ವರ ಕೋರವಾರ ಮೊ.ಸಂ: 9900291219 ಇವರನ್ನು ನಿಯೋಜಿಸಲಾಗಿದೆ.
ಮೇಲಿನಂತೆ ನೇಮಕ ಮಾಡಲಾಗಿರುವಂತ ದೂರು ಮೇಲ್ವಿಚಾರಣೆ ತಂಡ ಹಾಗೂ ಮತದಾರರ ಮಾಹಿತಿ ಮತ್ತು ಸಲಹಾ ಕೇಂದ್ರ ತಕ್ಷಣದಿಂದಲೇ ಕಾರ್ಯನಿರ್ವಹಿಸಿ ಲಿಖಿತವಾಗಿ, ಮೌಖಿಕವಾಗಿ, ದೂರವಾಣಿ ಮುಖಾಂತರ ಸ್ವೀಕೃತವಾಗುವಂತಹ ಎಲ್ಲಾ ರೀತಿಯ ಸಲಹೆ ಹಾಗೂ ದೂರುಗಳಿಗೆ ದಾಖಲಾಧಾರಿತವಾದ ವಹಿಯನ್ನು ನಿರ್ವಹಿಸಿ ನಿಯಮಾನುಸಾರ ವಿಲೇಗೊಳಿಸಿ ಕಾಲೋಚಿತಗೊಳಿಸಲು ಸೂಚಿಸಲಾಗಿದ್ದು ಸಾರ್ವಜನಿಕರು ಈ ತಂಡದ ಮುಖಾಂತರ ಮತದಾರರ ನೋಂದಣಿ ಹಾಗೂ ಚುನಾವಣೆ ಕುರಿತಾದ ಮಾಹಿತಿ ಹಾಗೂ ದೂರನ್ನು ದಾಖಲಿಸಬಹುದೆಂದು ಕಾರಟಗಿ ತಹಶೀಲ್ದಾರ ಹಾಗೂ ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಗಳಾದ ಎಂ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್