ಉನ್ನತ ಶಿಕ್ಷಣಕ್ಕಾಗಿ ಹೊರದೇಶಗಳಿಗೆ ಕಳುಹಿಸುವುದು ಪೋಷಕರಿಗೆ ಫ್ಯಾಷನ್
ಉನ್ನತ ಶಿಕ್ಷಣಕ್ಕಾಗಿ ಹೊರದೇಶಗಳಿಗೆ ಕಳುಹಿಸುವುದು ಪೋಷಕರಿಗೆ ಫ್ಯಾಷನ್ ಆಗಿ ಮಾರ್ಪಟ್ಟಿದೆ
ಚಿತ್ರ ; ಕೋಲಾರ ನಗರದ ಸರ್ಕಾರಿ ಬಾಲಕರ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರ, ಆದಿಮ ಸಾಂಸ್ಕೃತಿಕ ಕೇಂದ್ರದಿಂದ ಕನ್ನಡ ಭಾಷಾ ಬೆಳವಣಿಗೆ ಮತ್ತು ಸವಾಲುಗಳ ಕುರಿತು ಆಯೋಜಿಸಿದ್ದ ವಿಚಾರ ಸಂಕೀರ್ಣ ಕನ್ನಡ ಧ್ವಜ ಹಾರಿಸುವ ಮೂಲಕ ರಾಜ್ಯ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್ ಉದ್ಘಾಟಿಸಿದರು.


ಕೋಲಾರ, ೨೪ ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕನ್ನಡ ಸರ್ಕಾರಿ ಶಾಲೆಗಳ ಅಭಿವೃದ್ದಿ ಬಗ್ಗೆ ಜನಪ್ರತಿನಿಧಿಗಳಿಗೆ ಹಾಗೂ ಆಡಳಿತ ವರ್ಗಕ್ಕೆ ಕಾಳಜಿ ಇಲ್ಲದಿರುವ ಬಗ್ಗೆ ಪ್ರಶ್ನೆ ಮಾಡುವಂತ ಶಕ್ತಿಯನ್ನು ಬೆಳೆಸಿ ಕೊಳ್ಳ ಬೇಕಾಗಿದೆ. ರಾಜ್ಯದಲ್ಲಿ ಹೊರ ರಾಜ್ಯದವರು ಸುಮಾರು ೧೯೭ ಕಂಪನಿಗಳನ್ನು ಸ್ಥಾಪಿಸಲು ಅವಶ್ಯಕವಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಆದರೆ ಈ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುವಂತ ಕೌಶಲ್ಯತೆಗಳ ತರಬೇತಿಗಳನ್ನು ಪಡೆದಿರುವಂತ ಸಶಕ್ತರು ನಮ್ಮಲ್ಲಿ ಇಲ್ಲದಿರುವು ಸವಾಲಾಗಿ ಪರಿಣಮಿಸಿದೆ. ಉನ್ನತ ಶಿಕ್ಷಣ ಪಡೆದವರನ್ನು ಹೊರದೇಶಗಳಿಗೆ ಕಳುಹಿಸುವುದು ಪೋಷಕರಿಗೆ ಇಂದು ಫ್ಯಾಷನ್ ಆಗಿ ಮಾರ್ಪಟ್ಟಿದೆ ಕೊನೆಗೆ ಸತ್ತಾಗ ಮಕ್ಕಳು ಬಾರದೆ ಕಾರ್ಪೋರೇಷ್ನವರೇ ಗತಿಯಾಗುತ್ತಿದ್ದಾರೆ ಎಂದು ರಾಜ್ಯ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್ ವಿಷಾದಿಸಿದರು.

ಕೋಲಾರ ನಗರದ ಸರ್ಕಾರಿ ಬಾಲಕರ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರ, ಆದಿಮ ಸಾಂಸ್ಕೃತಿಕ ಕೇಂದ್ರದಿಂದ ಕನ್ನಡ ಭಾಷಾ ಬೆಳವಣಿಗೆ ಮತ್ತು ಸವಾಲುಗಳ ಕುರಿತು ಆಯೋಜಿಸಿದ್ದ ವಿಚಾರ ಸಂಕೀರ್ಣ ಕನ್ನಡ ಧ್ವಜ ಹಾರಿಸುವ ಮೂಲಕ ಉದ್ಘಾಟಿಸಿದರು.

ಸುಮಾರು ಎರಡೂವರೆ ಸಾವಿರ ವರ್ಷದ ಇತಿಹಾಸ ಇರುವಂತ ಕನ್ನಡ ಭಾಷೆ ಅವನತಿಯ ಅಂಚಿಗೆ ತಲುಪುತ್ತಿರುವುದನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಬೇಕಾಗಿರುವುದು ಅಗತ್ಯ, ಅನ್ಯಭಾಷಿಕರನ್ನು ಕನ್ನಡ ಭಾಷೆಗೆ ಕರೆ ತರುವಂತಾಗಬೇಕು ಇಲ್ಲವಾದರೆ ಮುಂದಿನ ಯುವ ಪೀಳಿಗೆಗೆ ದ್ರೋಹ ಬಗೆದಂತಾಗುವುದು. ಕನ್ನಡ ಭಾಷೆಯ ಕುರಿತು ಕಾಳಜಿ ತುಂಬಿ ಇತರ ಭಾಷೆಯನ್ನು ಗೌರವಿಸುವಂತಾಗಬೇಕು ಎಂದು ರಾಜ್ಯ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್ ತಿಳಿಸಿದರು.

ಕೋಲಾರ ಇತಿಹಾಸದಲ್ಲಿ ಕನ್ನಡ ಹೋರಾಟದ ಕೇಂದ್ರವಾಗಿ ಗುರುತಿಸಿದೆ. ರಾಜ್ಯದ ಗಡಿ ಭಾಗದಲ್ಲಿ ನೆರೆ ರಾಜ್ಯದ ತೆಲುಗು, ತಮಿಳು ಹಾಗೂ ಉರ್ದು ಮತ್ತು ಕನ್ನಡ ಸೇರಿದಂತೆ ನಾಲ್ಕು ಭಾಷೆಗಳು ಈ ಭಾಗದಲ್ಲಿ ಸಮಾಗಮವಾಗಿರುವ ಕೋಲಾರ ಜಿಲ್ಲೆ ವಿಶೇಷತೆಯಿಂದ ಕೊಡಿದೆ ಎಂದರು.

ರಾಜ್ಯದಲ್ಲಿ ಕನ್ನಡ ಕಠಿಣ ಸ್ಥಾನದಲ್ಲಿದೆ. ಕನ್ನಡ ಭಾಷೆಯ ಕಗ್ಗೂಲೆಯಾಗಿ ಅವನತಿ ಸ್ಥಾನ ತಲುಪುತ್ತಿರುವುದನ್ನು ತಡೆಯುವ ಶಕ್ತಿ ಯುವ ಜನತೆಗೆ ಇದೆ. ಕರ್ನಾಟಕದಲ್ಲಿರುವ ಎಲ್ಲರೂ ಕನ್ನಡಿಗರೇ ಅಗಿದ್ದರೂ ಕನ್ನಡ ಭಾಷೆ ನಿರೀಕ್ಷೆಯಷ್ಟು ಸಮೃದ್ದವಾಗಿಲ್ಲ. ಹೊರ ರಾಜ್ಯದ ಸಾಮಾನ್ಯ ವ್ಯಕ್ತಿಗೆ ಇರುವಷ್ಟು ರಾಜ್ಯದ ಕನ್ನಡ ಭಾಷೆಯ ಮೇಲೆ ಕಾಳಜಿ ನಮ್ಮಲ್ಲಿ ಇಲ್ಲ. ಕಳೆದ ೨೦೧೧ರ ದಕ್ಷಿಣ ಭಾರತದ ಸಮೀಕ್ಷೆ ಪ್ರಕಾರ ಹಿಂದಿ ಬೆಳವಣಿಗೆ ಶೇ.೬೩ರಷ್ಟು ಇದ್ದರೆ, ಕನ್ನಡ ಭಾಷೆ ಬೆಳವಣಿಗೆ ಕೇವಲ ಶೇ ೩.೬ರಷ್ಟು ಮಾತ್ರ ಇರುವುದು ಆತಂಕಕಾರಿಯಾಗಿದೆ. ಕನ್ನಡದ ಬೆಳವಣಿಗೆಗೆ ಮರಳಿ ಗೋಕಾಕ್ ಮಾದರಿಯಲ್ಲಿ ಕನ್ನಡ ಭಾಷ ಅಂದೋಲನ ಅನಿವಾರ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ರಾಷ್ಟ್ರಕವಿ ಕುವೆಂಪು ರಚಿತ ನಾಡಗೀತೆಗೆ ೧೦೦ರ ಸಂಭ್ರಮದ ಜನಾಂದೋಲವನ್ನಾಗಿ ರೂಪಿಸಲು ತಮ್ಮ ಅಭಿಪ್ರಾಯಗಳನ್ನು ಮುಖ್ಯ ಮಂತ್ರಿಗಳಿಗೆ ಪತ್ರ ಮುಖೇನ ತಿಳಿಸುವಂತಾಗಬೇಕೆಂದು ಕನ್ನಡ ಅಭಿವೃದ್ದಿ ಪ್ರಾಧಿಕಾರ ಸದಸ್ಯರಾದ ಟಿ.ತಿಮ್ಮೇಶ್ ಪ್ರಸ್ತಾವಿಕ ನುಡಿಗಳಾಡಿ ಕ್ರಿ.ಪೂ. ೩ನೇ ಶತಮಾನದಲ್ಲಿಯೇ ಬಾದಾಮಿ ಪಟ್ಟದ ಐಹೊಳೆಯಲ್ಲಿ ದೊರೆತ ಶಾಸನಗಳಲ್ಲಿ ಕನ್ನಡ ಭಾಷೆಯು ರಾರಾಜಿಸುತ್ತಿರುವುದು ಪತ್ತೆಯಾಗಿದೆ ಅಂದರೆ ಕನ್ನಡವು ಪ್ರಾಚೀನ ಭಾಷೆ ಎಂದು ಪ್ರತಿಪಾದಿಸಬಹುದಾಗಿದೆ ಎಂದರು.

ಕನ್ನಡಿಗರು ಪರೋಪಕಾರಿಗಳು. ಹೊರಗಿನವರು ಬದುಕು ಕಟ್ಟಿ ಕೊಳ್ಳಲು ರಾಜ್ಯಕ್ಕೆ ಬಂದವರ ಬಳಿ ಕನ್ನಡ ಕಲಿಸದೆ ಅವರದೇ ಭಾಷೆಯಲ್ಲಿ ಮಾತನಾಡುವ ಮೂಲಕ ಹೊಂದಾಣಿಕೆ ಮಾಡಿ ಕೊಂಡು ಉದಾರತೆ ತೋರುವುದು ನಮ್ಮ ಕನ್ನಡಿಗರ ಸಂಸ್ಕೃತಿಯಾಗಿದೆ. ನಾವು ಹೊರಗಿನವರಿಗೆ ತೋರುತ್ತಿರುವ ಔದರ್ಯ, ಸಾಮರಸ್ಯಗಳೇ ನಮ್ಮ ಭಾಷೆಯ ಬೆಳವಣಿಗೆಗೆ ತೊಡಕಾಗಿದೆ ಎಂಬುವುದು ಅರಿತು ಹೊರಗಿನವರಿಗೆ ಕನ್ನಡ ಕಲಿಸುವ ಮೂಲಕ ಬೆಳವಣಿಗೆಗೆ ಪ್ರೇರಣೆಯಾಗಬೇಕಾಗಿದೆ ಎಂದು ಹೇಳಿದರು.

ಭಾಷೆ ಎಂಬುವುದು ಮನಸ್ಸಿನ ಭಾವನೆಯನ್ನು ತಟ್ಟುವಂತೆ ಇರಬೇಕೇ ಹೊರತು ತುಕ್ಕು ಹಿಡಿಯಲು ಬಿಡಬಾರದು. ಕನ್ನಡಿಗರ ಕೊಗು ರಾಜ್ಯಕ್ಕೆ ಹಾಗೂ ಕೇಂದ್ರ ಆಡಳಿತಕ್ಕೆ ಕೇಳುವಂತಾಗ ಬೇಕು. ಕನ್ನಡಿಗರು ತೊಕಡಿಸ ಬಾರದು ಎಂದು ದೆಸೆಯಲ್ಲಿ ಕನ್ನಡ ಭಾಷೆಯನ್ನು ಆಡಳಿತ ಭಾಷೆಯಾಗಿ ಜಾರಿ ಮಾಡಿದರೂ ಸಮರ್ಪಕವಾಗಿ ಅನುಷ್ಠಾನಕ್ಕೆ ಬಾರದ ಹಿನ್ನಲೆಯಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರ ರಚಿಸುವ ಮೂಲಕ ಕನ್ನಡಿಗರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಕನ್ನಡ ಪರ ಸಂಘಟನೆಗಳು ಹೋರಾಟಗಳನ್ನು ಮಾಡದಿದ್ದರೆ ಕನ್ನಡ ಪರ ಸಮಿತಿಗಳನ್ನು ರಚನೆ ಮಾಡದಿದ್ದರೆ ಕನ್ನಡದ ಉಳಿವು ಕಷ್ಟ ಸಾಧ್ಯವಾಗುತ್ತಿತ್ತು ಕನ್ನಡ ಸಂಘಟನೆಗಳಿಂದಲೇ ಇನ್ನು ಜೀವಂತವಾಗಿದೆ. ನಮ್ಮ ರಾಜ್ಯದಲ್ಲಿರುವ ಹೊರರಾಜ್ಯದವರೆಲ್ಲರೂ ಕನ್ನಡ ಕಲಿತರೆ ಮಾತ್ರ ರಾಜ್ಯದ ೭.೫ ಕೋಟಿ ಜನತೆಯನ್ನು ಕನ್ನಡಿಗರು ಎಂದು ಹೇಳ ಬಹುದಾಗಿದೆ ಹಾಗಾಗಿ ಕನ್ನಡಿಗರು ಪ್ರಶ್ನೆ ಮಾಡದಿದ್ದರೆ ಕನ್ನಡದ ಬೆಳವಣಿಗೆ ಅಸಾಧ್ಯ.ಕನ್ನಡವನ್ನು ಸಾಮರಸ್ಯದಿಂದ ಬೆಳೆಸಬೇಕಾಗಿದೆ. ಕನ್ನಡದ ಚಟುವಟಿಕೆಗಳು ಚಲನ ಶೀಲವಾಗಿರುವಂತ ಕಾರ್ಯಕ್ರಮಗಳು ಪ್ರಾಧಿಕಾರ ರೂಪಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.

ಮಾಸ್ತಿ ವೆಂಕಟೇಶ್ ಆಯ್ಯಂಗಾರ್, ಡಿ.ವಿ.ಗುಂಡಪ್ಪ, ದ.ರಾ.ಬೇಂದ್ರೆ. ಬಿ.ವಿ.ಶಿವರಾಮಕಾರಂತ, ನಿಸ್ಸಾರ್ ಆಹಮದ್, ಸೇರಿದಂತೆ ಅನೇಕರ ಮಾತೃ ಭಾಷೆ ಬೇರೆ ಬೇರೆಯಾಗಿದ್ದರೂ ಸಹ ನೆಲದ ಕನ್ನಡ ಭಾಷೆಯಲ್ಲಿ ಸಾಧನೆ ಮಾಡಿ ಕನ್ನಡದ ಗೆರಿಮೆಯಾಗಿದ್ದಾರೆ. ಗಟ್ಟಿ ಸೌಧದ ಮೇಲೆ ಕಟ್ಟಿದ ಕನ್ನಡ ಎಂದು ಕುಸಿಯುವುದಿಲ್ಲ.ಪ್ರತಿಯೊಬ್ಬರು ಕನ್ನಡ ಬಾರದವರಿಗೆ ಕನ್ನಡ ಕಲಿಸುವಂತಾಗ ಬೇಕು. ಪರರ ಸಂಸ್ಕೃತಿಯನ್ನು ಗೌರವಿಸಿ ನಮ್ಮ ಸಂಸ್ಕೃತಿಯನ್ನು ಪ್ರೀತಿಸಿ, ಅಭಿವೃದ್ದಿ ವ್ಯಕ್ತಿತ್ವದ ಶಕ್ತಿಯಾಗಿ, ಕನ್ನಡ ಕಲಿಯುವ ಕಲಿಸುವ ಮೂಲಕ ಆತ್ಮ ವಿಶ್ವಾಸದ ಜ್ಞಾನದ ಪಡೆದು ಕನ್ನಡದ ತಳಹದಿಯಲ್ಲಿ ಕನ್ನಡ ಬೆಳೆಸುವ ಮೂಲ ಜೀವನ ರೂಪಿಸಿ ಕೊಳ್ಳುವಂತಾಗ ಬೇಕೆಂದು ಕಿವಿ ಮಾತು ಹೇಳಿದರು.

ನವೆಂಬರ್ ಮಾಹೆಯ ಕನ್ನಡಿಗರಾಗದೆ ವರ್ಷವಿಡಿ ಕನ್ನಡಿಗರಾಗಿರ ಬೇಕು. ಕೈಗಾರಿಕೆಗಳಲ್ಲಿ ಶೇ ೬೦ ಸ್ಥಳೀಯ ಕನ್ನಡಿಗರಿಗೆ ಮೀಸಲು ಇರಬೇಕು. ಎಲ್ಲಡೆ ಕನ್ನಡದ ಫಲಕಗಳು ರಾರಾಜಿಸಬೇಕು. ಕನ್ನಡ ಶಾಲೆಗಳಿಗೆ ವಿಶೇಷ ಅಧ್ಯತೆ ಸಿಗುವಂತಾಗ ಬೇಕೆಂದರು.

ಕಾರ್ಯಕ್ರಮದಲ್ಲಿ ಅದಿಮ ಸಾಂಸ್ಕೃತಿಕ ಕೇಂದ್ರದ ಕಾರ್ಯದರ್ಶಿ ರಾಮಚಂದ್ರಪ್ಪ ಅವರು ಚಳುವಳಿಗಳು ಮತ್ತು ಭಾಷಾಪ್ರಾಧಾನ್ಯತೆ ಕುರಿತು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಮುನಿಶಾಮಪ್ಪ ಆಶಯ ನುಡಿ, ಜಿಲ್ಲಾ ಕಾರ್ಯನಿರ ಚಿಂತಕರಾದ ಡಾ. ಕೆ.ವಿ.ನೇತ್ರವತಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕ.ಸಾ.ಪ. ಜಿಲ್ಲಾಧ್ಯಕ್ಷ ಎನ್.ಬಿ. ಗೋಪಾಲಗೌಡ ಭಾಗವಹಿಸಿದ್ದರು.

ಕನ್ನಡ ಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಅ.ಕೃ. ಸೋಮಶೇಖರ್, ಕ.ರ.ವೇ ಜಿಲ್ಲಾಧ್ಯಕ್ಷ ಮೇಡಿಹಾಳ ರಾಘವೇಂದ್ರ, ಜಯಕರ್ನಾಟಕ ಸಂಘ ಅಧ್ಯಕ್ಷ ಕೆ.ಆರ್.ತ್ಯಾಗರಾಜ್, ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಬಿ.ಸುರೇಶ್, ಪರಿಸರ ವಿಜ್ಞಾನ ಲೇಖಕ ಎಚ್.ಎ.ಪುರುಷೋತ್ತಮರಾವ್, ಚು.ಸಾ.ಪ. ಜಿಲ್ಲಾಧ್ಯಕ್ಷ ಪಿ.ನಾರಾಯಣಪ್ಪ, ಕ.ರ.ವೇ ಜಿಲ್ಲಾಧ್ಯಕ್ಷ ಚಂಬೆ ರಾಜೇಶ್, ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಬಾ.ಹ.ಶೇಖರಪ್ಪ, ಕ.ಸಾ.ಪ. ಪದಾಧಿಕಾರಿಗಳಾದ ಆರ್.ಶಂಕರಪ್ಪ, ಸುಬ್ಬರಾಮಯ್ಯ, ಮಂಜುಳ, ಕನ್ನಡ ಉಪನ್ಯಾಸಕ ಮುನಿವೆಂಕಟಸ್ವಾಮಿ, ಜನಪದ ಅಕಾಡಮಿಯ ರಾಜಪ್ಪ ಮುಂತಾದವರು ಉಪಸ್ಥಿತರಿದ್ದರು.

ಈಜಲ-ಈನೆಲ ವೆಂಕಟಚಲಪತಿ ನಾಡಗೀತೆ ಹಾಗೂ ಕನ್ನಡದ ಗೀತೆಗಳು, ಕ.ಸಾ.ಪ ಮಾಜಿ ಅಧ್ಯಕ್ಷ ಜೆ.ಜಿ.ನಾಗರಾಜ್ ನಿರೂಪಣೆ, ನಡುಪಳ್ಳಿ ಮಂಜುನಾಥ್ ಸ್ವಾಗತಿಸಿದರು. ಚಿತ್ರ ; ಕೋಲಾರ ನಗರದ ಸರ್ಕಾರಿ ಬಾಲಕರ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರ, ಆದಿಮ ಸಾಂಸ್ಕೃತಿಕ ಕೇಂದ್ರದಿಂದ ಕನ್ನಡ ಭಾಷಾ ಬೆಳವಣಿಗೆ ಮತ್ತು ಸವಾಲುಗಳ ಕುರಿತು ಆಯೋಜಿಸಿದ್ದ ವಿಚಾರ ಸಂಕೀರ್ಣ ಕನ್ನಡ ಧ್ವಜ ಹಾರಿಸುವ ಮೂಲಕ ರಾಜ್ಯ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್ ಉದ್ಘಾಟಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande