
ನವದೆಹಲಿ, 22 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಬಾಲಿವುಡ್‌ನ ಖ್ಯಾತ ನಟ ಹಾಗೂ ಗಾಯಕ ರಿಷಭ್ ಟಂಡನ್ (35) ಇಂದು ದೆಹಲಿಯಲ್ಲಿ ಹೃದಯಾಘಾತದಿಂದ ನಿಧನರಾದರು. “ಫಕೀರ್” ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದ ರಿಷಭ್, ದೀಪಾವಳಿ ಹಬ್ಬಕ್ಕಾಗಿ ಮುಂಬೈನಿಂದ ದೆಹಲಿಗೆ ಬಂದಿದ್ದಾಗ ಹೃದಯಾಘಾತಕ್ಕೊಳಗಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ.
ರಿಷಭ್ ಟಂಡನ್ ಅವರ ಅಕಾಲಿಕ ನಿಧನವು ಸಂಗೀತ ಮತ್ತು ಚಲನಚಿತ್ರೋದ್ಯಮವನ್ನು ತೀವ್ರವಾಗಿ ದುಃಖಿತಗೊಳಿಸಿದೆ. ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಹಾಡುಗಳು ಮತ್ತು ನೆನಪುಗಳನ್ನು ಹಂಚಿಕೊಳ್ಳುತ್ತಾ ಸಂತಾಪ ಸೂಚಿಸುತ್ತಿದ್ದಾರೆ.
ಅವರು ಗಾಯನ ಲೋಕದಲ್ಲಿ ವಿಶಿಷ್ಟ ಧ್ವನಿಯೊಂದಿಗೆ ಹೆಸರು ಮಾಡಿದ್ದು, ಅವರ ಅತ್ಯಂತ ಜನಪ್ರಿಯ ಹಾಡು “ಶಿವ ತಾಂಡವ ಸ್ತೋತ್ರಂ” ಅವರಿಗೆ ರಾಷ್ಟ್ರವ್ಯಾಪಿ ಖ್ಯಾತಿಯನ್ನು ತಂದುಕೊಟ್ಟಿತು. “ಧೂ ಧೂ ಕರ್ಕೆ,” “ಫಕೀರ್ ಕಿ ಜುಬಾನಿ,” ಮತ್ತು “ಯೇ ಆಶಿಕಿ” ಸೇರಿದಂತೆ ಅನೇಕ ಜನಪ್ರಿಯ ಹಾಡುಗಳನ್ನು ಹಾಡಿದ್ದಾರೆ.
ಸಂಗೀತ ಲೋಕದ ಅನೇಕ ಗಣ್ಯರು ರಿಷಭ್ ಟಂಡನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa