ನವದೆಹಲಿ, 21 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಇಟಲಿಯ ತಾರೆ ಟೆನಿಸ್ ಆಟಗಾರ ಜಾನಿಕ್ ಸಿನ್ನರ್ ಈ ವರ್ಷದ ಡೇವಿಸ್ ಕಪ್ ಫೈನಲ್ಸ್‌ನಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಹಾಲಿ ಚಾಂಪಿಯನ್ ಇಟಲಿ ಸೋಮವಾರ ತಂಡವನ್ನು ಘೋಷಿಸುವಾಗ ಅವರ ಅನುಪಸ್ಥಿತಿಯನ್ನು ದೃಢಪಡಿಸಿತು.
ಇಟಲಿಯ ನಾಯಕ ಫಿಲಿಪ್ಪೊ ವೊಲ್ಯಾಂಡ್ರಿ ಮಾತನಾಡಿ ಸಿನ್ನರ್ ಈಗ ಲಭ್ಯವಿಲ್ಲ, ಆದರೆ ಖಂಡಿತವಾಗಿ ಅವರು ಮರಳುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿ, ಈ ಬಾರಿ ನಾವು ಬಲಿಷ್ಠ ತಂಡದೊಂದಿಗೆ ಸ್ಪರ್ಧಿಸುತ್ತೇವೆ ಎಂದರು.
ಇಟಲಿ ಪರವಾಗಿ ಮ್ಯಾಟಿಯೊ ಬೆರೆಟ್ಟಿನಿ, ಲೊರೆಂಜೊ ಮುಸೆಟ್ಟಿ, ಸಿಮೋನೆ ಬೊಲೆಲ್ಲಿ, ಫ್ಲಾವಿಯೊ ಕೊಬೊಲ್ಲಿ, ಮತ್ತು ಆಂಡ್ರಿಯಾ ವವಾಸ್ಸೊರಿ ಆಡಲಿದ್ದಾರೆ.
ಇತ್ತ ವಿಶ್ವ ನಂ.1 ಕಾರ್ಲೋಸ್ ಅಲ್ಕರಾಜ್ ಸ್ಪೇನ್ ತಂಡವನ್ನು ಮುನ್ನಡೆಸಲಿದ್ದು, 2019 ನಂತರದ ಮೊದಲ ಡೇವಿಸ್ ಕಪ್ ಪ್ರಶಸ್ತಿಗಾಗಿ ಪ್ರಯತ್ನಿಸಲಿದ್ದಾರೆ. ಸ್ಪೇನ್ ತಂಡದಲ್ಲಿ ಹೇಮಾ ಮುನಾರ್, ಪೆಡ್ರೊ ಮಾರ್ಟಿನೆಜ್, ಮತ್ತು ಮಾರ್ಸೆಲ್ ಗ್ರಾನೋಯಿರ್ಸ್ ಸೇರಿದ್ದಾರೆ.
ಜರ್ಮನಿಯ ಪರವಾಗಿ ಅಲೆಕ್ಸಾಂಡರ್ ಜ್ವೆರೆವ್ ಕೂಡ ಈ ಬಾರಿ ಮೊದಲ ಬಾರಿಗೆ ಫೈನಲ್ಸ್‌ನಲ್ಲಿ ಭಾಗವಹಿಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa