ಔರಂಗಾಬಾದ್, 23 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಬಿಹಾರ ಇಂದು ರಸ್ತೆಗಳಿಂದ ವಿಮಾನ ನಿಲ್ದಾಣಗಳವರೆಗೆ ಅಭಿವೃದ್ಧಿಯ ಹೊಸ ಅಧ್ಯಾಯ ಬರೆಯುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದರು.
ಔರಂಗಾಬಾದ್ ಜಿಲ್ಲೆಯ ಗೋಹ್ ಪ್ರದೇಶದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಎನ್‌ಡಿಎ ಅಭಿವೃದ್ಧಿಯ ಸಂಕೇತ, ಇಂಡಿ ಮಹಾ ಮೈತ್ರಿಕೂಟ ವಿನಾಶದ ಸಂಕೇತ ಎಂದರು.
ನಡ್ಡಾ ಅವರು ಆರ್‌ಜೆಡಿ ಆಡಳಿತದ ಜಂಗಲ್ ರಾಜ್ ಕಾಲವನ್ನು ಟೀಕಿಸಿ. “ಆರ್‌ಜೆಡಿ ಎಂದರೆ ಸುಲಿಗೆ, ಜಂಗಲ್ ರಾಜ್ ಮತ್ತು ದಾದಾಗಿರಿ,” ಎಂದು ಹೇಳಿದರು. ಶಹಾಬುದ್ದೀನ್ ಅವರ ಮಗನಿಗೆ ಟಿಕೆಟ್ ನೀಡಿರುವುದು ಮತ್ತೆ ಗೂಂಡಾಗಿರಿಯನ್ನು ತರಲು ಪ್ರಯತ್ನ ಎಂದು ಗಂಭೀರ ಆರೋಪ ಮಾಡಿದರು.
ಅಪರಾಧದಿಂದ ನರಳುತ್ತಿದ್ದ ಬಿಹಾರ ಇಂದು ಎನ್‌ಡಿಎ ಸರ್ಕಾರದ ನೀತಿಗಳಿಂದ ಬೆಳಕಿನ ಯುಗಕ್ಕೆ ಕಾಲಿಟ್ಟಿದೆ,” ಕಳೆದ ದಶಕದಲ್ಲಿ ಬಿಹಾರದ ರೈಲ್ವೆ ಬಜೆಟ್ ಹತ್ತು ಪಟ್ಟು ಹೆಚ್ಚಾಗಿದ್ದು ಬಿಹಾರ ಅಭಿವೃದ್ಧಿಗೆ ಎನ್‌ಡಿಎ ಅಭ್ಯರ್ಥಿಗಳನ್ನು ಬೆಂಬಲಿಸಲು ಮನವಿ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa