ದುಬೈ, 21 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ವಿಶ್ವದ ಅತಿ ಎತ್ತರದ ಕಟ್ಟಡವಾದ ದುಬೈನ ಬುರ್ಜ್ ಖಲೀಫಾ ದೀಪಾವಳಿಯ ಸಂಭ್ರಮದಲ್ಲಿ ಬೆಳಗಿತು. ಕತ್ತಲೆಯ ವಿರುದ್ಧ ಜ್ಞಾನದ ಬೆಳಕನ್ನು ಆಚರಿಸುವ ಹಬ್ಬದ ಅಂಗವಾಗಿ ಇಂಗ್ಲಿಷ್ ಮತ್ತು ಹಿಂದಿಯಲ್ಲಿ “ಬೆಳಕಿನ ಹಬ್ಬವು ಸಂತೋಷ, ಸಾಮರಸ್ಯ ಮತ್ತು ಸಮೃದ್ಧಿಯನ್ನು ತರಲಿ” ಎಂಬ ಸಂದೇಶ ಪ್ರದರ್ಶಿಸಲಾಯಿತು.
ದುಬೈ ಪೊಲೀಸ್ ಬ್ಯಾಂಡ್‌ನ ಬಾಲಿವುಡ್ ಹಾಡು “ತುಝೆ ದೇಖಾ ತೋ ಯೇ ಜಾನಾ ಸನಮ್” ಪ್ರದರ್ಶನವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಸುಮಾರು 10,000 ಮಂದಿ ಭಾಗವಹಿಸಿದ್ದ ಈ ಉತ್ಸವದಲ್ಲಿ ರಂಗೋಲಿ ಹಾಗೂ ಜಾನಪದ ನೃತ್ಯ ಸ್ಪರ್ಧೆ ನಡೆಯಿತು.
ದುಬೈ ಕಾನ್ಸುಲ್ ಜನರಲ್ ಸತೀಶ್ ಕುಮಾರ್ ಶಿವನ್ ಮಾತನಾಡಿ, “ಈ ರೀತಿಯ ಒಳಗೊಳ್ಳುವಿಕೆ ಮತ್ತು ಪ್ರೀತಿ ದುಬೈ ನಾಯಕತ್ವದ ವಿಶಿಷ್ಟತೆ,” ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa