ವಿಜಯಪುರ, 20 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ೨೦೨೫-೨೬ ನೇ ಸಾಲಿನ ಕಬ್ಬಿನ ದರ ನಿಗದಿ ಹಾಗೂ ರೈತರಿಗೆ ಆಗುತ್ತಿರುವ ಮೋಸವನ್ನು ತಡೆಗಟ್ಟುವ ಕೆಲಸ ರಾಜ್ಯ ಸರ್ಕಾರ ಮಾಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಆಗ್ರಹಿಸಿದರು.
ಕಾರ್ಖಾನೆ ಮಾಲೀಕರ ಪರವಾಗಿ ಕಬ್ಬು ಹಾಗೂ ಸಕ್ಕರೆ ಸಚಿವರು ಬೆಂಬಲಿಸಿ ಆದೇಶವನ್ನು ಹೊರಡಿಸಿದ್ದಾರೆ. ಬೆಂಬಲಬೆಲೆ, ತೂಕದಲ್ಲಿ ಮೋಸ, ಇಳುವರಿಯಲ್ಲಿ ಮೋಸ, ಸಮಯಕ್ಕೆ ಸರಿಯಾಗಿ ಬಾಕಿ ಬಿಲ್ ಹಾಕದಿರುವುದು ಸೇರಿದಂತೆ ಹಲವಾರು ಗಂಭೀರ ವಿಷಯಗಳ ಚರ್ಚೆ ನಂತರವೇ ಕಾರ್ಖಾನೆ ಪ್ರಾರಂಭಿಸಿಬೇಕು. ಕನಿಷ್ಟ ಒಂದು ಟನ್ ಕಬ್ಬಿಗೆ ಕಟಾವು ಮತ್ತು ಸಾಗಾಣೆಯನ್ನು ಹೊರತುಪಡೆಸಿ ೩೫೦೦ ರೂಪಾಯಿ ನೀಡಬೇಕು. ಮೊದಲು ಕಬ್ಬಿನಿಂದ ಸಕ್ಕರೆ ಮಾತ್ರ ತಾಯಾರಾಗುತ್ತಿತ್ತು, ಈಗ ೭-೮ ಉಪಉತ್ಪನ್ನಗಳು ಸಿದ್ದವಾಗಿ ಸಕ್ಕರೆ ಕಾರ್ಖಾನೆ ಮಾಲೀಕರು ಒಳ್ಳೆಯ ಲಾಭದಲ್ಲಿದ್ದು, ಇಂದಿನ ಕಾಸ್ಟ ಆಫ್ ಕಲ್ಟಿವೇಷನ ಪ್ರಕಾರ ಒಂದು ಎಕರೆ ಕಬ್ಬು ಬೆಳೆದ ರೈತ ೩೦ ಸಾವಿರ ನಷ್ಟದಲ್ಲಿದ್ದಾನೆ. ಆದರೆ ಸರಿಯಾದ ಬೆಲೆ ಸಿಗದೇ ಕಬ್ಬು ಬೆಳೆಗಾರರು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿದಂತೆ ವಿಜಯಪುರ ಜಿಲ್ಲೆಯ ಸಮಸ್ತ ಕಬ್ಬು ಬೆಳೆಗಾರರು ಹಾಗೂ ರೈತರು ಸೇರಿಕೊಂಡು ಜಿಲ್ಲಾಧಿಕಾರಿಗಳ ಕಚೇರಿ, ಸಚಿವರಾದ ಶಿವಾನಂದ ಪಾಟೀಲರ ಮನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲರ ಮನೆ ಮುಂದೆ ಅನಿರ್ಧಿಷ್ಟ ಹೋರಾಟ ಮಾಡಲು ಸಭೆ ಸೇರಿ ನಿರ್ಣಯಿಸಲಾಗುವುದು ಎಂದು ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಪತ್ರಿಕೆ ಮೂಲಕ ಎಚ್ಚರಿಕೆ ನೀಡಿದ್ದಾರೆ. ಅದಕ್ಕಾಗಿ ಕೂಡಲೇ ಜಿಲ್ಲಾಧಿಕಾರಿಗಳು ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮಾಲಿಕರು ಹಾಗೂ ರೈತ ಮುಖಂಡರೊಡನೆ ಸಭೆ ಕರೆದು ದರ ನಿಗದಿ ಪಡಿಸಬೇಕು ಎಂದು ಎಚ್ಚರಿಕೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande