ಬೆಂಗಳೂರು, 20 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರಾಜ್ಯದಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಜೋರಾಗಿದ್ದು, ಎಲ್ಲೆಡೆ ಹಬ್ಬದ ಕಳೆ ಚಿಮ್ಮುತ್ತಿದೆ. ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಆರ್ ಮಾರ್ಕೆಟ್‌ನಲ್ಲಿ ಹೂ ಮತ್ತು ಹಣ್ಣುಗಳ ಖರೀದಿ ತೀವ್ರಗೊಂಡಿದೆ.
ಭಾರೀ ಜನಸಂದಣಿ ಹಿನ್ನೆಲೆಯಲ್ಲಿ ಕೆಆರ್ ಮಾರ್ಕೆಟ್, ಹೂವಿನ ಮಾರ್ಕೆಟ್ ಹಾಗೂ ಅವೆನ್ಯೂ ರಸ್ತೆ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗಿದೆ. ಹೂವಿನ ಗಿಡಮಾರುಕಟ್ಟೆಗಳಲ್ಲಿ ಕನಕಾಂಬರ, ಮಲ್ಲಿಗೆ, ಸೇವಂತಿಗೆ, ಸುಗಂಧರಾಜ ಮತ್ತು ಚೆಂಡು ಹೂಗಳ ಖರೀದಿ ಉತ್ಸಾಹದಿಂದ ಸಾಗುತ್ತಿದೆ. ಸತತ ಮಳೆಯಿಂದ ಹೂ ಹಾಗೂ ಹಣ್ಣುಗಳ ಪೂರೈಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಬೆಲೆಗಳು ಏರಿಕೆಯಾಗಿದೆ.
ಹುಬ್ಬಳ್ಳಿ, ಬೆಳಗಾವಿ, ಮಂಗಳೂರು, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಮನೆ ಮನೆಗಳಲ್ಲಿ ದೀಪಾಲಂಕಾರ, ಪಟಾಕಿ ಸದ್ದು, ಸಿಹಿ ತಿಂಡಿಗಳ ಸುವಾಸನೆ ಪಸರಿಸಿದ್ದು ಹಬ್ಬದ ಸಂಭ್ರಮ ಜೋರಾಗಿದೆ.
ಆದರೆ ಬಾಗಲಕೋಟೆ, ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಯ ನೆರೆಪೀಡಿತ ಗ್ರಾಮಗಳಲ್ಲಿ ಮಳೆ ಹಬ್ಬದ ಉತ್ಸಾಹವನ್ನು ಕುಗ್ಗಿಸಿದೆ. ಅನೇಕ ಗ್ರಾಮಗಳಲ್ಲಿ ಮಳೆ ಮತ್ತು ಕೆಸರುಪಾಲಾದ ರಸ್ತೆಗಳು ಸಂಚಾರದ ಅಡಚಣೆಗೆ ಕಾರಣವಾಗಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa