ಕೋಲಾರ, ೧೯ ಅಕ್ಟೋಬರ್ (ಹಿ.ಸ) :
ಆ್ಯಂಕರ್ : ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿ, ಅವರಿಂದ ಕಳುವಾಗಿದ್ದ ಸುಮಾರು ರೂ.೧,೨೦,೦೦೦/- ಬೆಲೆ ಬಾಳುವ ೨ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಅಕ್ಟೋಬರ್ ೧೩ ರಂದು ದೂರುದಾರರಾದ ಆರಿಮಾನಹಳ್ಳಿ ಗ್ರಾಮದ ವಾಸಿ ಮುರಳಿ ಎಂಬುವರು ಮನೆಯ ಮುಂದೆ ನಿಲ್ಲಿಸಿದ್ದ ತನ್ನ ದ್ವಿಚಕ್ರ ವಾಹನವು ಕಳ್ಳತನವಾಗಿರುವ ಬಗ್ಗೆ ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿ, ತನಿಖೆ ನಡೆಸಲಾಗುತ್ತಿತ್ತು.
ಡಿವೈಎಸ್‌ಪಿ ¯ಕ್ಷö್ಮಯ್ಯ ಮತ್ತು ಕಾಮಸಮುದ್ರಂ ವೃತ್ತ ನಿರೀಕ್ಷಕರಾದ ನಾರಯಣಸ್ವಾಮಿ ಜಿ.ಸಿ. ರವರ ಮಾರ್ಗದರ್ಶನದಲ್ಲಿ ಕಾಮಸಮುದ್ರಂ ಪಿಎಸ್‌ಐ ಕಿರಣ್‌ಕುಮಾರ್ ಮತ್ತು ತಂಡದವರು ಕಾರ್ಯಾಚರಣೆ ನಡೆಸಿ ಆಂದ್ರಪ್ರದೇಶ ರಾಜ್ಯ ಜಿತ್ತೂರು ಜಿಲ್ಲೆಯ ವಾಸಿಗಳಾದ ವಿ.ಮಧು, ನಂದೀಶ್ ಮತ್ತು ಕಾರ್ತಿಕ್ ಎಂಬುವರನ್ನು ಬಂಧಿಸಿದರು. ವಿಚಾರಣೆಗೊಳಪಡಿಸಿದಾಗ ಬೆಂಗಳೂರಿನ ವೈಟ್‌ಫೀಲ್ಡ್ನಲ್ಲಿ ದ್ವಿಚಕ್ರ ವಾಹನವನ್ನು ಈಗಾಗಲೇ ಕಳ್ಳತನ ಮಾಡಿರುವ ವಿಚಾರ ಬೆಳಕಿಗೆ ಬಂದಿದ್ದು, ಆರೋಪಿಗಳು ಕಳವು ಮಾಡಿದ್ದ ರೂ.೧,೨೦,೦೦೦/- ಬೆಲೆ ಬಾಳುವ ೨ ದ್ವಿಚಕ್ರ ವಾಹನಗಳನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ ೨ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ದ ಕಾನೂನು ಕ್ರಮ ಜರುಗಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಕಾಮಸಮುದ್ರಂ ಪಿಎಸ್‌ಐ ಕಿರಣ್‌ಕುಮಾರ್, ಸಿಬ್ಬಂದಿಗಳಾದ ರಾಮಕೃಷ್ಣರೆಡ್ಡಿ, ಮುನಾವರ್‌ಪಾಷ, ಮಂಜುನಾಥರೆಡ್ಡಿ, ರಾಮರಾವ್, ಮಂಜುನಾಥ್, ಮಾರ್ಕೊಂಡ, ಲಕ್ಷö್ಮಣ್‌ತೇಲಿ ಹಾಗೂ ಜೀಪ್ ಚಾಲಕರಾದ ಗುರುಮೂರ್ತಿ ರವರುಗಳ ಉತ್ತಮ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ರವರು ಪ್ರಶಂಶಿಸಿದ್ದಾರೆ.
ಚಿತ್ರ : ಕೆಜಿಎಫ್ ಪೊಲೀಸ್ ಜಿಲ್ಲೆಯ ಕಾಮಸಮುದ್ರ ಪೊಲೀಸರು ಕಳುವಾಗಿದ್ದ ನಾಲ್ಕು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್