ಪೊಲೀಸರ ಗುಂಡೇಟು ; ರೌಡಿಶೀಟರ್‌ ಸಾವು
ವಿಜಯಪುರ, 18 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ರೌಡಿ ಶೀಟರ್ ಪೊಲೀಸರ ಗುಂಡಿಗೆ ಬಲಿಯಾಗಿರುವ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ರಾಂಪೂರ ಗ್ರಾಮದ ಹೊರ ಭಾಗದಲ್ಲಿ ನಡೆದಿದೆ. ಯುನಸ್ ಇಕ್ಲಾಸ್ ಪಟೇಲ್ (35) ಗುಂಡಿಗೆ ಬಲಿಯಾದ ರೌಡಿ ಶೀಟರ್. ನಟೋರಿಯಸ್ ಹಂತಕನಾಗಿದ್ದ ಯುನಸ್ ಪಟೇಲ್ ನಿನ್ನೆ ಓರ್
ಆರೋಪಿ


ವಿಜಯಪುರ, 18 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ರೌಡಿ ಶೀಟರ್ ಪೊಲೀಸರ ಗುಂಡಿಗೆ ಬಲಿಯಾಗಿರುವ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ರಾಂಪೂರ ಗ್ರಾಮದ ಹೊರ ಭಾಗದಲ್ಲಿ ನಡೆದಿದೆ.

ಯುನಸ್ ಇಕ್ಲಾಸ್ ಪಟೇಲ್ (35) ಗುಂಡಿಗೆ ಬಲಿಯಾದ ರೌಡಿ ಶೀಟರ್. ನಟೋರಿಯಸ್ ಹಂತಕನಾಗಿದ್ದ ಯುನಸ್ ಪಟೇಲ್ ನಿನ್ನೆ ಓರ್ವನಿಗೆ ಚಾಕೂ ತೋರಿಸಿ 25 ಸಾವಿರ ಹಣ ದರೋಡೆ ಮಾಡಿದ್ದನು. ಯುನಸ್

ನಂತರ ಆತನ ಸ್ಕೂಟಿ ಸಹ ದರೋಡೆ ಮಾಡಿ ಪರಾರಿಯಾಗಿದ್ದ.

ಈ ಕುರಿತು ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಯುನಸ್ ಆತನ ಸ್ವಗ್ರಾಮ ಆಲಮೇಲ ತಾಲೂಕಿನ ದೇವಣಗಾಂವ್ ಗ್ರಾಮದತ್ತ ತೆರಳುತ್ತಿರುವ ಮಾಹಿತಿ ಅರಿತ ಪೊಲೀಸರು ಸಿಂದಗಿ ತಾಲೂಕಿನ ರಾಂಪುರ್ ಬಳಿ ಆರೋಪಿ ಯೂನಿಸ್ ನನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ.

ಈ ವೇಳೆ ಪೊಲೀಸರ ಮೇಲೆ ಚಾಕೂನಿಂದ ಹಲ್ಲೆ ಮಾಡಲು ಯುನಸ್ ಯತ್ನಿಸಿದ್ದಾನೆ. ಇಬ್ಬರು ಪೊಲೀಸ್ ಕಾನ್ಸಸ್ಟೇಬಲ್ ಹಾಗೂ ಇನ್ಸಪೆಕ್ಟರ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.

ಆಯತಪ್ಪಿ ಬಿದ್ದ ಇನ್ಸಪೆಕ್ಟರ್ ಪ್ರದೀಪ್ ತಳಕೇರಿ, ಎಚ್ಚರಿಕೆ ನೀಡಲು ಗಾಳಿಯಲ್ಲಿ ಗುಂಡು‌ ಹಾರಿಸಿದ್ದಾರೆ.

ಆದರೂ ಶರಣಾಗದ ಆರೋಪಿ ಯುನಸ್ ಕಾಲಿಗೆ ಇನ್ಸಪೆಕ್ಟರ್ ಪ್ರದೀಪ್ ತಳಕೇರಿ ಗುಂಡೇಟು ನೀಡಿದ್ದಾರೆ.

ಆರೋಪಿಯನ್ನು ಸಿಂದಗಿ ತಾಲೂಕಾ ಅಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಜಿಲ್ಲಾ ಆಸ್ಪತ್ರೆಗೆ ರವಾನಿಸಿದರು.

ಆರೋಪಿ ಯುನಸ್ ಮೃತಪಟ್ಟಿದ್ದಾಗಿ ಜಿಲ್ಲಾಸ್ಪತ್ರೆಯಿಂದ ಮಾಹಿತಿ ಲಭ್ಯವಾಗಿದೆ‌. ಮೃತ ಆರೋಪಿ ಯುನಸ್ ಮೇಲೆ ಎರಡು ಕೊಲೆ ಪ್ರಕರಣ, ಒಂದು ಕೊಲೆ ಯತ್ನ, ಸೇರಿದಂತೆ 12 ಪ್ರಕರಣಗಳಿವೆ. ಈ‌ ಕುರಿತು ತನಿಖೆ ನಡೆಸಲಾಗುತ್ತದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande