ಸಿರಗುಪ್ಪ, 18 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಸಿರಗುಪ್ಪ ತಾಲ್ಲೂಕಿನಲ್ಲಿ ಆಪ್ಟಿಕಲ್ ಪ್ರೋಬ್ ಡಿವೈಸ್ ಮುಖಾಂತರ ಮೀಟರ್ ರೀಡಿಂಗ್ ಮಾಡಬೇಕಾಗಿರುವುದರಿಂದ ನೆಲದಿಂದ 5 ರಿಂದ 5.5 ಅಡಿ ಎತ್ತರದಲ್ಲಿ ಮೀಟರ್ ಅಳವಡಿಸುವಂತೆ ಜೆಸ್ಕಾಂನ ಸಿರಗುಪ್ಪ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಇಆರ್‌ಸಿ ಕಂಡಿಷನ್ ಆಫ್ ಸಪ್ಲೈ ನಿಯಮಾವಳಿಗಳ clause 4.04ರ ಕಂಡಿಕೆ (vii) ರನ್ವಯ ಎಲ್ಲಾ ಸ್ಥಾವರಗಳ ವಿದ್ಯುತ್ ಮೀಟರ್‌ಗಳನ್ನು ಸುಲಭವಾಗಿ ಮಾಪಕ ಓದಲು ಅನುಕೂಲವಾಗುವಂತೆ ಸ್ಥಾವರಗಳ ಪ್ರವೇಶದ್ವಾರದಲ್ಲಿ ನೆಲದಿಂದ 5 ರಿಂದ 5.5 ಅಡಿ (1.68 ಮೀಟರ್) ಎತ್ತರದಲ್ಲಿ ಅಳವಡಿಸುವುದು ಮತ್ತು ಈಗಾಗಲೇ ಬಳಕೆಯಲ್ಲಿರುವ ಮತ್ತು ನೂತನವಾಗಿ ನಿರ್ಮಿಸಿರುವ ಬಹುಮಹಡಿ ಕಟ್ಟಡಗಳು, ವಾಣಿಜ್ಯ ಕಟ್ಟಡಗಳ ವಿದ್ಯುತ್ ಮೀಟರ್‌ಗಳನ್ನು ಸಹ ನೆಲ ಮಹಡಿಯಲ್ಲಿ 5 ದಿನಗಳ ಒಳಗಾಗಿ ಅಳಡಿಸತಕ್ಕದ್ದು ಎಂಬ ಸೂಚನೆಗಳನ್ನು ನೀಡಲಾಗಿದೆ. ಸೂಚನೆಗಳನ್ನು ಪಾಲಿಸದೇ ಇದ್ದಲ್ಲಿ ಮುನ್ಸೂಚನೆ ನೀಡದೇ ಮನೆ/ಮಳಿಗೆಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ತಿಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್