ಆಗ್ನೇಯ ಪದವೀಧರರ ಕ್ಷೇತ್ರ ಮತದಾರರ ನೋಂದಣಿ
ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ನೋಂದಣಿ
ಚಿತ್ರ : ಕೋಲಾರ ಜಿಲ್ಲೆಯಾದ್ಯಂತ ಜೆಡಿಯು ಪಕ್ಷದ ಅಭ್ಯರ್ಥಿ ಹಾಗೂ ಪಕ್ಷದ ಯುವ ಘಟಕದ ರಾಜ್ಯ ಅಧ್ಯಕ್ಷ ಕಲ್ಲಂಡೂರು ಡಾ.ಕೆ.ನಾಗರಾಜ್ ಕಾಲೇಜುಗಳಿಗೆ ಶನಿವಾರ ಭೇಟಿ ನೀಡಿ ಆಗ್ನೇಯ ಪದವೀಧರ ಚುನಾವಣೆಗೆ ಸಂಬಂಧಿಸಿದಂತೆ ನೋಂದಣಿ ಪತ್ರಗಳನ್ನು ವಿತರಿಸಿ


ಕೋಲಾರ, 18 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ, ಜಯಶೀಲರನ್ನಾಗಿ ಮಾಡಿದರೆ ಶಿಕ್ಷಕರು ಮತ್ತು ಪದವೀಧರ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್ ನಲ್ಲಿ ಧ್ವನಿಯಾಗಿ ಕೆಲಸ ಮಾಡುತ್ತೇನೆ ಒಂದು ಅವಕಾಶ ನೀಡಿ ಎಂದು ಜೆಡಿಯು ಪಕ್ಷದ ಅಭ್ಯರ್ಥಿ ಹಾಗೂ ಪಕ್ಷದ ಯುವ ಘಟಕದ ರಾಜ್ಯ ಅಧ್ಯಕ್ಷ ಕಲ್ಲಂಡೂರು ಡಾ.ಕೆ.ನಾಗರಾಜ್ ಮನವಿ ಮಾಡಿದರು.

ಕೋಲಾರ ಜಿಲ್ಲೆಯಾದ್ಯಂತ ಕಾಲೇಜುಗಳಿಗೆ ಶನಿವಾರ ಭೇಟಿ ನೀಡಿ ಆಗ್ನೇಯ ಪದವೀಧರ ಚುನಾವಣೆಗೆ ಸಂಬಂಧಿಸಿದಂತೆ ನೋಂದಣಿ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು ಈ ಭಾಗದಲ್ಲಿ ಸಮಸ್ಯೆಗಳು ಹೆಚ್ಚಾಗಿವೆ ವಿಧಾನಸೌಧದಲ್ಲಿ ಪದವೀಧರ ಸಮುದಾಯವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಸಮರ್ಥರ ಕೊರತೆ ಇದೆ ಈ ಬಾರಿ ನನಗೆ ಅವಕಾಶ ನೀಡಿ ಬೆಂಬಲಿಸಿದರೆ ನಿಮ್ಮಗಳ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದರು.

ಸುಮಾರು ೧೫ ವರ್ಷಗಳಿಂದ ಶಿಕ್ಷಕರು ಮತ್ತು ಪದವೀಧರರ ಅನೇಕ ಸಮಸ್ಯೆಗಳ ಧ್ವನಿಯಾಗಿ ಬಂದಿದ್ದೇನೆ ಸುಮಾರು ವರ್ಷಗಳಿಂದ ಅತಿಥಿ ಉಪನ್ಯಾಸಕರ ಹೋರಾಟದಲ್ಲಿ ಜೊತೆಯಾಗಿದ್ದೇನೆ ರಾಜ್ಯದಲ್ಲಿ ಸುಮಾರು ೨.೮೦ ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಪದವೀಧರರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ದುಡಿಯುವ ಕೈಗಳಿಗೆ ಉದ್ಯೋಗ ಇಲ್ಲದಂತಾಗಿದೆ. ಇದನ್ನು ಹೋಗಲಾಡಿಸಬೇ ಕಾದರೆ ಈ ಬಾರಿಯ ಚುನಾವಣೆಯಲ್ಲಿ ಜೆಡಿಯು ಪಕ್ಷದ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸಿದರೆ ಖಂಡಿತವಾಗಿ ನಿಮ್ಮ ಋಣವನ್ನು ತೀರಿಸುವ ಕೆಲಸವನ್ನು ಮಾಡುತ್ತೇನೆ ಎಂದರು.

ಮುಂದಿನ ೨೦೨೬ ರ ಪದವೀಧರ ಚುನಾವಣೆಯಲ್ಲಿ ಮತ ಚಲಾಯಿಸಬೇಕಾದರೆ ಪದವಿ ಪೂರ್ಣಗೊಳಿಸಿರುವ ಪದವೀಧರರು ತಮ್ಮ ವ್ಯಾಪ್ತಿಯಲ್ಲಿನ ತಹಶಿಲ್ದಾರ್ ಕಚೇರಿಯ ಚುನಾವಣಾ ಶಾಖೆಯಲ್ಲಿ ಅರ್ಜಿ ನಮೂನೆ ಪಡೆದು ಮತದಾರರಾಗಿ ನೋಂದಣಿ ಮಾಡಿಸಿಕೊಳ್ಳಬೇಕು.ಇದಕ್ಕಾಗಿ ಜೆಡಿಯು ಪಕ್ಷದ ವತಿಯಿಂದ ಸಂಪೂರ್ಣ ಸಹಕಾರ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ ಪ್ರತಿಯೊಬ್ಬ ಪದವೀಧರರು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಎರಡು ಫೋಟೋ ಜೊತೆಗೆ ಗೆಜಿಟೆಡ್ ಅಧಿಕಾರಿಯ ದೃಢೀಕರಣ ಪ್ರತಿಗ ಳೊಂದಿಗೆ ನ.೬ ೨೦೨೫ರ ಒಳಗೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಡಾ.ಸಹನಾ, ಗ್ರಾಪಂ ಮಾಜಿ ಸದಸ್ಯ ನಂಜುಂಡಪ್ಪ, ಮಾಜಿ ನಗರಸಭಾ ಸದಸ್ಯ ಸುಬ್ರಮಣಿ, ನಿವೃತ್ತ ಮುಖ್ಯೋಪಾಧ್ಯಾಯ ದೊಡ್ಡ ವಿರಯ್ಯ, ಜೆಡಿಯು ಯುವ ಘಟಕದ ಜಿಲ್ಲಾ ಅಧ್ಯಕ್ಷ ನಾರಾಯಣಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಯಾರಭ್, ಮುಖಂಡರಾದ ನಾಗರಾಜ್, ಶೈಲೇಶ್, ಟಿ.ಸಿ ಮುನಿರಾಜು, ಲೋಹಿತ್ ಗೌಡ, ಮಹೇಶ್ ಗೌಡ, ಚೇತನ್ ಗೌಡ, ಡಾ.ಚೇತನ್, ಹರೀಶ್ ಗೌಡ, ಮೋಹನ್ ಗೌಡ, ಭಾರತಿ, ಸ್ವಾತಿ, ಸಂಜನ, ವಕೀಲರಾದ ಜಗನ್ನಾಥ್, ಹರೀಶ್ ಗೌಡ, ಶಿವಣ್ಣ ಇದ್ದರು.

ಚಿತ್ರ : ಕೋಲಾರ ಜಿಲ್ಲೆಯಾದ್ಯಂತ ಜೆಡಿಯು ಪಕ್ಷದ ಅಭ್ಯರ್ಥಿ ಹಾಗೂ ಪಕ್ಷದ ಯುವ ಘಟಕದ ರಾಜ್ಯ ಅಧ್ಯಕ್ಷ ಕಲ್ಲಂಡೂರು ಡಾ.ಕೆ.ನಾಗರಾಜ್ ಕಾಲೇಜುಗಳಿಗೆ ಶನಿವಾರ ಭೇಟಿ ನೀಡಿ ಆಗ್ನೇಯ ಪದವೀಧರ ಚುನಾವಣೆಗೆ ಸಂಬಂಧಿಸಿದಂತೆ ನೋಂದಣಿ ಪತ್ರಗಳನ್ನು ವಿತರಿಸಿದರು

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande