ರಾಯಚೂರು, 18 ಅಕ್ಟೋಬರ್(ಹಿ.ಸ.) :
ಆ್ಯಂಕರ್ : ನಗರದ ಮಾವಿನಕೆರೆಯ ರಸ್ತೆಯಲ್ಲಿ ಸುಮಾರು 39.00 ಲಕ್ಷ ರೂ.ಗಳ ವೆಚ್ಚದಲ್ಲಿ ರೇಸಿಂಗ್ ಪೈಪ್‌ಲೈನ್ ಜೋಡಣೆ ಕಾಮಗಾರಿಗೆ ರಾಯಚೂರಿನ ಮಹಾಪೌರರಾದ ನರಸಮ್ಮ ನರಸಿಂಹಲು ಮಾಡಿಗಿರಿ ಅವರು ಅಕ್ಟೋಬರ್ 17ರಂದು ಚಾಲನೆ ನೀಡಿದರು.
ಈ ಸಂದರ್ಭಲ್ಲಿ ಹಿರಿಯ ಸದಸ್ಯರಾದ ಜಯಣ್ಣ ಅವರು ಮಾತನಾಡಿ, ಸುಪ್ರಸಿದ್ಧ ಇತಿಹಾಸವುಳ್ಳ ಮಾವಿನಕೆರೆ ಅಭಿವೃದ್ಧಿಯ ಮುಂದುವರೆದ ಭಾಗವಾಗಿ ರಾಂಪುರ್ ಜಲಾಶಯದಿಂದ ಗಂಗಾ ನಿವಾಸದವರೆಗೆ ಹೊಸ ಮತ್ತು ಉತ್ತಮ ಗುಣಮಟ್ಟದ ಪೈಪ್‌ಲೈನ್ ಅಳವಡಿಸಲಾಗುತ್ತದೆ. ಇಲ್ಲಿನ ಹಳೆಯ ಪೈಪ್‌ಲೈನ್ ಪದೇಪದೆ ಲಿಕೇಜ್ ಮತ್ತು ದುರಸ್ತಿ ಬರುತ್ತಿತ್ತು. ಇದು ಅಧ್ಯಕ್ಷರು ಮತ್ತು ಸದಸ್ಯರ ಗಮನಕ್ಕೆ ಬಂದಿದ್ದರಿ0ದಾಗಿ ಹೊಸ ಪೈಪ್‌ಲೈನ್ ಜೋಡಣೆ ಕಾಮಗಾರಿಗೆ ಪೂಜೆ ನೆರವೇರಿಸಲಾಗಿದೆ. ಈ ಭಾಗದ ಜನರಿಗೆ ನೀರಿನ ಸಮಸ್ಯೆಯಾಗದ ನಿಟ್ಟಿನಲ್ಲಿ ಕಾಮಗಾರಿಯನ್ನು ಬೇಗನೇ ಕೈಗೆತ್ತಿಕೊಂಡು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಅವರು ಸ್ಥಳದಲ್ಲಿದ್ದ ಅಭಿಯಂತರರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ನರಸಿಂಹಲು ಮಾಡಿಗಿರಿ, ಅಬ್ದುಲ್ ವಹೀದ್, ಅಭಿಯಂತರಾದ ಅಲ್ಲಾವುದ್ದಿನ್ ಹಾಗೂ ಸಿಬ್ಬಂದಿ ಹಾಗೂ ಇನ್ನಿತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್