ಕಿತ್ತೂರು ಉತ್ಸವದ ಅಂಗವಾಗಿ ವಿಜಯಜ್ಯೋತಿ ಯಾತ್ರೆ
ಗದಗ, 13 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಸ್ವಾತಂತ್ರ್ಯ ಹೋರಾಟದ ವೀರರಾಣಿ ಕಿತ್ತೂರು ಚನ್ನಮ್ಮನವರ ಗೌರವಾರ್ಥ ಪ್ರತಿ ವರ್ಷ ಅಕ್ಟೋಬರ್ 23, 24 ಹಾಗೂ 25 ರಂದು ಕಿತ್ತೂರಿನ ಕೋಟೆ ಆವರಣದಲ್ಲಿ ಕಿತ್ತೂರು ಉತ್ಸವವನ್ನು ಆಚರಿಸಲಾಗುತ್ತಿದೆ. ಉತ್ಸವದ ಪೂರ್ವಭಾವಿಯಾಗಿ ವಿಜಯಜ್ಯೋತಿ ಯಾತ್ರೆಯು ರಾಜ್ಯದ ಜಿಲ
ಪೋಟೋ


ಗದಗ, 13 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಸ್ವಾತಂತ್ರ್ಯ ಹೋರಾಟದ ವೀರರಾಣಿ ಕಿತ್ತೂರು ಚನ್ನಮ್ಮನವರ ಗೌರವಾರ್ಥ ಪ್ರತಿ ವರ್ಷ ಅಕ್ಟೋಬರ್ 23, 24 ಹಾಗೂ 25 ರಂದು ಕಿತ್ತೂರಿನ ಕೋಟೆ ಆವರಣದಲ್ಲಿ ಕಿತ್ತೂರು ಉತ್ಸವವನ್ನು ಆಚರಿಸಲಾಗುತ್ತಿದೆ. ಉತ್ಸವದ ಪೂರ್ವಭಾವಿಯಾಗಿ ವಿಜಯಜ್ಯೋತಿ ಯಾತ್ರೆಯು ರಾಜ್ಯದ ಜಿಲ್ಲೆಗಳಿಗೆ ಸಂಚರಿಸುತ್ತಿದೆ,

ಅಕ್ಟೋಬರ್ 14 ರಂದು ಹಾವೇರಿಯಿಂದ ಮಧ್ಯಾಹ್ನ 3.30 ಗಂಟೆಗೆ ಗದಗ ಜಿಲ್ಲೆಗೆ ವಿಜಯ ಜ್ಯೋತಿಯು ಆಗಮಿಸಲಿದೆ.

ನಗರದ ಐ.ಬಿಯಲ್ಲಿ ವಿಜಯ ಜ್ಯೋತಿಯ ಪೂಜೆ ನೆರವೇರಲಿದೆ. ವಿಜಯಜ್ಯೋತಿ ಯಾತ್ರೆಯು ಮುಳಗುಂದ ನಾಕಾ ಮಾರ್ಗವಾಗಿ ಚೆನ್ನಮ್ಮ ವೃತ್ತಕ್ಕೆ ತಲುಪುವುದು.

ಸಂಜೆ 5.00 ಗಂಟೆಗೆ ವಿಜಯ ಜ್ಯೋತಿಯ ಯಾತ್ರೆಯ ಬೀಳ್ಕೊಡುಗೆ ಜರುಗಲಿದ್ದು ವಿಜಯ ಜ್ಯೋತಿಯ ಯಾತ್ರೆಯು ಲಕ್ಕುಂಡಿ ಐತಿಹಾಸಿಕ ಸ್ಥಳ, ಕೊಪ್ಪಳ, ವಿಜಯನಗರ ಮಾರ್ಗವಾಗಿ ಹಂಪಿಗೆ ಸಂಚರಿಸಲಿದೆ.

ಕನ್ನಡಾಭಿಮಾನಿಗಳು, ದೇಶಭಕ್ತರು ಸೇರಿದಂತೆ ಸಾರ್ವಜನಿಕರು ಯಾತ್ರೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande