ಹೆಚ್ ಎಂ ಪಿ ವಿ ವೈರಾಣು ಬಗ್ಗೆ ಭಯಪಡುವ ಅಗತ್ಯವಿಲ್ಲ
ನವದೆಹಲಿ, 9 ಜನವರಿ (ಹಿ.ಸ.) : ಆ್ಯಂಕರ್ : ಚೈನಾ ದೇಶದಲ್ಲಿ ಹೆಚ್ ಎಂ ಪಿ ವಿ ವೈರಾಣು ಕಾಣಿಸಿಕೊಂಡಿದ್ದು, ಭಾರತದಲ್ಲಿ ಈ ಹೆಚ್ ಎಂ ಪಿ ವಿ ವೈರಾಣು‌ನಿಂದ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಕರ್ನಾಟಕ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಈ ವೈರಾಣು ಪತ್ತೆಯಾದ ಬಳಿಕ ಈ ಬಗ್ಗೆ ಜನರಲ್ಲಿ ಇನ್ನೂ ಹೆಚ್ಚು
ಭಾರತದಲ್ಲಿ ಹರಡುತ್ತಿರುವ ಹೆಚ್ ಎಂ ಪಿ ವಿ ವೈರಾಣು! ಭಯಪಡುವ ಅಗತ್ಯವಿಲ್ಲ!


ನವದೆಹಲಿ, 9 ಜನವರಿ (ಹಿ.ಸ.) :

ಆ್ಯಂಕರ್ :

ಚೈನಾ ದೇಶದಲ್ಲಿ ಹೆಚ್ ಎಂ ಪಿ ವಿ ವೈರಾಣು ಕಾಣಿಸಿಕೊಂಡಿದ್ದು, ಭಾರತದಲ್ಲಿ ಈ ಹೆಚ್ ಎಂ ಪಿ ವಿ ವೈರಾಣು‌ನಿಂದ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಕರ್ನಾಟಕ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಈ ವೈರಾಣು ಪತ್ತೆಯಾದ ಬಳಿಕ ಈ ಬಗ್ಗೆ ಜನರಲ್ಲಿ ಇನ್ನೂ ಹೆಚ್ಚು ಆತಂಕ ಸೃಷ್ಟಿಯಾಗಿದೆ. ಏಕೆಂದರೆ ಐದು ವರ್ಷಗಳ ಹಿಂದೆ ಇಂತಹ ಚಳಿಗಾಲದಲ್ಲಿ ಕೊರೊನಾ ವೈರಾಣು ಚೀನಾಕ್ಕೆ ಅಪ್ಪಳಿಸಿದ ಬಳಿಕ ಭಾರತಕ್ಕೆ ಆಗಮಿಸಿ ಲಾಕ್‌ಡೌನ್‌ ಆಗಿತ್ತು.

ಇದೀಗ ಮತ್ತೆ ಲಾಕ್ ಡೌನ ಭೀತಿ ಜನರಲ್ಲಿ ಕಾಡುತ್ತಿದೆ

ಕೋವಿಡ್ ಸೋಂಕಿನ ಮಟ್ಟಿಗೆ ಈ ಕಾಯಿಲೆಗೆ ಹೆದರಬೇಡಿ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಇದಕ್ಕಾಗಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದಿದೆ. ಈ ವೈರಾಣು ಬಗ್ಗೆ ವಿಶೇಷ ಮಾಹಿತಿ ಇಲ್ಲಿದೆ.

ಎಚ್.ಎಂ.ಪಿ.ವಿ. ಅಂದರೆ ಏನು, ? ಅದು ಹೇಗೆ ಹರಡುತ್ತದೆ?

ಎಚ್.ಎಂ.ಪಿ.ವಿ. ಎಂದರೆ ಹ್ಯೂಮನ್ ಮೆಟಾಪ್ ನ್ಯುಮೋ ವೈರಸ್. ಕೊರೋನಾ ವೈರಾಣು ತರಹ ಅಪಾಯಕಾರಿ ಅಲ್ಲ. ಇದು ಪ್ಯಾರಾಮಿಕ್ಟೋ ವೈರಸ್ ಕುಟುಂಬಕ್ಕೆ ಸೇರಿದೆ. ಇದು ಮಾನವರಲ್ಲಿ ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದ ಮೇಲೆ ಪರಿಣಾಮ ಬೀರುವ ಸೋಂಕನ್ನು ಸೂಚಿಸುತ್ತದೆ. ಹೆಚ್ಚಿನ ಜನರು ಸಾಮಾನ್ಯ ಶೀತ ಅಥವಾ ಜ್ವರಕ್ಕೆ ಹೋಲುವ ರೋಗಲಕ್ಷಣಗಳನ್ನು ಹೊಂದಿರುತ್ತಾರೆ. ಈ ವೈರಾಣು ಅನ್ನು ಮೊದಲು 2001 ರಲ್ಲಿ ನೆದರ್ಲ್ಯಾಂಡ್ ನಲ್ಲಿ ಗುರುತಿಸಲಾಯಿತು. 1956 ರಲ್ಲಿಯೇ ವೈರಾಣು ಅನ್ನು ಕಂಡುಹಿಡಿಯಲಾಯಿತು ಎಂದು ಈ ವೈರಾಣು ವಿರುದ್ಧ ಬಿಡುಗಡೆಯಾದ ಕೆಲ ವೈದ್ಯಕೀಯ ಪತ್ರಿಕೆಯಲ್ಲಿ ಮಾಹಿತಿ ಇದೆ. ವೈರಾಣು ಇರುವವರ ಸಂಪರ್ಕಕ್ಕೆ ಬರುವ ಮೂಲಕ ಅಥವಾ ಅವರ ಲೋಳೆಯ ಹನಿಗಳು ಮೈ ಮೇಲೆ ಬಿದ್ದರೆ ಮತ್ತು ನೀವು ಅದರ ಮೇಲೆ ನಿಮ್ಮ ಕೈಗಳನ್ನು ಹಾಕಿದರೆ ಅವರ ಮೂಗು ಅಥವಾ ಬಾಯಿಯನ್ನು ಸ್ಪರ್ಶಿಸುವ ಮೂಲಕ ವೈರಾಣು ಹರಡುತ್ತದೆ.

ಎಚ್‌ಎಂಪಿವಿಯ ರೋಗಲಕ್ಷಣಗಳು ಯಾವುವು? ಸಾಮಾನ್ಯ ಲಕ್ಷಣಗಳೆಂದರೆ ಕೆಮ್ಮು, ಜ್ವರ ಮತ್ತು ಮೂಗು ಕಟ್ಟುವುದು. ಎರಡು ವರ್ಷದೊಳಗಿನ ಮಕ್ಕಳು ಸೇರಿದಂತೆ ಚಿಕ್ಕ ಮಕ್ಕಳು ಈ ವೈರಾಣುಗೆ ಹೆಚ್ಚು ಗುರಿಯಾಗುತ್ತಾರೆ. ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವವರು, ವಯಸ್ಸಾದವರು ಮತ್ತು ಮಾರಣಾಂತಿಕವಾಗಿ ಅನಾರೋಗ್ಯದಿಂದ ಬಳಲುತ್ತಿರುವ ಕ್ಯಾನ್ಸರ್ ರೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಸಿಂಗಾಪುರದ ಸಾಂಕ್ರಾಮಿಕ ರೋಗ ವೈದ್ಯ ಎಚ್‌ಸು ಲಿ ಯಾಂಗ್ ಹೇಳಿದ್ದಾರೆ. ಇದು ತುಂಬಾ ಗಂಭೀರ ಕಾಯಿಲೆಯಾಗಬಹುದು ಮತ್ತು ಉಸಿರಾಟದ ತೊಂದರೆ ಸೇರಿದಂತೆ ರೋಗಲಕ್ಷಣಗಳೊಂದಿಗೆ ಶ್ವಾಸಕೋಶದ ಹಾನಿಯನ್ನು ಉಂಟುಮಾಡಬಹುದು ಎಂದು ಅವರು ಹೇಳಿದರು. ಅನೇಕ ಜನರಿಗೆ ಆಸ್ಪತ್ರೆಯ ಮೇಲ್ವಿಚಾರಣೆಯ ಅಗತ್ಯವಿರಬಹುದು, ಆದರೆ ಸಾವಿನ ಅಪಾಯ ಕಡಿಮೆಯಾಗಿದೆ ಎಂದು ಎಚ್‌ಸು ಲಿ ಯಾಂಗ್ ಹೇಳಿದ್ದಾರೆ. ಎಚ್‌ಎಂಪಿವಿಯ ಚಿಕಿತ್ಸೆ ಏನು?

ವೈರಾಣುನಿಂದ ಚೇತರಿಸಿಕೊಳ್ಳಲು ಸಾಕಷ್ಟು ನೀರು ಸೇವನೆ ಮತ್ತು ವಿಶ್ರಾಂತಿ ಅತ್ಯಗತ್ಯ ಎಂದು ಕೇಂದ್ರ ಸರಕಾರ ಆರೋಗ್ಯ ಇಲಾಖೆ ಉಲ್ಲೇಖಿಸಿದೆ.

ಈ ವೈರಾಣು ಸೋಂಕನ್ನು ಸ್ವಯಂ ನಿಯಂತ್ರಣದಿಂದ ಗುಣಪಡಿಸಲಾಗುತ್ತದೆ. ಆಯಾಸವಾಗದಂತೆ ಕಾಳಜಿ ವಹಿಸುವುದು ಮತ್ತು ವಿಶ್ರಾಂತಿ ತೆಗೆದುಕೊಳ್ಳುವುದು ಉತ್ತಮ.

ಅಲ್ಲದೆ, ಈ ವೈರಾಣುನಿಂದ ಉಂಟಾಗುವ ರೋಗಲಕ್ಷಣಗಳಿಗೆ ಈಗಾಗಲೇ ಸಾಕಷ್ಟು ಚಿಕಿತ್ಸೆಗಳಿವೆ ಎಂದು ಕೇಂದ್ರ ಸರಕಾರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ಬಗ್ಗೆ ಮಾತನಾಡಿದ ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯ ಪೀಡಿಯಾಟ್ರಿಕ್ಸ್ ಮುಖ್ಯಸ್ಥ ಡಾ.ಸುರೇಶ್ ಗುಪ್ತಾ, ಸಾಮಾನ್ಯವಾಗಿ ಕೆಮ್ಮು ಮತ್ತು ನೆಗಡಿಗಾಗಿ ಬಳಸುವ ಔಷಧಿಗಳನ್ನು ಈ ಚಿಕಿತ್ಸೆಗೆ ನೀಡಲಾಗುತ್ತದೆ. ನಂತರ ರೋಗಿಯನ್ನು ವಿಶ್ರಾಂತಿ ಮಾಡಲು ಸೂಚಿಸಲಾಗುತ್ತದೆ ಎಂದು ಹೇಳಿದ್ದಾರೆ.ಸಾಮಾನ್ಯವಾಗಿ ಇದಕ್ಕಾಗಿ ಅವರನ್ನು ಆಸ್ಪತ್ರೆಗೆ ಸೇರಿಸಲು ಶಿಫಾರಸು ಮಾಡುವುದಿಲ್ಲ ಎಂದು ಅವರು ಹೇಳುತ್ತಾರೆ.

ಇದೊಂದು ಸೋಂಕು ತಾನಾಗಿಯೇ ಬಂದು ವಾಸಿಯಾಗುತ್ತದೆ. ಸೋಂಕಿನಿಂದ ಬಾಧಿತರಾದವರು ಸುಲಭವಾಗಿ ಜೀರ್ಣವಾಗುವ ದ್ರವರೂಪದ ಆಹಾರವನ್ನು ಸೇವಿಸಬೇಕು. ಕೇವಲ ಬಿಸಿನೀರು ಕುಡಿಯುವುದು ಉತ್ತಮ.

ಈ ವೈರಾಣುಗೆ ಯಾವುದೇ ಲಸಿಕೆ ಕಂಡುಬಂದಿಲ್ಲ ಮತ್ತು ಇನ್ನೂ ಈ ವೈರಾಣು ನಿಂದ ಸಾವಿನ ಪ್ರಮಾಣವು ವಿಶ್ವಾದ್ಯಂತ ಬಹಳ ಕಡಿಮೆಯಾಗಿದೆ ಎಂದು ಅವರು ಹೇಳಿದರು.

ಹರಡುವುದನ್ನು ತಡೆಯುವುದು ಹೇಗೆ? ಜನನಿಬಿಡ ಪ್ರದೇಶಗಳಲ್ಲಿ ಮುಖಕ್ಕೆ ಮಾಸ್ಕ್ ಧರಿಸುವುದು ಉತ್ತಮ. ಜನಸಂದಣಿ ಇರುವ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸುವುದು ಮತ್ತು ನಿಮ್ಮ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಉತ್ತಮ ಎಂದು ಕೇಂದ್ರ ಆರೋಗ್ಯ ಇಲಾಖೆ ಸಲಹೆ ನೀಡಿದೆ.

ಕೇಂದ್ರ ಆರೋಗ್ಯ ಇಲಾಖೆ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ, ಇತರ ಉಸಿರಾಟದ ಸೋಂಕುಗಳಿಗೆ ತಡೆಗಟ್ಟುವ ಕ್ರಮಗಳಾದ ಸೀನುವಾಗ ಮತ್ತು ಕೆಮ್ಮುವಾಗ ಬಾಯಿ ಮತ್ತು ಮೂಗನ್ನು ಬಟ್ಟೆಯಿಂದ ಮುಚ್ಚಿಕೊಳ್ಳುವುದು, ಆಗಾಗ್ಗೆ ಕೈ ತೊಳೆಯುವುದು, ಜನಸಂದಣಿ ಇರುವ ಸ್ಥಳಗಳಲ್ಲಿ ಮುಖಕ್ಕೆಮಾಸ್ಕ್ ನ್ನು ಧರಿಸುವುದು ಉತ್ತಮ ಎಂದು ಹೇಳಿದೆ.

ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುವ ತಪ್ಪು ಮಾಹಿತಿ, ಅವೈಜ್ಞಾನಿಕ ಮಾಹಿತಿ ಮತ್ತು ಭಯವು ಆತಂಕವನ್ನು ಉಂಟುಮಾಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆ , ಕೇಂದ್ರ ಮತ್ತು ರಾಜ್ಯ ಆರೋಗ್ಯ ಇಲಾಖೆಗಳು ಇತ್ಯಾದಿಗಳಿಂದ ಪ್ರಕಟಿಸಲಾದ ವೈಜ್ಞಾನಿಕ ಮಾಹಿತಿಯನ್ನು ಮಾತ್ರ ಅನುಸರಿಸಿ ಮತ್ತು ಸುಳ್ಳು ಪ್ರಚಾರ ಮತ್ತು ವದಂತಿಗಳನ್ನು ನಂಬಬೇಡಿ ಎಂದು ಕೇಂದ್ರ ಸರಕಾರ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ ಪಿ .ವಿ


 rajesh pande