ನವದೆಹಲಿ,8 ಜನವರಿ (ಹಿ.ಸ.) :
ಆ್ಯಂಕರ್ :
ನವದೆಹಲಿಯಲ್ಲಿಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, ಮಹಾಕುಂಭ ಮೇಳ ೨೦೨೫ಕ್ಕೆ ಸಮರ್ಪಿತವಾದ ಆಕಾಶವಾಣಿ ಮತ್ತು ದೂರದರ್ಶನದ ವಿಶೇಷ ಹಾಡನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಸಾರ ಭಾರತಿ ಅಧ್ಯಕ್ಷ ನವನೀತ್ ಕುಮಾರ್ ಸೆಹಗಲ್, ಪ್ರಸಾರ ಭಾರತೀ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೌರವ್ ದ್ವಿವೇದಿ, ದೂರದರ್ಶನ ಮಹಾ ನಿರ್ದೇಶಕ ಕಾಂಚನ್ ಪ್ರಸಾದ್ ಮತ್ತು ಆಕಾಶವಾಣಿಯ ಮಹಾನಿರ್ದೇಶಕಿ ಪ್ರಜ್ಞಾ ಪಲಿವಾಲ್ ಗೌರ್ ಉಪಸ್ಥಿತರಿದ್ದರು. ಮಹಾಕುಂಭ ಮೇಳವು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಇದೇ ೧೩ ರಿಂದ ಫೆಬ್ರವರಿ ೨೬ರವರೆಗೆ ನಡೆಯಲಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ ಪಿ .ವಿ