ಭುವನೇಶ್ವರ್,9 ಜನವರಿ (ಹಿ.ಸ.) :
ಆ್ಯಂಕರ್ :ಒಡಿಶಾದ ಭುವನೇಶ್ವರದಲ್ಲಿ ನಿನ್ನೆ ೧೮ನೇ ಪ್ರವಾಸಿ ಭಾರತೀಯ ದಿವಸ್ ಸಮಾವೇಶ ಆರಂಭಗೊಂಡಿದೆ.
ಇಂದು ಪ್ರಧಾನಿ ನರೇಂದ್ರ ಮೋದಿ ಅವರು, ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ದೇಶದ ಅಭಿವೃದ್ಧಿ ಮತ್ತು ಜಾಗತಿಕ ಮನ್ನಣೆಗೆ ಅನಿವಾಸಿ ಭಾರತೀಯ ಸಮುದಾಯ ನೀಡುತ್ತಿರುವ ಕೊಡುಗೆಗಳನ್ನು ಗುರುತಿಸಲಾಗುತ್ತಿದೆ. ’ವಿಕಸಿತ ಭಾರತಕ್ಕಾಗಿ ಅನಿವಾಸಿ ಭಾರತೀಯರ ಕೊಡುಗೆ’ ಎಂಬುದು ಈ ಬಾರಿಯ ಸಮಾವೇಶದ ಘೋಷವಾಕ್ಯವಾಗಿದೆ.
೭೫ ದೇಶಗಳ ಸುಮಾರು ಆರು ಸಾವಿರ ಅನಿವಾಸಿ ಭಾರತೀಯರು, ರಾಜ್ಯದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಅನಾವರಣಕ್ಕೆ ಸಾಕ್ಷಿಯಾಗಲಿದ್ದಾರೆ
---------------
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ ಪಿ .ವಿ