ನವದೆಹಲಿ,9 ಜನವರಿ (ಹಿ.ಸ.) :
ಆ್ಯಂಕರ್ :
ಉತ್ತರ ಭಾರತದಾದ್ಯಂತ ಶೀತ ವಾತಾವರಣ ಮುಂದುವರೆದಿದ್ದು
ಕೆಲವೆಡೆ ಚಳಿ ವಿಪರೀತವಾಗಿದೆ.ಉತ್ತರ ಪ್ರದೇಶದಹಲವು ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ದಟ್ಟವಾದ ಮಂಜು ಆವರಿಸಿದ್ದರಿಂದ ನಿವಾಸಿಗಳು ತತ್ತರಿಸಿದ್ದು, ಗೋಚರತೆ ಪ್ರಮಾಣ ಕುಸಿದಿದೆ. ಭಾರಿ ಚಳಿಯಿಂದ ಜನರು ರಸ್ತೆ ಬದಿ ಬೆಂಕಿ ಕಾಯಿಸಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಗುರುವಾರ ಬೆಳಿಗ್ಗೆ 7:30 ಕ್ಕೆ 7.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರಿಂದ ನಗರವು ಮಂಜಿನ ಪದರದಿಂದ ಆವರಿಸಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ. ಲಕ್ನೋದಲ್ಲಿ ತಾಪಮಾನ 7 ಡಿಗ್ರಿ ಸೆಲ್ಸಿಯಸ್ ಆಗಿತ್ತು. ತಾಪಮಾನ ಇಳಿಕೆ ಕಾಣುತ್ತಿದ್ದಂತೆ ಜನರು ಬೆಚ್ಚಗಿನ ಆಶ್ರಯಕ್ಕೆ ಮುಂದಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ, ಶೀತ ಅಲೆಯ ಪರಿಸ್ಥಿತಿ ಮುಂದುವರೆದಿದ್ದು, ಅನೇಕ ಪ್ರದೇಶಗಳಲ್ಲಿ ತಾಪಮಾನ ಶೂನ್ಯಕ್ಕಿಂತ ಕಡಿಮೆಯಾಗಿದೆ. ಶೀತ ಹವಾಮಾನದಿಂದಾಗಿ ದಾಲ್ ಸರೋವರದ ಮೇಲ್ಮೈ ಹೆಪ್ಪುಗಟ್ಟಿದೆ. ಬೆಳಿಗ್ಗೆ 8:30 ಕ್ಕೆ ಶ್ರೀನಗರದಲ್ಲಿ -3.2 ಡಿಗ್ರಿ ಸೆಲ್ಸಿಯಸ್, ಗುಲ್ಮಾರ್ಗ್‌ನಲ್ಲಿ -4.6 ಡಿಗ್ರಿ ಸೆಲ್ಸಿಯಸ್, ಪಹಲ್ಗಾಮ್‌ನಲ್ಲಿ -10.3 ಡಿಗ್ರಿ ಸೆಲ್ಸಿಯಸ್, ಬನಿಹಾಲ್‌ನಲ್ಲಿ 4.8 ಡಿಗ್ರಿ ಸೆಲ್ಸಿಯಸ್ ಮತ್ತು ಕುಪ್ವಾರಾದಲ್ಲಿ -3.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ ಪಿ .ವಿ